ಮುಂಬೈ : ಸರಿಯಾದ ಸಮಯಕ್ಕೆ ಐದು ವರ್ಷದ ಮಗಳು ಮಲಗಲಿಲ್ಲವೆಂದು ತಂದೆ ಮಗಳನ್ನು ಕಟ್ಟಿ ಹಾಕಿ ಸಿಗರೇಟ್ ನಿಂದ ಸುಟ್ಟಿರುವಂತಹ ಘಟನೆ ಮುಂಬೈನಲ್ಲಿ ನಡೆದಿದೆ. ಏನು ತಿಳಿಯದ ಐದು ವರ್ಷದ ಬಾಲಕಿಗೆ ಚಿತ್ರಹಿಂಸೆ ನೀಡಿ ಸಿಗರೇಟ್ ನಿಂದ ಸುಡಲಾಗಿದೆ.

ಈ ಕೃತ್ಯ ಎಸಗಿದ್ದ ತಂದೆಗೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 115(2 )ಮತ್ತು 118(1) ಅಡಿಯಲ್ಲಿ ತನ್ನ ಮಗಳಿಗೆ ಅಪಾಯಕಾರಿ ವಸ್ತುಗಳಿಂದ ನೋವು ಉಂಟು ಮಾಡಿದಕ್ಕಾಗಿ ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಮಗುವಿನ ತಾಯಿ ಪೊಲೀಸರಿಗೆ ವಿಡಿಯೋ ಒಂದನ್ನು ಶೇರ್ ಮಾಡಿದ್ದು ಅದರಲ್ಲಿ ಆಕೆಯ ಪತಿ ತಮ್ಮ ಮಗಳಿಗೆ ಸಿಗರೇಟ್ ನಿಂದ ಸುಟ್ಟು ಚಿತ್ರ ಹಿಂಸೆ ಕೊಡುತ್ತಿರುವುದನ್ನು ನೋಡಬಹುದು ಈ ವಿಡಿಯೋ ನೋಡಿ ಪೊಲೀಸರು ದೂರು ದಾಖಲಿಸಿದ್ದಾರೆ ಸಿಗರೇಟ್ ನಿಂದ ಮಗುವಿನ ಕೆನ್ನೆಯನ್ನು ಸುಟ್ಟಿರುವುದು ವಿಡಿಯೋದಲ್ಲಿದೆ. ತಕ್ಷಣ ಕ್ರಮ ಕೈಗೊಂಡ ಪೊಲೀಸರು ಪ್ರಕರಣ ದಾಖಲಿಸಿ ತಂದೆಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.