National Film Award : ‘ಕೆಜಿಎಫ್​ 2’ ಅತ್ಯುತ್ತಮ ಕನ್ನಡ ಚಿತ್ರ

ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಇಂದು ಘೋಷಿಸಿತು. ‘ಕೆಜಿಎಫ್ ​2’ ಅತ್ಯುತ್ತಮ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ಚಿತ್ರಕ್ಕೆ ಅತ್ಯುತ್ತಮ ಆ್ಯಕ್ಷನ್​ ಡೈರೆಕ್ಷನ್​​​ ಪ್ರಶಸ್ತಿಯೂ ಲಭಿಸಿದೆ.

ಯಶ್ ಸ್ಪೆಷಲ್​​​ ಪೋಸ್ಟ್​: ಎಲ್ಲಾ ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ರಿಷಬ್​ ಶೆಟ್ಟಿ, ವಿಜಯ್​ ಕಿರಗಂದೂರು, ಪ್ರಶಾಂತ್​ ನೀಲ್​​​ ಮತ್ತು ಸಂಪೂರ್ಣ ಹೊಂಬಾಳೆ ಫಿಲ್ಮ್ಸ್ ತಂಡಕ್ಕೆ ಶುಭಾಶಯ. ಕಾಂತಾರ ಮತ್ತು ಕೆಜಿಎಫ್ 2ಗಿದು ಅರ್ಹ ಮನ್ನಣೆ. ಸ್ಯಾಂಡಲ್​ವುಡ್​​ ಇನ್ನೂ ದಾಖಲೆ ಬರೆಯಲಿದೆ. ಇದೊಂದು ನಿಜಕ್ಕೂ ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ಷಣ ಎಂದು ಬರೆದುಕೊಂಡಿದ್ದಾರೆ.

‘ಕೆಜಿಎಫ್​​ 2’ ಚಿತ್ರ 2022ರ ಏಪ್ರಿಲ್​​ 14ರಂದು ತೆರೆಕಂಡು ಬ್ಲಾಕ್​ಬಸ್ಟರ್​​ ಆಗಿತ್ತು. ಪ್ರಶಾಂತ್​ ನೀಲ್​​ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್​ನ ವಿಜಯ್​ ಕಿರಗಂದೂರ್​​ ನಿರ್ಮಾಣ ಮಾಡಿದ್ದರು. 100 ಕೋಟಿ ರೂ ಬಜೆಟ್​ನ ಈ ಚಿತ್ರ ಸಾವಿರಾರು ಕೋಟಿ ರೂ ಸಂಗ್ರಹ ಮಾಡುವಲ್ಲಿ ಯಶ ಕಂಡಿತ್ತು. ಚಿತ್ರದಲ್ಲಿ ರಾಕಿಂಗ್​ ಸ್ಟಾರ್​​ ಯಶ್​​ ಜೊತೆಗೆ ಶ್ರೀನಿಧಿ ಶೆಟ್ಟಿ ತೆರೆಹಂಚಿಕೊಂಡಿದ್ದರು. ಅಲ್ಲದೇ ಬಾಲಿವುಡ್​ ಸೂಪರ್​ ಸ್ಟಾರ್​ಗಳಾದ ರವೀನಾ ಟಂಡನ್​​, ಸಮಜಯ್​​​ ದತ್​​ ಪ್ರಮುಖ ಪಾತ್ರ ನಿರ್ವಹಿಸಿದ್ದರು.

Leave a Reply

Your email address will not be published. Required fields are marked *