ಮುಸ್ಲಿಂ ವ್ಯಕ್ತಿ ಒಂದಕ್ಕಿಂತ ಹೆಚ್ಚು ವಿವಾಹ ನೋಂದಣಿ ಮಾಡಬಹುದು: ಹೈಕೋರ್ಟ್

ಮುಸ್ಲಿಂ ವ್ಯಕ್ತಿ ಒಂದಕ್ಕಿಂತ ಹೆಚ್ಚು ವಿವಾಹ ನೋಂದಣಿ ಮಾಡಬಹುದು: ಹೈಕೋರ್ಟ್

ಬಾಂಬೆ: ಮುಸ್ಲಿಂ ವ್ಯಕ್ತಿ ಒಂದಕ್ಕಿಂತ ಹೆಚ್ಚು ವಿವಾಹಗಳನ್ನು ನೋಂದಣಿ ಮಾಡಬಹುದು ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

ಮುಸ್ಲಿಂ ವೈಯಕ್ತಿಕ ಕಾನೂನುಗಳಲ್ಲಿ ಒಂದಕ್ಕಿಂತ ಹೆಚ್ಚು ವಿವಾಹವಾಗುವುದಕ್ಕೆ ಅವಕಾಶ ಇರುವುದರಿಂದ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿ ಒಂದಕ್ಕಿಂತ ಹೆಚ್ಚು ವಿವಾಹ ನೋಂದಣಿ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದ್ದು, 3 ನೇ ವಿವಾಹವನ್ನು ನೋಂದಣಿ ಮಾಡಿಕೊಳ್ಳಲು ಅನುಮತಿ ಕೋರಿದ್ದ ವ್ಯಕ್ತಿಯ ಅರ್ಜಿಯನ್ನು ಪುರಸ್ಕರಿಸಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಅಲ್ಜೀರಿಯಾದ ಮಹಿಳೆಯೊಂದಿಗೆ ತನ್ನ ಮೂರನೇ ವಿವಾಹವನ್ನು ನೋಂದಾಯಿಸಲು ಕೋರಿ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿಯನ್ನು ನಿರ್ಧರಿಸಲು ನ್ಯಾಯಮೂರ್ತಿಗಳಾದ ಬಿ ಪಿ ಕೊಲಬಾವಾಲ್ಲಾ ಮತ್ತು ಸೋಮಶೇಖರ್ ಸುಂದರೇಶನ್ ಅವರ ವಿಭಾಗೀಯ ಪೀಠ ಅಕ್ಟೋಬರ್ 15 ರಂದು ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ನ ಉಪ ವಿವಾಹ ನೋಂದಣಿ ಕಚೇರಿಗೆ ನಿರ್ದೇಶನ ನೀಡಿತು.

ದಂಪತಿಗಳು ತಮ್ಮ ಮನವಿಯಲ್ಲಿ, ಇದು ಪುರುಷನ ಮೂರನೇ ವಿವಾಹವಾಗಿರುವುದರಿಂದ ತಮ್ಮ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಆರೋಪಿಸಿ, ಮದುವೆ ಪ್ರಮಾಣಪತ್ರವನ್ನು ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲು ಕೋರಿದರು

Leave a Reply

Your email address will not be published. Required fields are marked *