National Film Award : ರಿಷಬ್ ​ಶೆಟ್ಟಿ ಅತ್ಯುತ್ತಮ ನಟ

ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2022 ವಿಜೇತರ ಹೆಸರನ್ನು ಇಂದು ಪ್ರಕಟಿಸಿತು. ರಿಷಬ್ ​ ಶೆಟ್ಟಿ ಅತ್ಯುತ್ತಮ ನಟರಾಗಿ ಹೊರಹೊಮ್ಮಿದ್ದಾರೆ. ಅತ್ಯುತ್ತಮ ಮನರಂಜನಾ ಚಿತ್ರವೆಂಬ ಹೆಗ್ಗಳಿಕೆಗೆ ‘ಕಾಂತಾರ’ ಪಾತ್ರವಾಗಿದೆ.

ಕನ್ನಡ ಚಿತ್ರರಂಗದ ವಿಜೇತರ ಪಟ್ಟಿ:

  • ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ ಸಿನಿಮಾ)
  • ಅತ್ಯುತ್ತಮ ಸಂಪೂರ್ಣ ಮನರಂಜನಾ ಸಿನಿಮಾ: ಕಾಂತಾರ
  • ಅತ್ಯುತ್ತಮ ಆ್ಯಕ್ಷನ್​​ ಡೈರೆಕ್ಷನ್​​: ಕೆಜಿಎಫ್​ 2
  • ಚೊಚ್ಚಲ ಚಿತ್ರದಲ್ಲಿ ಅತ್ಯುತ್ತಮ ನಿರ್ದೇಶಕ: ಮಧ್ಯಂತರ (ಕನ್ನಡ)
  • ಅತ್ಯುತ್ತಮ ಸಂಕಲನ: ಮಧ್ಯಂತರ (ಕನ್ನಡ)

ಕಾಂತಾರ ಮೊದಲ ಭಾಗ 2022ರ ಸೆಪ್ಟೆಂಬರ್​​​ 30ರಂದು ತೆರೆಕಂಡಿತ್ತು. ರಿಷಬ್​​ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ನಿರೀಕ್ಷೆ ಮೀರಿ ಅಭೂತಪೂರ್ವ ಯಶಸ್ಸು ಕಂಡಿತ್ತು. ಅಂದಾಜು 16 ಕೋಟಿ ರೂ. ಬಜೆಟ್​ನಲ್ಲಿ ತಯಾರಾದ ಚಿತ್ರ ವರದಿಗಳ ಪ್ರಕಾರ, 450 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿತ್ತು.

ಈ ಚಿತ್ರದ ಯಶಸ್ಸಿನ ಮೂಲಕ ಡಿವೈನ್​ ಸ್ಟಾರ್ ಆಗಿ​ ರಿಷಬ್​ ಶೆಟ್ಟಿ ಭಾರತೀಯ ಚಿತ್ರರಂಗದಾದ್ಯಂತ ಜನಪ್ರಿಯರಾದರು. ಹೊಂಬಾಳೆ ಫಿಲ್ಮ್ಸ್ ಮೂಲಕ ವಿಜಯ್​ ಕಿರಗಂದೂರ್​​ ಚಿತ್ರ ನಿರ್ಮಿಸಿದ್ದು, ಭಾರತೀಯ ಚಿತ್ರರಂಗದಲ್ಲೇ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಿತು. ಚಿತ್ರದಲ್ಲಿ ರಿಷಬ್​ ಜೊತೆ ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​ ಸೇರಿದಂತೆ ಹಲವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

Leave a Reply

Your email address will not be published. Required fields are marked *