ನವದೆಹಲಿ || CUET – UG exam ದಿನಾಂಕ ಮುಂದೂಡಿಕೆ

ನವದೆಹಲಿ || CUET - UG exam ದಿನಾಂಕ ಮುಂದೂಡಿಕೆ

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಮೇ 8 ರಿಂದ ಪ್ರಾರಂಭವಾಗಬೇಕಿದ್ದ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ- ಯುಜಿ) ದಿನಾಂಕವನ್ನು ಮುಂದೂಡಿದ್ದು, ಹೊಸ ದಿನಾಂಕವನ್ನು ಪ್ರಕಟಿಸಿದೆ. ಆ ಪ್ರಕಾರ ಮೇ 8 ರಿಂದ ಜೂನ್ 1ರವರೆಗೆ ನಡೆಯಬೇಕಿದ್ದ ಪರೀಕ್ಷೆ ಮೇ 13 ರಿಂದ ಜೂನ್ 3ರವರೆಗೆ ನಡೆಯಲಿದೆ ಎಂದು ಸಂಸ್ಥೆ ಘೋಷಿಸಿದೆ.

ನಗರ ಮಾಹಿತಿ ಚೀಟಿ, ಪ್ರವೇಶ ಪತ್ರವಲ್ಲ. ಇದು ಪರೀಕ್ಷಾ ಕೇಂದ್ರ ಇರುವ ನಗರದ ಬಗ್ಗೆ ಮುಂಗಡ ಸೂಚನೆಯಷ್ಟೇ ಎಂಬುದನ್ನು ಅಭ್ಯರ್ಥಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ಪರೀಕ್ಷೆಗೆ ನಾಲ್ಕು ದಿನಗಳ ಮೊದಲು ಪ್ರವೇಶ ಪತ್ರಗಳನ್ನು ನೀಡಲಾಗುತ್ತದೆ. ಪ್ರವೇಶ ಪತ್ರಗಳನ್ನು ಪ್ರಕಟಿಸಿದ ನಂತರ ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಳ್ಳಬಹುದು. ಪ್ರವೇಶಪತ್ರದಲ್ಲಿ ಏನಾದರೂ ವ್ಯತ್ಯಾಸ ಅಥವಾ ಡೌನ್ಲೋಡ್ ಮಾಡುವಲ್ಲಿ ತೊಂದರೆ ಕಂಡುಬಂದರೆ, 011-40759000 ಸಹಾಯವಾಣಿಯನ್ನು ಸಂಪರ್ಕಿಸಬೇಕು ಅಥವಾ cuet-ug@nta.ac.in ಗೆ ಇಮೇಲ್ ಮಾಡಬೇಕು ಎಂದು ರಾಷ್ಟ್ರೀಯ ಪರೀಕ್ಷೆ ಸಂಸ್ಥೆ ತಿಳಿಸಿದೆ.

ಗುರುವಾರ ಪರೀಕ್ಷೆ ಆರಂಭವಾಗಬೇಕಿತ್ತು, ಆದರೆ, ವಿಷಯವಾರು ದಿನಾಂಕವನ್ನು ಸಂಸ್ಥೆ ಪ್ರಕಟಿಸಿರಲಿಲ್ಲ. ಹಾಗಾಗಿ ದಿನಾಂಕವನ್ನು ಮುಂದೂಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿತ್ತು. ಇದೀಗ ಪರಿಷ್ಕೃತ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ಈ ವರ್ಷ ದಾಖಲೆಯ 13.5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಅದಲ್ಲದೇ ಈ ವರ್ಷ ಪರೀಕ್ಷೆಯನ್ನು ಕಂಫ್ಯೂಟರ್ ಆಧಾರಿತ ಪರೀಕ್ಷೆ (CBT) ಮೋಡ್ನಲ್ಲಿ ಮಾತ್ರ ನಡೆಸಲಾಗುತ್ತದೆ. ಈ ಎಲ್ಲ ವಿಷಯಗಳಿಗೆ ಪರೀಕ್ಷೆಯ ಅವಧಿ ಒಂದು ಗಂಟೆಯಾಗಿರಲಿದ್ದು, 50 ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

Leave a Reply

Your email address will not be published. Required fields are marked *