“ಮತಕ್ಕಾಗಿ ಮೋದಿ ಡ್ಯಾನ್ಸ್ ಬೇಕಾದ್ರೂ ಮಾಡುತ್ತಾರೆ!” – ಬಿಹಾರದಲ್ಲಿ ರಾಹುಲ್ ಗಾಂಧಿಯ ಲೇವಡಿ.

 “ಮತಕ್ಕಾಗಿ ಮೋದಿ ಡ್ಯಾನ್ಸ್ ಬೇಕಾದ್ರೂ ಮಾಡುತ್ತಾರೆ!” – ಬಿಹಾರದಲ್ಲಿ ರಾಹುಲ್ ಗಾಂಧಿಯ ಲೇವಡಿ.

ಪಾಟ್ನಾ: ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರವನ್ನು ಅಬ್ಬರದಿಂದ ಪ್ರಾರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ತೀವ್ರ ವಾಗ್ದಾಳಿಯನ್ನು ನಡೆಸಿದರು. ಮೋದಿ ಅವರು ಮತಗಳಿಗಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ರಾಹುಲ್ ಆರೋಪಿಸಿದರು. “ನೀವೇನಾದರೂ ನರೇಂದ್ರ ಮೋದಿಗೆ ಮತ ಹಾಕಬೇಕೆಂದರೆ ಅದಕ್ಕೆ ಬದಲಾಗಿ ನೃತ್ಯ ಮಾಡಲು ಹೇಳಿದರೆ ಪ್ರಧಾನಿ ಮೋದಿ ವೇದಿಕೆಯ ಮೇಲೆ ನೃತ್ಯ ಕೂಡ ಮಾಡುತ್ತಾರೆ” ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

ಬಿಹಾರದ ಮುಜಾಫರ್‌ಪುರದಲ್ಲಿ ಆರ್‌ಜೆಡಿ ನಾಯಕ ಮತ್ತು ಮಹಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರೊಂದಿಗೆ ಜಂಟಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಮೋದಿಯವರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಪ್ರಧಾನಿ ಮೋದಿ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಟೀಕಿಸಿದ ರಾಹುಲ್ ಗಾಂಧಿ ಇತ್ತೀಚೆಗೆ ಮುಕ್ತಾಯಗೊಂಡ ಬಿಹಾರಿಗಳ ಅತಿದೊಡ್ಡ ಹಬ್ಬವಾದ ಛತ್ ಪೂಜೆಯ ಬಗ್ಗೆಯೂ ಪ್ರಸ್ತಾಪಿಸಿದರು. “ದೆಹಲಿಯ ಕಲುಷಿತ ಯಮುನಾ ನದಿಯಲ್ಲಿ ಭಕ್ತರು ಮುಳುಗಿ ಪ್ರಾರ್ಥಿಸುತ್ತಾರೆ. ಆದರೆ, ಪ್ರಧಾನಿ ಮೋದಿ ಅವರಿಗಾಗಿ ವಿಶೇಷವಾಗಿ ನಿರ್ಮಿಸಲಾದ ಸ್ವಿಮ್ಮಿಂಗ್ ಪೂಲ್​ನಲ್ಲಿ ಸ್ನಾನ ಮಾಡಿ ಪೂಜೆ ಆಚರಿಸುತ್ತಾರೆ. ಅವರಿಗೆ ಜನರ ಮತಗಳಷ್ಟೇ ಬೇಕು” ಎಂದಿದ್ದಾರೆ.

20 ವರ್ಷಗಳ ಕಾಲ ಬಿಹಾರದ ಆಡಳಿತ ನಡೆಸುತ್ತಿದ್ದರೂ ಹಿಂದುಳಿದ ವರ್ಗಗಳಿಗೆ ಏನನ್ನೂ ಮಾಡಿಲ್ಲ ಎಂದು ನಿತೀಶ್ ಕುಮಾರ್ ಅವರನ್ನು ಕೂಡ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡರು. “ಮತಕಕ್ಆಗಿ ಬಿಜೆಪಿ ನಿತೀಶ್ ಕುಮಾರ್ ಅವರ ಹೆಸರು ಮತ್ತು ಮುಖವನ್ನು ಬಳಸಿಕೊಳ್ಳುತ್ತಿದೆ. ಅವರ ರಿಮೋಟ್ ಕಂಟ್ರೋಲ್ ಬಿಜೆಪಿಯ ಕೈಯಲ್ಲಿದೆ. ಅವರಿಗೂ ಸಾಮಾಜಿಕ ನ್ಯಾಯಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ರಾಹುಲ್ ಟೀಕಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *