ಹೊಸ ಸೊಸೆನ ಹೊಗಳ್ತಾ ಇಂಥಾ ಮಾತನ್ನೋದ ನಾಗಾರ್ಜುನ: ಸಮಂತಾ ಗ್ರೇಟ್ ಎಸ್ಕೇಪ್ ಎಂದ ನೆಟ್ಟಿಜನ್ಸ್

ಹೊಸ ಸೊಸೆನ ಹೊಗಳ್ತಾ ಇಂಥಾ ಮಾತನ್ನೋದ ನಾಗಾರ್ಜುನ: ಸಮಂತಾ ಗ್ರೇಟ್ ಎಸ್ಕೇಪ್ ಎಂದ ನೆಟ್ಟಿಜನ್ಸ್

ಟಾಲಿವುಡ್‌ ಹಿರಿಯ ನಟ ನಾಗಾರ್ಜುನ್ ಅವರ ಪುತ್ರ ನಾಗಚೈತನ್ಯ , ನಟಿ ಶೋಭಿತಾ ಜೊತೆ ಇತ್ತೀಚೆಗೆ ಎರಡನೇ ಬಾರಿ ಅದ್ದೂರಿಯಾಗಿ ಹೈದರಾಬಾದ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ವಿಚಾರ ಎಲ್ಲರಿಗೂ ಗೊತ್ತು. ಆದರೆ ಹೊಸ ಸೊಸೆಯನ್ನು ಹೊಗಳ್ತಾ ಹೊಗಳ್ತಾ ಈ ವಿಚಾರ ನಾನು ಹೇಳಬಾರದು ಎನ್ನುತ್ತಲೇ ವಿಚಾರವೊಂದನ್ನು ಹೇಳಿದ್ದು, ಇದೇ ಕಾರಣಕ್ಕೆ ಸಖತ್ ಟ್ರೋಲ್ ಆಗ್ತಿದ್ದಾರೆ.

ನಾಗಚೈತನ್ಯ ಹಾಗೂ ಶೋಭಿತಾ ಧೂಲಿಪಾಲ ಅವರು ಡಿಸೆಂಬರ್ 4 ರಂದು ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದು, ಮದ್ವೆಯ ನಂತರ ನವದಂಪತಿ ಶ್ರೀಶೈಲಂ ದೇಗುಲಕ್ಕೆ ಭೇಟಿ ನೀಡಿದ್ದರು. ಈ ವೇಳೆ ಶೋಭಿತಾ ಅರ್ಚಕರ ಬಳಿ ಆರತಿ ತೆಗೆದುಕೊಂಡು ಕುಂಕುಮ ಹಾಕುತ್ತಿದ್ದರೆ, ಇತ್ತ ನಾಗಚೈತನ್ಯ ಆ ಪಕ್ಕದಲ್ಲಿದ್ದರು ಸೊಸೆಯ ಕೂದಲನ್ನು ಸರಿ ಪಡಿಸಿದ್ದರು. ಈ ವಿಚಾರವೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗಿತ್ತು. ಆ ಸಂದರ್ಭದಲ್ಲಿ  ಶೋಭಿತಾ ಕೂದಲನ್ನು ಸರಿಪಡಿಸುವ ಅಗತ್ಯವಿಲ್ಲದಿದ್ದರೂ ನಾಗಚೈತನ್ಯ ಶೋ ಆಫ್ ಮಾಡುತ್ತಿದ್ದಾರೆ. ಅಗತ್ಯವಿಲ್ಲದಿದ್ದರೂ ಕಾಳಜಿ ವಹಿಸುತ್ತಿದ್ದಾರೆ. ಈ ಮದುವೆಯಿಂದ ಮಗನಿಗಿಂತ ಅಪ್ಪ ಹೆಚ್ಚು ಖುಷಿಯಾಗಿರುವಂತೆ ಕಾಣಿಸುತ್ತಿದೆ ಎಂದೆಲ್ಲಾ ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಇದರ ಜೊತೆಗೆ ಕೆಲವರು ಇನ್ನೂ ಮುಂದೆ ಹೋಗಿ ಆಕೆ ಮದ್ವೆಯಾಗಿದ್ದು ಯಾರನ್ನು ಎಂದು ಪ್ರಶ್ನೆ ಮಾಡಿದ್ದರು. ಆಕೆಯ ಗಂಡ ಯಾರು ನಾಗಾರ್ಜುನ ಏಕೆ ಆಕೆಯ ತಲೆಕೂದಲನ್ನು ಸರಿಪಡಿಸಬೇಕು ಎಂದು ಪ್ರಶ್ನೆ ಮಾಡಿದ್ದರು. ನಾಗಾರ್ಜುನ ಅವರಿಗೆ ಸಂಬಂಧದ ಲಿಮಿಟ್‌ಗಳ ಬಗ್ಗೆ ಗೊತ್ತೆ ಇಲ್ಲ ಎಂದು ಕಾಮೆಂಟ್ ಮಾಡಿದ್ದರು.

ಹೀಗಿರುವಾಗ ಈಗ ನಾಗಾರ್ಜುನ ಅವರು  ತಮ್ಮ ಭಾವಿ ಸೊಸೆಯಾಗಿದ್ದ ಶೋಭಿತಾರನ್ನು ಹೊಗಳುತ್ತಾ ಹೊಗಳುತ್ತಾ ಅವಾಂತರ ಸೃಷ್ಟಿರುವ ಹಳೆ ವೀಡಿಯೋವೊಂದು ಮತ್ತೆ ಮುನ್ನೆಲೆಗೆ ಬರುತ್ತಿದೆ. ನಾಗಾರ್ಜುನ ಅವರ ಈ ಹೊಸ ನಡವಳಿಕೆಗೂ ಹಳೆ ವೀಡಿಯೋದಲ್ಲಿ ಅವರಾಡಿದ ಮಾತಿಗೂ ಸಿಂಕ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಹಾಗಿದ್ರೆ ನಾಗಾರ್ಜುನ ಅವರು ತಮ್ಮ ಭಾವಿ ಸೊಸೆಯಾಗಿದ್ದ ಶೋಭಿತಾ ಬಗ್ಗೆ ಹೇಳಿದ್ದೇನು ಇಲ್ಲಿದೆ ನೋಡಿ.

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಆಡುತ್ತಾ ಶೋಭಿತಾ ಧೂಲಿಪಾಲ ಅವರ ಬಗ್ಗೆ ಮಾತನಾಡಿದ ನಾಗಾರ್ಜುನ ಆಕೆ ತುಂಬಾ ಸುಂದರವಾಗಿದ್ದಾಳೆ. ನಾನು ಹೀಗೆ ಹೇಳಲೇಬಾರದು ಆದರೂ ಆಕೆ ತುಂಬಾ ಹಾಟ್ ಎಂದು ನಾಗಾರ್ಜುನ ಅವರು ಹೇಳಿದ್ದಾರೆ.  ‘ಶಿ ವಾಸ್ ಹಾಟ್ ಇನ್ ದ ಫಿಲಂ’ ಆಕೆಯಲ್ಲಿ ಏನೋ ಆಕರ್ಷಣೆ ಇದೆ ಎಂದು ನಾಗಾರ್ಜುನ ಶೋಭಿತಾ ಬಗ್ಗೆ ಹೇಳಿದ್ದಾರೆ.  ಈ ವೀಡಿಯೋ ನಾಗಚೈತನ್ಯ ಶೋಭಿತಾ ಮಧ್ವೆ ನಂತರ ಮತ್ತೆ ಟ್ರೋಲ್ ಆಗುತ್ತಿದ್ದು, ನಾಗಾರ್ಜುನ ಮಾತು ಕೇಳಿದ ಅನೇಕರು ಇಡೀ ಕುಟುಂಬವೇ ಪ್ಲೇ ಬಾಯ್ ಕುಟುಂಬ ಎಂದು ನಿಂದಿಸಿದ್ದಾರೆ. ಮಗನ ಹೆಂಡತಿ ಸೊಸೆ ಬಗ್ಗೆ ಈ ರೀತಿ ಮಾತನಾಡುವುದು ಸರಿಯೇ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇವರೊಬ್ಬ ಕೆಟ್ಟ ಮಾವ ಯಾರಾದರೂ ಸೊಸೆಯ ಬಗ್ಗೆ ಹೀಗೆ ಮಾತನಾಡುತ್ತಾರಾ ಎಂದು ಕೆಲವರು ಕಾಮೆಂಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ಮಗನೊಂದಿಗೆ ಮದ್ವೆ ಮಾಡಿಸಿದ್ದಾರೆ ಎಂದು ಟೀಕೆ ಮಾಡಿದ್ದಾರೆ.  ಆದರೆ ಕೆಲವರು ಈ ವೀಡಿಯೋ ನೋಡಿ ಇದು ಮಗನ ಜೊತೆ ಶೋಭಿತಾ ರಿಲೇಷನ್ ಶಿಪ್ ಆರಂಭಿಸುವುದಕ್ಕೂ ಮೊದಲಿನ ವೀಡಿಯೋ ಆಗಿದೆ ಎಂದಿದ್ದಾರೆ. ಇವೆಲ್ಲವನ್ನು ನೋಡಿ ಸಮಂತಾ

ಕಾರ್ನರ್‌ನಲ್ಲಿ ನಗುತ್ತಿರಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ರೆ ಮತ್ತೊಬ್ಬರು ನಿಜವಾಗಿಯೂ ಸಮಂತಾ ಗ್ರೇಟ್ ಎಸ್ಕೇಪ್ ಆಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *