ನವದೆಹಲಿ: ಪ್ರಯಾಣದ ವೇಳೆ ಅವಸವಸರವಾಗಿ ಓಡುವ ಪ್ರಯಾಣಿಕರು ಕೆಲವೊಮ್ಮೆ ಎಟಿಎಂಗೆ ಹೋಗುವುದು, ಹಣ ವಿಥ್ ಡ್ರಾ ಮಾಡಲು ಮರೆತಿರುತ್ತಾರೆ. ಅಲ್ಲದೇ ಪ್ರಯಾಣದ ವೇಳೆ ಹಣ ಇಟ್ಟುಕೊಂಡು ಹೋದರೆ ಕಳೆದು ಬಿಡಬಹುದು ಎಂಬ ಭಯ ಇರುತ್ತದೆ. ಇಂತಹ ಭೀತಿಗೆ ಗುಡ್ ಬೈ ಹೇಳುವ ಸಮಯ ಬಂದಿದೆ. ಏಕೆಂದರೆ ನೀವು ಚಲಿಸುವ ರೈಲಿನಲ್ಲೇ ಎಟಿಎಂ ನಿಂದ ಹಣ ವಿಥ್ ಡ್ರಾ ಮಾಡಬಹುದಾಗಿದೆ. ಇಂತದ್ದೊಂದು ಅವಕಾಶವನ್ನು ಭಾರತೀಯ ರೈಲ್ವೆ ಇಲಾಖೆ ಕಲ್ಪಿಸಿದೆ. ಭಾರತದಲ್ಲೇ ಇದೊಂದು ಮೊದಲ ಪ್ರಯತ್ನವಾಗಿದೆ.

ಭಾರತೀಯ ರೈಲುಗಳಲ್ಲಿ ಮುಂದಿನ ದಿನಗಳಲ್ಲಿ ಎಟಿಎಂ ಅಳವಡಿಕೆ ಆಗಲಿವೆ. ಪ್ರಯಾಣಿಕರು ಚಲಿಸುವ ರೈಲಿನಲ್ಲಿ ಹಣ ಪಡೆಯಲು ಸಹಾಯವಾಗಲು ಹೀಗೆ ಮಾಡಲಾಗುತ್ತಿದೆ. ಈಗಾಗಲೇ ಮಹಾರಾಷ್ಟ್ರ ರೈಲಿನಲ್ಲಿ ಮೊದಲ ಎಟಿಎಂ ಅನ್ನು ಅಳವಡಿಸಲಾಗಿದೆ. ಈ ಸೌಲಭ್ಯ ಯಶಸ್ವಿ ಆಗುವ ವಿಶ್ವಾಸ ಇದೆ. ಸಾದಕ ಬಾಧಕ ನೋಡಿಕೊಂಡು ಎಲ್ಲ ರೈಲುಗಳಿಗೂ ವಿಸ್ತರಣೆ ಮಾಡಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು. ಈ ಕುರಿತು ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಎಟಿಎಂ ಸೌಲಭ್ಯ ಪ್ರಾಯೋಗಿಕ ಯಶಸ್ವಿ ಈ ವಿನೂತನ ಸೌಲಭ್ಯಕ್ಕಾಗಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ಹೊಸ ಹೆಜ್ಜೆ ಇಟ್ಟಿದೆ. ಭಾರತದಲ್ಲಿ ಇದೇ ಮೊದಲು ಪ್ರಯೋಗವಾಗಿದೆ. ಮಹಾರಾಷ್ಟ್ರದ ನಾಸಿಕ್ನ ಮನ್ಮಾಡ್ ಮತ್ತು ಮುಂಬೈ ನಡುವೆ ಚಲಿಸುವ ಪಂಚವತಿ ಎಕ್ಸ್ಪ್ರೆಸ್ ರೈಲಿನ ಎಸಿ ಕೋಚ್ ಮೊದಲ ಎಟಿಎಂ ಅಳವಡಿಕೆ ಮಾಡಲಾಗಿದೆ. ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿ ವಿವರಿಸಿದ್ದಾರೆ.
ರೈಲು ಚಲಿಸುವ ಕಾರಣ ಕೆಲವು ಪ್ರದೇಶಗಳಲ್ಲಿ ಸಿಗ್ನಲ್ ಸಮಸ್ಯೆ ಕಂಡು ಬಂದಿತ್ತು. ನೆಟ್ ವರ್ಕ್ ಇಲ್ಲದ ಕಡೆಗಳಲ್ಲಿ ಹಣದ ಸಮಸ್ಯೆ ಆಗಿದೆ. ಇದರಿಂದಾಗಿ ಸಿಗ್ನಲ್ನಲ್ಲಿ ಸಮಸ್ಯೆ ಕಂಡು ಬಂದಿದೆ. ಉಳಿದಂತೆ ಹಣ ತೆಗೆಯುವಿಕೆ ಎಲ್ಲ ಪ್ರಕ್ರಿಯೆ ಉತ್ತಮವಾಗಿದೆ ಎಂದಿದ್ದಾರೆ.
ರೈಲಿನಲ್ಲಿ ಎಟಿಎಂ ಸೌಲಭ್ಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ. ಅಗತ್ಯಕ್ಕೆ ತಕ್ಕಂತೆ ಜನರು ಹಣವನ್ನು ಚಲಿಸುವ ಎಟಿಎಂನಲ್ಲೇ ಹಣ ಪಡೆಯಬಹುದಾಗಿದೆ. ಸದ್ಯ ಎಟಿಎಂ ಸಾಮರ್ಥ್ಯ ಕುರಿತು ನಿರ್ವಹಣೆ, ಮೇಲ್ವಿಚಾರಣೆ ಮಾಡಲಾಗುತ್ತಿದೆ. ಪ್ರಾಯೋಗಿಕ ಪರೀಕ್ಷೆಗೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಎಟಿಎಂ ಒದಗಿಸಿದೆ. ಇದನ್ನು ಕೋಚ್ನ ಹಿಂಭಾಗದ ಪ್ಯಾಂಟ್ರಿ ಜಾಗದಲ್ಲಿ ಅಳವಡಿಸಲಾಗಿದೆ. ಎಟಿಎಂಗೆ ಸೂಕ್ತ ಭದ್ರತೆ ಒದಗಿಸಲಾಗಿದೆ.
ರೈಲ್ವೆ ಇಲಾಖೆಯ ಮಹತ್ವದ ಪ್ರಯತ್ನ ಡಿಜಿಟಲ್ ಪೇಮೆಂಟ್ ಸಂದರ್ಭಗಳಲ್ಲಿ ಕೆಲವೊಮ್ಮೆ ಸಮಸ್ಯೆ ಆಗುತ್ತದೆ. ಇಂತಹ ನಗದು ಕೊರತೆ ಸಮಸ್ಯೆಗೆ ಈ ಹೊಸ ಎಟಿಎಂ ಸೌಲಭ್ಯವು ಪರಿಹಾರವಾಗಲಿದೆ. ದೂರದ ಊರುಗಳಿಂದ ಹಾಗೂ ಗ್ರಾಮೀಣ ಪ್ರದೇಶಗಳಿಂದ ಪ್ರಯಾಣಿಸುವವರಿಗೆ ಈ ಸೌಲಭ್ಯ ಹೆಚ್ಚಿನ ಪ್ರಯೋಜನೆ ಒದಗಿಸುತ್ತದೆ. ರೈಲ್ವೆ ಇಲಾಖೆ ಮಹತ್ವದ ಪ್ರಯತ್ನಗಳಲ್ಲಿ ಇದು ಒಂದಾಗಿದೆ.
ರೈಲುಗಳಲ್ಲಿ ಎಟಿಎಂಗಳ ಅಳವಡಿಕೆಗಾಗಿ ಕೋಚ್ನಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಲಾಗುತ್ತದೆ. ಸದ್ಯ ಅಳವಡಿಕೆಯಾಗಿರುವ ಮಹಾರಾಷ್ಟ್ರ ರೈಲಿನಲ್ಲಿ ಕೆಲವು ತಾಂತ್ರಿಕ ಬದಲಾವಣೆ ಮಾಡಿ ಎಟಿಎಂ ಕೂರಿಸಲಾಗಿದೆ. ಕೋಚ್ ವಿದ್ಯುತ್ ಸೌಕರ್ಯ, ಸೂಕ್ತ ಜಾಗಕ್ಕಾಗಿ ಬದಲಾವಣೆ ಅನಿವಾರ್ಯವಾಗಿದೆ. ರೈಲು ವೇಗವಾಗಿ ಚಲಿಸಿದರೂ, ಸಂಚಾರ ವೇಳೆ ಕಂಪನ ಉಂಟಾದರೂ ಎಟಿಎಂ ಸುರಕ್ಷಿತವಾಗಿರುವ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.