ಬೆಂಗಳೂರು: ಈ ವರ್ಷದ ಮೈಸೂರು ದಸರಾವನ್ನು ಉದ್ಘಾಟಿಸಲು ಲೇಖಕಿಯಾಗಿರುವ ಬಾನು ಮುಸ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಸರ್ಕಾರದ ಈ ಆಯ್ಕೆಗೆ ಹಿಂದೂಪರ ಹಾಗೂ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂ ವ್ಯಕ್ತಿಯೋರ್ವರಿಂದ ಉದ್ಘಾಟಿಸಬೇಕೆಂದು ಆಗ್ರಹಿಸಿವೆ. ಇದಕ್ಕೆ ಮುಸ್ಲಿಂ ಮುಖಂಡರು ಪ್ರತಿಕ್ರಿಯಿಸಿದ್ದು, ಬಾನು ಮುಸ್ತಾಕ್ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. 1442ರಲ್ಲಿ ಮೊದಲ ಬಾರಿಗೆ ದಸರಾ ಬಗ್ಗೆ ಬರೆದಿದ್ದು ಮುಸ್ಲಿಮರು. ಆನೆಗಳಿಗೆ ಅಂಬಾರಿ ಕಟ್ಟೋದು ಇವತ್ತಿಗೂ ಮುಸ್ಲಿಮರು ಎಂದು ಬೆಂಗಳೂರಿನಲ್ಲಿ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಬ್ದುಲ್ ರಜಾಕ್, ಬಾನು ಮುಷ್ತಾಕ್ ಕನ್ನಡಕ್ಕೆ ಬೂಕರ್ ಪ್ರಶಸ್ತಿ ತಂದ ಹೆಮ್ಮೆಯ ಕನ್ನಡತಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ತಂದು ಕೊಟ್ಟ ಮಹಿಳೆಗೆ ಆಹ್ವಾನ ಕೊಟ್ಟಿದ್ದಾರೆ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ರನ್ನು ಸಿಎಂ ಆಹ್ವಾನಿಸಿದ್ದಾರೆ. ದಸರಾ ಉದ್ಘಾಟನೆ ವಿಚಾರದಲ್ಲಿ ಬಾನುಗೆ ಫತ್ವಾ ಹೊರಡಿಸಲು ಬರಲ್ಲ ಎಂದರು.
ಇದು ಹೇಗೆ ಧಾರ್ಮಿಕ ಹಬ್ಬ ಆಗುತ್ತೆ? ಇದು ನಾಡಹಬ್ಬ
1442ರಲ್ಲಿ ಮೊದಲ ಬಾರಿಗೆ ದಸರಾ ಬಗ್ಗೆ ಬರೆದಿದ್ದು ಮುಸ್ಲಿಮರು. ಮಿರ್ಜಾ ಇಸ್ಲಾಯಿಲ್ ಬೆಂಗಳೂರಿಗೆ ಅನೇಕ ಕೊಡುಗೆ ನೀಡಿದ್ದಾರೆ. ಆಗ ಮೈಸೂರು ಒಡೆಯರ್ ಅವರನ್ನೇ ಕರೆದು ದಸರಾ ಮಾಡಲಿಲ್ವಾ? ಇಮಾಮ್ ದರ್ಗಾಗೆ ಆನೆಗಳು ಬಂದು ಹೋದ ಬಳಿಕ ದಸರಾ ನಡೆಯುವುದು. ಆನೆಗಳಿಗೆ ಅಂಬಾರಿ ಕಟ್ಟೋದು ಇವತ್ತಿಗೂ ಮುಸ್ಲಿಮರು. ಕವಿ ಕೆ.ಎಸ್.ನಿಸಾರ್ ಅಹ್ಮದ್ ದಸರಾ ಉದ್ಘಾಟನೆ ವೇಳೆ ಆಗ ಪ್ರಸ್ತಾವಿಲ್ಲ. ಸುದ್ದಿಯಲ್ಲಿ ಇರಬೇಕೆಂದು ಪ್ರತಾಪ್ ಸಿಂಹ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈ ರಾಜ್ಯ ಸರ್ವಜನಾಂಗದ ಶಾಂತಿಯ ತೋಟ. ರಾಜರ ಕಾಲದಲ್ಲಿ ಯುದ್ದಕ್ಕೆ ಹೋಗುವ ಮೊದಲು ಇಮಾಮ್ದಾರಿ ದರ್ಗಾಕ್ಕೆ ಬಂದು ಹೋಗುತ್ತಿದ್ದರು. ಇದು ಹೇಗೆ ಧಾರ್ಮಿಕ ಹಬ್ಬ ಆಗುತ್ತೆ? ಇದು ನಾಡಹಬ್ಬ. ಈ ತೋಟವನ್ನು ಸ್ಮಶಾನ ಮಾಡಲು ಹೊರಟಿರುವುದು ಪ್ರತಾಪ್ ಸಿಂಹ ಎಂದು ಕಿಡಿಕಾರಿದರು.
ಈ ವಿಚಾರಕ್ಕೆ ಫತ್ವಾ ಹೊರಡಿಸಬೇಕಾಗಿಲ್ಲ
ಹಜರತ್ ಮೌಲಾನಾ ಡಾ.ಮಕ್ಸೂದ್ ಇಮ್ರಾನ್ ಮಾತನಾಡಿ, ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಹೋಗಬಾರದು ಎನ್ನುವುದು ತಪ್ಪು.ಈ ವಿಚಾರಕ್ಕೆ ಫತ್ವಾ ಹೊರಡಿಸಬೇಕಾಗಿಲ್ಲ. ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿ ಎಲ್ಲರೂ ಒಗ್ಗಟ್ಟಾಗಿದ್ದಾರೆ. ಇಲ್ಲಿ ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಎಲ್ಲವೂ ಇದೆ. ನಮ್ಮಲ್ಲಿ ಯಾವುದೇ ಭೇದ ಭಾವ ಇಲ್ಲ. ಮಸೀದಿಗೆ ಶಾಸಕ ಉದಯ್ ಗರುಡಾಚಾರ್ ನಮಾಜ್ ಮಾಡ್ತಾರೆ. ಹಾಗಂತ ಶಾಸಕ ಉದಯ್ ಗರುಡಾಚಾರ್ ಮುಸ್ಲಿಮರಾಗುತ್ತಾರಾ? ಅನೇಕ ಮುಸ್ಲಿಮರು ದೇಗುಲಕ್ಕೆ ಹೋಗುತ್ತಾರೆ, ಅವರು ಹಿಂದೂಗಳಾಗ್ತಾರಾ? ದರ್ಗಾಕ್ಕೆ ಪ್ರಧಾನಿ ಮೋದಿ ಚಾದರ ಕಳಿಸುತ್ತಾರೆ ಅವರು ಮುಸ್ಲಿಂ ಆಗುತ್ತಾರಾ? ದರ್ಗಾಗೆ ಬರಬೇಕಾದ್ರೆ ಮುಸ್ಲಿಂ ಆಗಲೇ ಬೇಕು ಅಂತ ಇಲ್ಲ. ಹಿಂದೂ ಆದ್ರೆ ಮಾತ್ರ ದೇವಸ್ಥಾನಕ್ಕೆ ಹೋಗಬೇಕೆಂದಿಲ್ಲ. ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಕರೆದಿದ್ದಾರೆ. ಹೋಗುವುದು ಬಿಡುವುದು ಅವರ ಇಷ್ಟ. ಆದರೆ ಸಾಹಿತಿ ಬಾನು ಮುಷ್ತಾಕ್ ಅವರನ್ನ ಹೋಗಬಾರದು ಎನ್ನುವುದು ತಪ್ಪು ಎಂದು ಹೇಳಿದರು.
For More Updates Join our WhatsApp Group :