ನವದೆಹಲಿ || 2050ಕ್ಕೆ ಭಾರತ ಆಗುತ್ತೆ ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಮರಿರುವ ನಂ. 1 ದೇಶ ! ಹಾಗಾದ್ರೆ ಹಿಂದೂಗಳ ಸಂಖ್ಯೆ?

ನವದೆಹಲಿ || 2050ಕ್ಕೆ ಭಾರತ ಆಗುತ್ತೆ ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಮರಿರುವ ನಂ. 1 ದೇಶ ! ಹಾಗಾದ್ರೆ ಹಿಂದೂಗಳ ಸಂಖ್ಯೆ?

ನವದೆಹಲಿ: 2050ರ ಹೊತ್ತಿಗೆ ಭಾರತವು ಇಸ್ಲಾಂ ಧರ್ಮೀಯರೇ ಹೆಚ್ಚಾಗಿರುವ ರಾಷ್ಟ್ರವಾಗಲಿದೆಯೇ? ಇಂಥದ್ದೊಂದು ಪ್ರಶ್ನೆಗೆ ಹೌದು ಎನ್ನುತ್ತಿದೆ ಒಂದು ವರದಿ. ಹೌದು… ಪ್ಯೂ ರಿಸರ್ಚ್ ಸೆಂಟರ್ ಬಿಡುಗಡೆ ಮಾಡಿರುವ ಈ ವರದಿಯಲ್ಲಿ ಈ ಅಚ್ಚರಿಯ ವಿಚಾರವನ್ನು ಉಲ್ಲೇಖಿಸಲಾಗಿದೆ. 2050ರ ಹೊತ್ತಿಗೆ ಮುಸ್ಲಿಮರು 32 ಕೋಟಿಯಷ್ಟು ಜನರು ಇರಲಿದ್ದಾರೆ ಎಂದು ಹೇಳಲಾಗಿದೆ.

‘ದ ಫ್ಯೂಚರ್ ಆಫ್ ವರ್ಲ್ಡ್ ರಿಲೀಜನ್ಸ್: ಪಾಪ್ಯುಲೇಷನ್ ಗ್ರೋತ್ ಪ್ರೊಜೆಕ್ಷನ್ಸ್ 2010-2050’ ಎಂಬ ವರದಿಯಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದೆ. ವರದಿಯಲ್ಲಿ ಉಲ್ಲೇಖಿಸಲಾಗಿರುವ ಕೆಲವು ಪ್ರಮುಖ ಅಂಸಗಳು ಹೀಗಿವೆ.

ಹಾಗಾದರೆ ಹಿಂದೂಗಳ ಸಂಖ್ಯೆ ಎಷ್ಟರಲಿದೆ?

ಮೇಲೆ ತಿಳಿಸಿರುವುದು ಮುಸ್ಲಿಮರ ಕಥೆಯಾದರೆ, ಹಿಂದೂಗಳ ಜನಸಂಖ್ಯೆ ಎಷ್ಟಿರಲಿದೆ ಎಂಬುದರ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಿಂದೂ ಜನಸಂಖ್ಯೆಯು 1.03 ಬಿಲಿಯನ್ ಗೆ (103 ಕೋಟಿ) ಏರಲಿದೆ.

ಇಸ್ಲಾಂ ಜನಸಂಖ್ಯೆ ಹೆಚ್ಚಾಗಲು ಕಾರಣವೇನು?

2050ರ ಹೊತ್ತಿಗೆ ಇಸ್ಲಾಂ ಜನಸಂಖ್ಯೆ ಹೆಚ್ಚಾಗಲು ಕಾರಣವೇನೆಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮುಸ್ಲಿಂ ಸಮುದಾಯದಲ್ಲಿ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡುವುದು ಹಾಗೂ ಚಿಕ್ಕ ವಯ್ಸಸಿನಲ್ಲಿ ಮದುವೆಯಾದರೆ ಗರ್ಭ ಧರಿಸುವ ಅವಕಾಶಗಳು ಅಧಿಕವಾಗಿರುತ್ತದೆ. ಅದೇ ಕಾರಣಕ್ಕಾಗಿಯೇ, 2050ರ ವೇಳೆಗೆ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿರಲಿದೆ ಎಂದು ಹೇಳಲಾಗಿದೆ.

ಸದ್ಯಕ್ಕೀಗ ಪ್ರತಿ ಮುಸ್ಲಿಂ ಮಹಿಳೆಯು ಸರಾಸರಿ 3.2ರಷ್ಟು ಮಕ್ಕಳನ್ನು ಪಡೆಯುವ ಅವಕಾಶವನ್ನು ಹೊಂದಿದ್ದಾರೆ. ಪ್ರತಿ ಕ್ರೈಸ್ತ ಮಹಿಳೆಗೆ ಸರಾಸರಿಯಾಗಿ 2.3ರಷ್ಟು ಮಕ್ಕಳನ್ನು ಹೊಂದುವ ಅವಕಾಶವನ್ನು ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *