ಅನಾಥ ಶವವನ್ನು ಕಸದ ಟ್ರಾಲಿಯಲ್ಲಿ ಸ್ಮಶಾನಕ್ಕೆ ಕರೆದುಕೊಂಡು ಹೋದ ಪುರಸಭೆ ಸಿಬ್ಬಂದಿ!

ಅನಾಥ ಶವವನ್ನು ಕಸದ ಟ್ರಾಲಿಯಲ್ಲಿ ಸ್ಮಶಾನಕ್ಕೆ ಕರೆದುಕೊಂಡು ಹೋದ ಪುರಸಭೆ ಸಿಬ್ಬಂದಿ!

ಪಂಜಾಬ್: ಕೆಲವರು ಯಾರೂ ಇಲ್ಲದೆ ಅನಾಥರಾಗುತ್ತಾರೆ ಇನ್ನೂ ಕೆಲವರು ಎಲ್ಲರೂ ಇದ್ದೂ ಕೂಡ ಅನಾಥರಾಗುತ್ತಾರೆ. ವ್ಯಕ್ತಿಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಸಂಬಂಧಿಕರು ಯಾರಾದರೂ ಇದ್ದಾರೋ ಇಲ್ಲವೋ ಎಂಬುದು ಯಾರಿಗೂ ತಿಳಿದಿಲ್ಲ, ಆಪ್ತರು ಯಾರೂ ಜತೆಗಿಲ್ಲ ಅಂತಿಮವಾಗಿ ಕಸದ ಟ್ರಾಲಿಯನ್ನು ಶವವನ್ನು ಸ್ಮಶಾನಕ್ಕೆ ಸಾಗಿಸಿರುವ ಘಟನೆ ಪಂಜಾಬ್​ನ ಫಾಗ್ವಾರಾದಲ್ಲಿ ನಡೆದಿದೆ. ಕಸ ಸಂಗ್ರಹಿಸಲು ಬಳಸುವ ಪುರಸಭೆ ವಾಹನದಲ್ಲಿ ಶವವನ್ನು ಸಾಗಿಸಲಾಯಿತು.

ಫಾಗ್ವಾರಾ ಸಿವಿಲ್ ಆಸ್ಪತ್ರೆಯಲ್ಲಿ ಅನಾಥ ಶವವನ್ನು ಕಸದ ಟ್ರಾಲಿಗೆ ಹಾಕುತ್ತಿರುವ ವಿಡಿಯೋವನ್ನು ವ್ಯಕ್ತಿಯೊಬ್ಬರು ಚಿತ್ರೀಕರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಅದರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ರೈಲ್ವೆ ನಿಲ್ದಾಣದಲ್ಲಿ ಶವ ಪತ್ತೆಯಾಗಿತ್ತು.

ಘಟನೆಯ ಬಗ್ಗೆ ಕೇಳಿದಾಗ, ಪುರಸಭೆಯ ವಾಹನದ ಚಾಲಕ, ವಾಹನವನ್ನು ಬಳಸಿಕೊಂಡು ವಾರಸುದಾರರಿಲ್ಲದ ಶವಗಳನ್ನು ಸ್ಮಶಾನಕ್ಕೆ ಸಾಗಿಸುವುದು ವಾಡಿಕೆಯ ಅಭ್ಯಾಸ ಎಂದು ಹೇಳಿದ್ದಾರೆ. ನಗರಸಭೆ ಅಧಿಕಾರಿಗಳಿಂದ ನಮಗೆ ಯಾವುದೇ ಸೌಲಭ್ಯಗಳು ಸಿಗದ ಕಾರಣ ನಾವು ಅಸಹಾಯಕರಾಗಿದ್ದೇವೆ ಎಂದು ಚಾಲಕ ಹೇಳಿದರು.

ಆಸ್ಪತ್ರೆ ಸಿಬ್ಬಂದಿ ಹೇಳುವಂತೆ ಶವವು ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ನಂತರ ಅದನ್ನು ಕಸ ಸಂಗ್ರಹಿಸುವ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಯಾರೂ ಶವವನ್ನು ಪಡೆಯಲು ಬಾರದ ಕಾರಣ, ಆಸ್ಪತ್ರೆಯು ಕಸದ ಟ್ರಾಲಿಯಲ್ಲಿ ಶವವನ್ನು ಸ್ಮಶಾನಕ್ಕೆ ಸಾಗಿಸಿತು.

ಈ ವಿಷಯದ ಬಗ್ಗೆ ಆಸ್ಪತ್ರೆಯ ಸಿವಿಲ್ ಸರ್ಜನ್‌ಗೆ ಪತ್ರ ಬರೆದು ವರದಿ ಕೋರಿದ್ದೇನೆ ಎಂದು ಫಾಗ್ವಾರಾ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಜಶಾನ್‌ಜಿತ್ ಸಿಂಗ್ ಹೇಳಿದ್ದಾರೆ. ಆದಾಗ್ಯೂ, ಆಸ್ಪತ್ರೆಯಲ್ಲಿ ಸರ್ಕಾರಿ ಆಂಬ್ಯುಲೆನ್ಸ್ ಇದ್ದು, ಅದನ್ನು ಏಕೆ ಬಳಸಿಕೊಂಡಿಲ್ಲ ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಕಸ ಸಂಗ್ರಹಿಸುವ ವಾಹನದಲ್ಲಿ ಶವಗಳನ್ನು ಸಾಗಿಸಬಾರದು ಎಂದು ಅಧಿಕಾರಿ ಒಪ್ಪಿಕೊಂಡರು.

ಕಸ ಸಂಗ್ರಹಿಸುವ ವಾಹನದಲ್ಲಿ ಶವಗಳನ್ನು ಸಾಗಿಸುವ ಪದ್ಧತಿಯ ಬಗ್ಗೆ ತಮಗೆ ತಿಳಿದಿಲ್ಲ ಎಂದು ಫಾಗ್ವಾರಾ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ರಾಂಪಾಲ್ ಉಪ್ಪಲ್ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮತ್ತು ಹೊಣೆಗಾರರನ್ನು ಗುರುತಿಸಲು ತನಿಖೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *