ನವದೆಹಲಿ || ಬಿಸಿಲಿಗೆ ಉತ್ತರ ಭಾರತ ತತ್ತರ: ತಾಪಮಾನ 40-43 ಡಿಗ್ರಿ ಸೆಲ್ಸಿಯಸ್ಗೆ ತಲುಪುವ ಸಾಧ್ಯತೆ

ನವದೆಹಲಿ || ಬಿಸಿಲಿಗೆ ಉತ್ತರ ಭಾರತ ತತ್ತರ: ತಾಪಮಾನ 40-43 ಡಿಗ್ರಿ ಸೆಲ್ಸಿಯಸ್ಗೆ ತಲುಪುವ ಸಾಧ್ಯತೆ

ನವದೆಹಲಿ: ಗುಜರಾತ್ ಮತ್ತು ಒಡಿಶಾದಲ್ಲಿ ಒಂದು ವಾರದ ತೀವ್ರ ತಾಪಮಾನದ ನಂತರ ಬಿಸಿಗಾಳಿ ಉತ್ತರ ಭಾರತಕ್ಕೂ ಕಾಲಿಟ್ಟಿದ್ದು ತಾಪಮಾನವು 40-43 ಡಿಗ್ರಿ ಸೆಲ್ಸಿಯಸ್ಗೆ ತಲುಪುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ಮುಂದಿನ ನಾಲ್ಕರಿಂದ ಐದು ದಿನಗಳಲ್ಲಿ ಗುಜರಾತ್, ರಾಜಸ್ಥಾನ, ಹರಿಯಾಣ, ಚಂಡೀಗಢ, ದೆಹಲಿ ಮತ್ತು ಪಂಜಾಬ್ನಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆಗಳಿದ್ದು, ವಾಯುವ್ಯ ಭಾರತ, ಮಹಾರಾಷ್ಟ್ರ ಮತ್ತು ಭಾರತದ ದಕ್ಷಿಣ ಪರ್ಯಾಯ ದ್ವೀಪಗಳಲ್ಲಿಗರಿಷ್ಠ ತಾಪಮಾನ 2 ರಿಂದ 4 ಡಿಗ್ರಿ ಸೆಲ್ಸಿಯಸ್ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

ಗುಜರಾತ್, ಉತ್ತರ ಪಂಜಾಬ್, ಉತ್ತರ ಹರಿಯಾಣ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಪಶ್ಚಿಮ ಉತ್ತರಾಖಂಡ, ಉತ್ತರ ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಪಶ್ಚಿಮ ಅಸ್ಸಾಂನ ವಿವಿಧ ಭಾಗಗಳಲ್ಲಿ ಈಗಾಗವೇ ಗರಿಷ್ಠ ತಾಪಮಾನ 40-43 ಡಿಗ್ರಿ ಸೆಲ್ಸಿಯಸ್ರಷ್ಟು ಏರಿಕೆಯಾಗಿದೆ.

ಇದಲ್ಲದೆ, ಒಡಿಶಾದ ಉತ್ತರ ಒಳಭಾಗ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಗರಿಷ್ಠ ತಾಪಮಾನ 3 ರಿಂದ 6 ಡಿಗ್ರಿ ಸೆಲ್ಸಿಯಸ್ ರಷ್ಟು ಏರಿಕೆಯಾಗಿದೆ ಎಂದು ಐಎಂಡಿ ಮಾಬಹಿತಿ ನೀಡಿದೆ. ಏಪ್ರಿಲ್ 4 ರಂದು, ಸೌರಾಷ್ಟ್ರ ಮತ್ತು ಕಚ್ನ ಕಾಂಡ್ಲಾದಲ್ಲಿ ಅತ್ಯಧಿಕ 44 ಡಿಗ್ರಿ ಸೆಲ್ಸಿಯಸ್ರಷ್ಟು ತಾಪಮಾನ ದಾಖಲಾಗಿದೆ.

ಏಪ್ರಿಲ್ 6 ಮತ್ತು 7 ರಂದು ಹಿಮಾಚಲ ಪ್ರದೇಶದ ಪ್ರತ್ಯೇಕ ಪ್ರದೇಶಗಳಲ್ಲಿ, ಏಪ್ರಿಲ್ 6 ರಿಂದ 10 ರವರೆಗೆ ಹರಿಯಾಣ ಮತ್ತು ಚಂಡೀಗಢದಲ್ಲಿ, ಏಪ್ರಿಲ್ 7 ರಿಂದ 10 ರವರೆಗೆ ಪಂಜಾಬ್ನಲ್ಲಿ, ಏಪ್ರಿಲ್ 7 ರಿಂದ 10 ರವರೆಗೆ ದೆಹಲಿಯಲ್ಲಿ, ಏಪ್ರಿಲ್ 7 ಮತ್ತು 8 ರಂದು ಪಶ್ಚಿಮ ಉತ್ತರ ಪ್ರದೇಶದಲ್ಲಿ ಮತ್ತು ಏಪ್ರಿಲ್ 8 ರಿಂದ 10 ರವರೆಗೆ ಮಧ್ಯಪ್ರದೇಶದಲ್ಲಿ ಬಿಸಿ ಗಾಳಿ ತೀವ್ರಗೊಳ್ಳಲಿದ್ದು, ತಾಪಮಾನ ಏರಿಕೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

ಇದಲ್ಲದೆ, ಏಪ್ರಿಲ್ 6 ರಿಂದ 9 ರವರೆಗೆ ಕರಾವಳಿ ಗುಜರಾತ್, ಕೊಂಕಣ ಮತ್ತು ಗೋವಾ ಪ್ರದೇಶದಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ ಎಂದೂ ಮಾಹಿತಿ ನೀಡಿದೆ.

Leave a Reply

Your email address will not be published. Required fields are marked *