ಮುಂಬೈ : ಮುಂಬೈ ಬೀದಿಗಳಲ್ಲಿ ‘ಟಾಮ್ ಆ್ಯಂಡ್ ಜೆರ್ರಿ’ಯಂತೆ ಒಟ್ಟಿಗೇ ಅಂಟಿಕೊಂಡು ಬೆಕ್ಕು ಮತ್ತು ಇಲಿ ಊಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಬಾಂಬೆ ಹೈಕೋರ್ಟ್ ಹೊರಗೆ ಬೆಕ್ಕುಗಳ ಗುಂಪಿನ ಮಧ್ಯೆ ಇಲಿ ಕೂಡ ಸೇರಿಕೊಂಡು ಊಟ ಮಾಡುತ್ತಿರುವುದನ್ನು ಕಾಣಬಹುದು. ಯಾವುದೇ ಭಯವಿಲ್ಲದೆ ಬೆಕ್ಕಿನ ಪಕ್ಕ ಬಂದು ಇಲಿ ಆಹಾರ ತಿನ್ನುವುದನ್ನು ಕಂಡು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.