“3 ಸಾಮಾನ್ಯ ವಸ್ತುಗಳಿಂದ ಮನೆಯಲ್ಲೇ ನೈಸರ್ಗಿಕ ಪಿಂಕ್ ಲಿಪ್ಸ್ಟಿಕ್: ಹೆಣ್ಮಕ್ಕಳಿಗೆ ಸೂಪರ್ ಟಿಪ್ಸ್!”

 “3 ಸಾಮಾನ್ಯ ವಸ್ತುಗಳಿಂದ ಮನೆಯಲ್ಲೇ ನೈಸರ್ಗಿಕ ಪಿಂಕ್ ಲಿಪ್ಸ್ಟಿಕ್: ಹೆಣ್ಮಕ್ಕಳಿಗೆ ಸೂಪರ್ ಟಿಪ್ಸ್!”

ಲಿಪ್‌ಸ್ಟಿಕ್‌ ಅಂದ್ರೆ ಹೆಣ್ಮಕ್ಳಿಗೆ ಸಖತ್‌ ಇಷ್ಟ. ಈ ಲಿಪ್‌ಸ್ಟಿಕ್‌ ಮುಖಕ್ಕೆ ಮೆರಗನ್ನು ನೀಡುತ್ತದೆ ಎಂಬ ಕಾರಣಕ್ಕೆ ಹೆಚ್ಚಿನ ಮಹಿಳೆಯರು ಪ್ರತಿನಿತ್ಯ ಲಿಪ್‌ಸ್ಟಿಕ್‌ ಹಚ್ಚಿಕೊಳ್ಳುತ್ತಾರೆ. ಇದು ಅಂದವನ್ನು ಹೆಚ್ಚಿಸುವುದೇನೋ ನಿಜ ಆದ್ರೆ ಈ ಲಿಪ್‌ಸ್ಟಿಕ್‌ನಲ್ಲಿರುವ ರಾಸಾಯನಿಕಗಳು ತುಟಿಯ ಬಣ್ಣವನ್ನು ಕಪ್ಪಾಗಿಸುವುದರ ಜೊತೆಗೆ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹೀಗಿರುವಾಗ ಈ ಕೆಮಿಕಲ್‌ಯುಕ್ತ ಲಿಪ್‌ಸ್ಟಿಕ್‌ಗಳನ್ನು ಬಳಸುವ ಬದಲು ಮನೆಯಲ್ಲಿಯೇ ಈ ಮೂರು ವಸ್ತುಗಳನ್ನು ಬಳಸಿ ನ್ಯಾಚುರಲ್‌ ಲಿಪ್‌ಸ್ಟಿಕ್‌ ತಯಾರಿಸಿ. 

ಈ ರೀತಿ ಮನೆಯಲ್ಲಿಯೇ ಲಿಪ್‌ಸ್ಟಿಕ್‌ ತಯಾರಿಸಿ:

ಮನೆಯಲ್ಲೇ ತಯಾರಿಸಿದ ಈ ಲಿಪ್‌ಸ್ಟಿಕ್‌ ನೈಸರ್ಗಿಕವಾಗಿ ಗುಲಾಬಿ ತುಟಿ ಪಡೆಯಲು ಸಹಾಯ ಮಾಡುತ್ತದೆ.

ಮನೆಯಲ್ಲಿ ಲಿಪ್ಸ್ಟಿಕ್ ತಯಾರಿಸಲು ಬೇಕಾಗುವ ಪದಾರ್ಥಗಳು:

  • ಬೀಟ್ರೂಟ್
  • ತೆಂಗಿನ ಎಣ್ಣೆ
  • ವ್ಯಾಸಲೀನ್ ಅಥವಾ ಶಿಯಾ ಬಟರ್‌

ಮನೆಯಲ್ಲಿಯೇ ಲಿಪ್ಸ್ಟಿಕ್ ತಯಾರಿಸುವುದು ಹೇಗೆ?

  • ಮನೆಯಲ್ಲಿ ಲಿಪ್ಸ್ಟಿಕ್ ತಯಾರಿಸಲು, ಮೊದಲು ಬೀಟ್ರೂಟ್ ಅನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ಚೆನ್ನಾಗಿ ಕುದಿಸಿದ ನಂತರ, ಅದನ್ನು ಮಿಕ್ಸಿಯಲ್ಲಿ ರುಬ್ಬಿ ದಪ್ಪ ಪೇಸ್ಟ್‌ ತಯಾರಿಸಿ.
  • ಬೀಟ್ರೂಟ್ ಪೇಸ್ಟ್ ಮಾಡಿದ ನಂತರ, ನೀವು ಈಗ ಲಿಪ್ಸ್ಟಿಕ್ ಬೇಸ್  ತಯಾರಿಸಬೇಕು. ಇದನ್ನು ಮಾಡಲು, 1 ಟೀಚಮಚ ತೆಂಗಿನ ಎಣ್ಣೆ ಮತ್ತು 1/2 ಟೀಚಮಚ ವ್ಯಾಸಲೀನ್ ಅಥವಾ ಶಿಯಾ ಬಟರನ್ನು ಡಬಲ್ ಬಾಯ್ಲರ್‌ಗೆ ಸೇರಿಸಿ ಚೆನ್ನಾಗಿ ಬಿಸಿ ಮಾಡಿ. ಎಲ್ಲವೂ ಚೆನ್ನಾಗಿ ಮಿಶ್ರಣವಾದ ನಂತರ, ಬಾಯ್ಲರ್ ಆಫ್ ಮಾಡಿ. ಈ ಮಿಶ್ರಣವನ್ನು ಒಂದು ಬಟ್ಟಲಿಗೆ ವರ್ಗಾಯಿಸಿ.
  • ನಂತರ ಬೀಟ್ರೂಟ್ ಪೇಸ್ಟನ್ನು ತೆಗೆದುಕೊಂಡು ಅದನ್ನು ಮೊದಲೇ ತಯಾರಿಸಿಟ್ಟ ತೆಂಗಿನೆಣ್ಣೆ ಬೇಸ್‌ಗೆ ಸೇರಿಸಿ. ಈ ಎರಡೂ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದನ್ನು ಸಣ್ಣ ಬಾಕ್ಸ್‌ನಲ್ಲಿ ಹಾಕಿಟ್ಟು ಒಂದು ದಿನ ರೆಫ್ರಿಜರೇಟರ್‌ನಲ್ಲಿ ಇಟ್ಟರೆ ನ್ಯಾಚುರಲ್‌ ಲಿಪ್‌ಸ್ಟಿಕ್‌ ಸಿದ್ಧ.

ಮನೆಯಲ್ಲಿ ತಯಾರಿಸಿದ ಈ ಲಿಪ್‌ಸ್ಟಿಕ್‌ ತುಟಿಗೆ ನೈಸರ್ಗಿಕ ಗುಲಾಬಿ ಬಣ್ಣವನ್ನು ನೀಡುವುದು ಮಾತ್ರವಲ್ಲದೆ, ಯಾವುದೇ ಹಾನಿಯಿಂದ ತುಟಿಯನ್ನು ರಕ್ಷಿಸುತ್ತದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *