ಮುಂಬೈ || ಪತ್ನಿ ತುಂಡರಿಸಿ ಸೂಟ್‍ಕೇಸ್‍ಗೆ ತುಂಬಿ, ಪುಣೆಯಲ್ಲಿ ವಿಷ ಸೇವಿಸಿದ್ದ ಹಂತಕ!

ಮುಂಬೈ || ಪತ್ನಿ ತುಂಡರಿಸಿ ಸೂಟ್‍ಕೇಸ್‍ಗೆ ತುಂಬಿ, ಪುಣೆಯಲ್ಲಿ ವಿಷ ಸೇವಿಸಿದ್ದ ಹಂತಕ!

ಮುಂಬೈ: ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ನಿಯನ್ನು ತುಂಡು ಮಾಡಿ ಸೂಟ್‍ಕೇಸ್‍ಗೆ ತುಂಬಿದ್ದ ಆರೋಪಿ ರಾಕೇಶ್ ಬಂಧನವಾಗಿದ್ದು, ಆತ ವಿಷ ಸೇವಿಸಿದ್ದಾನೆ ಎಂದು ತಿಳಿದು ಬಂದಿದೆ.

ಆರೋಪಿ ರಾಕೇಶ್ ವಿಷ ಕುಡಿದು ಪುಣೆಯ ಶಿರ್ವಾಲ್ ಪೊಲೀಸ್ ಠಾಣೆ ಬಳಿ ಅಸ್ವಸ್ಥನಾಗಿ ಬಿದ್ದಿದ್ದ. ಬಳಿಕ ಪೊಲೀಸರು ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇದರಿಂದಾಗಿ ಆರೋಪಿಯನ್ನ ಇಂದು (ಶುಕ್ರವಾರ) ಬೆಂಗಳೂರಿಗೆ ಕರೆದುಕೊಂಡು ಬರುವುದು ಅನುಮಾನವಾಗಿದೆ. ಪುಣೆ ಪೊಲೀಸರು ಆರೋಪಿಯ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬುಧವಾರ ರಾತ್ರಿ ಕೆಲಸದ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿತ್ತು. ಈ ವೇಳೆ ಪತಿ ಮೇಲೆ ಹತ್ಯೆಯಾದ ಗೌರಿ ಚಾಕು ಎಸೆದಿದ್ದಳು. ಅದೇ ಚಾಕುವಿನಿಂದ ಪತ್ನಿಯ ಹತ್ಯೆ ಮಾಡಿ ಹೊಟ್ಟೆ, ಕತ್ತು ಕತ್ತರಿಸಿ ಸೂಟ್ ಕೇಸ್‍ಗೆ ತುಂಬಿದ್ದ. ಕೂಡಲೇ ಪತ್ನಿಯ ಮೊಬೈಲ್ ಸ್ವಿಚ್ ಆಫ್ ಮಾಡಿ, ಮನೆಯಲ್ಲಿ ಊಟ ಮಾಡಿದ್ದ. ಬಳಿಕ ರಾತ್ರಿ 11 ಗಂಟೆಗೆ ಕಾರಿನಲ್ಲಿ ಮೃತದೇಹ ಸಾಗಿಸುವ ಪ್ಲ್ಯಾನ್ ಮಾಡಿದ್ದ. ಆದರೆ ಅದು ಸಕ್ಸಸ್ ಆಗೋದಿಲ್ಲ. ಬಳಿಕ ಬಾತ್ ರೂಮ್‍ನಲ್ಲಿ ಮೃತದೇಹ ಇಟ್ಟು ರಾಕೇಶ್ ಪರಾರಿಯಾಗಿದ್ದ.

ಹತ್ಯೆಯಾದ 16 ಗಂಟೆಗಳ ಬಳಿಕ ಆರೋಪಿಯೇ ಪಕ್ಕದ ಮನೆಯ ಬಾಡಿಗೆದಾರನಿಗೆ ಕರೆ ಮಾಡಿ, ವಿಚಾರ ಹೇಳಿದ್ದ. ನಂತರ ಮೃತಳ ಕುಟುಂಬಸ್ಥರಿಗೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದ. ಬಳಿಕ ಮನೆಯ ಮಾಲೀಕರಿಗೆ ಮಾಹಿತಿ ದೊರೆತಿದ್ದು, ಪೊಲೀಸರಿಗೆ ಮಾಹಿತಿ ನಿಡಲಾಗಿತ್ತು.

ರಾಕೇಶ್ ಹತ್ಯೆ ಮಾಡಿ ಪರಾರಿಯಾಗಿದ್ದ ಬಗ್ಗೆ ಸಿಡಿಆರ್ ಆಧರಿಸಿ ಹುಳಿಮಾವು ಪೊಲೀಸರು ಪುಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರೋಪಿ ಪತ್ತೆಯಾದ ವಿಚಾರ ತಿಳಿಯುತ್ತಿದ್ದಂತೆ ಹುಳಿಮಾವು ಪೊಲೀಸರ ತಂಡ ಪುಣೆಗೆ ತೆರಳಿದೆ.

Leave a Reply

Your email address will not be published. Required fields are marked *