ಕನ್ನಡದ ಜನಪ್ರಿಯ ನಟ ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಧ್ರುವ ಸರ್ಜಾ ಮಾತ್ರವೇ ಅಲ್ಲದೆ ಅವರ ಮ್ಯಾನೇಜರ್, ಚಾಲಕ ಮತ್ತು ಅಭಿಮಾನಿಗಳ ವಿರುದ್ಧವೂ ದೂರು ದಾಖಲಿಸಲಾಗಿದೆ. ದೂರುರಾದ ವ್ಯಕ್ತಿ, ಧ್ರುವ ಸರ್ಜಾ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ಒತ್ತಾಯ ಮಾಡಿದ್ದಾರೆ. ಏನಿದು ಪ್ರಕರಣ?
ನಟ ಧ್ರುವ ಸರ್ಜಾ ವಿರುದ್ಧ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಧ್ರುವ ಸರ್ಜಾ ವಿರುದ್ಧ ಮಾತ್ರವೇ ಅಲ್ಲದೆ ಧ್ರುವ ಸರ್ಜಾ ಮ್ಯಾನೇಜರ್, ಅವರ ಕಾರು ಚಾಲಕ ಹಾಗೂ ಅಭಿಮಾನಿಗಳ ವಿರುದ್ಧವೂ ದೂರು ದಾಖಲಾಗಿದೆ. ಧ್ರುವ ಸರ್ಜಾ ವಿರುದ್ಧ ಅವರ ನೆರೆಮನೆಯವರೇ ದೂರು ದಾಖಲು ಮಾಡಿದ್ದಾರೆ. ಅಲ್ಲದೆ ಧ್ರುವ ಸರ್ಜಾ ಹಾಗೂ ಅವರ ಮ್ಯಾನೇಜರ್, ಚಾಲಕನ ಮೇಲೆ ಎಫ್ಐಆರ್ ದಾಖಲು ಮಾಡುವಂತೆ ದೂರುದಾರರು ಒತ್ತಾಯಿಸಿದ್ದಾರೆ.
ಮನೋಜ್ ಎಂಬುವರು ಧ್ರುವ ಸರ್ಜಾ ವಿರುದ್ಧ ದೂರು ನೀಡಿದ್ದಾರೆ. ಮನೋಜ್ ಅವರು ಧ್ರುವ ಸರ್ಜಾ ಅವರ ನೆರೆ ಮನೆಯವರೇ ಆಗಿದ್ದು, ಧ್ರುವ ಸರ್ಜಾ ಅವರ ಅಭಿಮಾನಿಗಳ ವರ್ತನೆಯಿಂದ ಬೇಸತ್ತು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಧ್ರುವ ಸರ್ಜಾ ಅವರ ಮನೆಗೆ ಬರುವ ಅಭಿಮಾನಿಗಳು ರಸ್ತೆಯಲ್ಲಿ, ಮನೆಯ ಮುಂದೆ ಅಡ್ಡಾದಿಡ್ಡಿಯಾಗಿ ಗಾಡಿಗಳನ್ನು ಪಾರ್ಕಿಂಗ್ ಮಾಡುತ್ತಾರೆ. ಕೂಗಾಡುತ್ತಾರೆ, ಕಿರುಚಾಡುತ್ತಾರೆ ಇದರಿಂದ ಸ್ಥಳೀಯರಿಗೆ ಸಮಸ್ಯೆ ಆಗಿದೆ ಎಂದು ಮನೋಜ್ ದೂರಿನಲ್ಲಿ ಆರೋಪಿಸಿದ್ದಾರೆ.
ಅಭಿಮಾನಿಗಳು ಮನೆಯ ಮುಂದೆ ಸಿಗರೇಟು ಸೇದುತ್ತಾರೆ, ಗುಟ್ಕಾ ಉಗಿಯುತ್ತಾರೆ, ಮನೆಯ ಗೋಡೆಗಳ ಮೇಲೆಯೂ ಉಗಿದಿದ್ದಾರೆ, ಗಲಾಟೆ ಮಾಡುತ್ತಾರೆ. ಈ ಬಗ್ಗೆ ನಟನ ಮ್ಯಾನೇಜರ್, ಚಾಲಕನ ಬಳಿ ಹೇಳಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಧ್ರುವ ಸರ್ಜಾ ಅವರ ಅಭಿಮಾನಿಗಳ ಉಪಟಳದಿಂದ ಸಮಸ್ಯೆ ಆಗಿದೆ ಎಂದು ಮನೋಜ್ ಹೇಳಿದ್ದಾರೆ.
For More Updates Join our WhatsApp Group :
