ಹುಬ್ಬಳ್ಳಿ: ಕೂಡಲಸಂಗಮದ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ಅಸ್ವಸ್ಥರಾಗಿ ಆಸ್ಪತ್ರೆ ಸೇರುವಂತಾಗಿದ್ದಕ್ಕೆ ಕಾರಣ ವಿಷಪ್ರಾಶನ, ಅವರ ಆಹಾರದಲ್ಲಿ ವಿಷ ಬೆರೆಸಲಾಗಿತ್ತು ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹೇಳಿದರು.

ನಗರದಲ್ಲಿಂದು ಮಾತಾಡಿದ ಅವರು ಮಠಕ್ಕೆ ಇಬ್ಬರು ಮುಸ್ಲಿಂ ಯುವಕರ ಪ್ರವೇಶವಾಗಿತ್ತು, ಅವರು ಮಠಕ್ಕೆ ಬಂದುಹೋಗುವ ಜನರ ಮೇಲೆ ನಿಗಾ ಇಡುತ್ತಿದ್ದರು, ಮಠಕ್ಕೆ ಬರುವ ವಾಹನಗಳ ನೋಂದಣಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದರು, ಸ್ವಾಮೀಜೀಯವರು ಅಸ್ವಸ್ಥರಾದ ದಿನ ಈ ಯುವಕರು ಅಡುಗೆ ಕೋಣೆಗೆ ಹೋಗಿದ್ದರು ಎಂದು ಸ್ವಾಮೀಜಿ ತನಗೆ ಫೋನ್ ಮಾಡಿ ಹೇಳಿದ್ದರು ಎಂದು ಅರವಿಂದ್ ಬೆಲ್ಲದ್ ಹೇಳಿದರು. ಸ್ವಾಮೀಜಿ ಚೇತರಿಸಿಕೊಳ್ಳುತ್ತಿರುವರಾದರೂ ಇನ್ನೂ ಐಸಿಯುನಲ್ಲಿದ್ದಾರೆ ಎಂದು ಅರವಿಂದ್ ಬೆಲ್ಲದ್ ಹೇಳಿದರು.