ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಶುಕ್ರವಾರ) ಮಧ್ಯಾನ್ಹ 12 ಗಂಟೆಗೆ ಸಂಸತ್ತಿನಲ್ಲಿ 2025-26ರ ಸಾಲಿನ ದೇಶದ ಆರ್ಥಿಕತೆಯ ಎಕ್ಸ್ರೇ ಎಂದೇ ಹೇಳಲಾಗುವ ಆರ್ಥಿಕ ಸಮೀಕ್ಷೆಯನ್ನು ಥವಾ ಎಕನಾಮಿಕ್ ಸರ್ವೆ ವರದಿಯನ್ನ ಬಿಡುಗಡೆ ಮಾಡಲಿದ್ದಾರೆ.
ಇಂದು (ಶುಕ್ರವಾರ) ಬೆಳಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನಲ್ಲಿ ಉಭಯ ಸದನ ಉದ್ದೇಶಿಸಿ ಭಾಷಣ ಮಾಡಲಿದ್ದು, ಆ ಮೂಲಕ ಬಜೆಟ್ ಅಧಿವೇಶನಕ್ಕೆ ಚಾಲನೆ ಸಿಗಲಿದೆ. ನಂತರ, ಬೆಳಗ್ಗೆಯೇ ಆರ್ಥಿಕ ಸಮೀಕ್ಷೆಯ ವರದಿಯನ್ನು ಸಂಸತ್ತಿನಲ್ಲಿ ಮಂಡನೆ ಮಾಡಲಾಗುತ್ತದೆ.
ಫೆಬ್ರುವರಿ 1, ಶನಿವಾರದಂದು ನಿರ್ಮಲಾ ಸೀತಾರಾಮನ್ ಅವರೇ ಮುಂಗಡ ಪತ್ರ ಅಥವಾ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸುತ್ತಾರೆ. ಒಂದು ದಿನ ಮುನ್ನ, ಇವತ್ತು ಆರ್ಥಿಕ ಸಮೀಕ್ಷೆಯ ಪ್ರಸ್ತುತಿ ನಡೆಯುತ್ತದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಸಾಧನೆಯ ಮೌಲ್ಯಮಾಪನವನ್ನು ಇದು ಒಳಗೊಂಡಿರುತ್ತದೆ. ಮುಖ್ಯ ಆರ್ಥಿಕ ಸಲಹೆಗಾರರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾದ ಆರ್ಥಿಕ ಸಮೀಕ್ಷೆಯನ್ನು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗದಿಂದ ರಚಿಸಲಾಗಿದೆ.
ಆರ್ಥಿಕ ಸಮೀಕ್ಷೆ ಏನು? ಬಜೆಟ್ಗೆ ಒಂದು ದಿನ ಮುಂಚಿತವಾಗಿ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗುತ್ತದೆ. ಅಂದರೆ ನಾಳೆ (ಫೆಬ್ರವರಿ 1) ಬೆಳಿಗ್ಗೆ 11 ಗಂಟೆಗೆ ಬಜೆಟ್ ಅಧಿವೇಶನ ಆರಂಭವಾಗುತ್ತದೆ. ಈ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎರಡೂ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ನಂತರ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಬೆಳವಣಿಗೆಯ ಕುರಿತು ಮುನ್ಸೂಚನೆಗಳೊಂದಿಗೆ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯನ್ನು ಮಂಡಿಸುತ್ತಾರೆ.
ಕಳೆದ ಆರ್ಥಿಕ ಸಮೀಕ್ಷೆ ಮಂಡಿಸಿ ಆರು ತಿಂಗಳ ನಂತರ ಈ ವರ್ಷ ಮತ್ತೆ ಆರ್ಥಿಕ ಸಮೀಕ್ಷೆ ಮಂಡಿಸಲಾಗುತ್ತಿದೆ. ಏಕೆಂದರೆ, 2024 ಭಾರತದಲ್ಲಿ ಚುನಾವಣಾ ವರ್ಷವಾಗಿತ್ತು, ಆದ್ದರಿಂದ 2024ರ ಚುನಾವಣೆಯ ನಂತರ ಜುಲೈನಲ್ಲಿ ಸಂಪೂರ್ಣ ಬಜೆಟ್ ಮಂಡಿಸಲಾಗಿತ್ತು. ಆರ್ಥಿಕ ಸಮೀಕ್ಷೆ ವರದಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯ ನೈಜ ಚಿತ್ರಣವನ್ನು ನೀಡಲಾಗಿರುತ್ತದೆ. ಮಧ್ಯಮಾವಧಿ ಮತ್ತು ದೀರ್ಘಾವಧಿಗೆ ಹಣದುಬ್ಬರದ ಗತಿ, ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ಎನ್ನುವ ಚಿತ್ರಣ ಮತ್ತು ಅಂದಾಜನ್ನು ಈ ವರದಿಯಲ್ಲಿ ಮಾಡಲಾಗಿರುತ್ತದೆ. ಆರ್ಥಿಕ ಸಮೀಕ್ಷೆಯಲ್ಲಿ ಮಧ್ಯಮಾವಧಿ ಮತ್ತು ದೀರ್ಘಾವಧಿಗೆ ಹಣದುಬ್ಬರದ ಗತಿ, ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ಎನ್ನುವ ಚಿತ್ರಣ ಮತ್ತು ಅಂದಾಜನ್ನು ಈ ವರದಿಯಲ್ಲಿ ಮಾಡಲಾಗಿರುತ್ತದೆ. ಮುಖ್ಯ ಆರ್ಥಿಕ ಸಲಹೆಗಾರರ ನೇತೃತ್ವದಲ್ಲಿ ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಗೆ ಸೇರಿದ ಆರ್ಥಿಕ ವಿಭಾಗವು ಈ ವರದಿಯನ್ನು ತಯಾರಿಸುತ್ತದೆ. ಇದೀಗ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿರುವುದು ವಿ ಅನಂತ ನಾಗೇಶ್ವರನ್. ಇವರ ನೇತೃತ್ವದಲ್ಲಿ 2024-25ರ ಸಾಲಿನ ಆರ್ಥಿಕ ಸಮೀಕ್ಷೆಯ ವರದಿ ಸಿದ್ಧವಾಗಿದೆ.
ಆರ್ಥಿಕ ಸಮೀಕ್ಷೆ ವರದಿಯಲ್ಲಿ ಕಳೆದ ವರ್ಷದ ಆರ್ಥಿಕ ವಿಷಯಗಳನ್ನು ಪರಿಶೀಲಿಸುತ್ತದೆ. ಅಲ್ಲದೇ ಕೃಷಿ, ಕೈಗಾರಿಕಾ ಉತ್ಪಾದನೆ, ಮೂಲಸೌಕರ್ಯ, ಉದ್ಯೋಗ, ಹಣದುಬ್ಬರ ದರ, ವ್ಯಾಪಾರ, ವಿದೇಶಿ ವಿನಿಮಯ ಮೀಸಲು, ಇತರ ಆರ್ಥಿಕ ಕ್ಷೇತ್ರಗಳಲ್ಲಿನ ಪ್ರವೃತ್ತಿಗಳನ್ನು ಸಮೀಕ್ಷೆ ವಿಶ್ಲೇಷಿಸುತ್ತದೆ. ಈ ಆರ್ಥಿಕ ಸಮೀಕ್ಷೆಯು ಕೇಂದ್ರ ಬಜೆಟ್ನಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ. ದೇಶದ ಜಿಡಿಪಿ ಬೆಳವಣಿಗೆಯ ಪ್ರಮುಖ ಸವಾಲುಗಳನ್ನು ಗುರುತಿಸಲು ಸಹ ಆರ್ಥಿಕ ಸಮೀಕ್ಷೆ ಸಹಾಯ ಮಾಡುತ್ತದೆ. ಆರ್ಥಿಕ ಸಮೀಕ್ಷೆಯ ವರದಿ ಯಾಕೆ ಮುಖ್ಯ? ಆರ್ಥಿಕ ಸಮೀಕ್ಷೆ ವರದಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯ ನೈಜ ಚಿತ್ರಣವನ್ನು ನೀಡಲಾಗಿರುತ್ತದೆ. ಹೀಗಾಗಿ ಆರ್ಥಿಕ ಸಮೀಕ್ಷೆಯ ವರದಿ ತುಂಬಾ ಮುಖ್ಯವಾಗಿರುತ್ತದೆ. ಆರ್ಥಿಕ ಸಮೀಕ್ಷೆಯು ಸರ್ಕಾರ ಮತ್ತು ಜನತೆ ಇಬ್ಬರಿಗೂ ಅಗತ್ಯವಾಗಿರುವ ಮಾಹಿತಿಯನ್ನು ಒಳಗೊಂಡಿರುತ್ತದೆ. ಇನ್ನು, ದೇಶದ ಆರ್ಥಿಕ ಪರಿಸ್ಥಿತಿ ಈಗ ಹೇಗಿದೆ? ಮುಂದೆ ದೇಶದ ಆರ್ಥಿಕ ಪರಿಸ್ಥಿತಿ ಹೇಗೆ ಇರಬಹುದು? ಆರ್ಥಿಕತೆಯ ವಿವಿಧ ಭಾಗಗಳ ಪರಿಸ್ಥಿತಿ ಹೇಗಿದೆ?ಎಂಬ ಬಗ್ಗೆ ಈ ಈ ವರದಿಯಲ್ಲಿ ತಿಳಿಸಲಾಗುತ್ತದೆ. ಇದು ಸರ್ಕಾರಕ್ಕೆ ನೀತಿ ರೂಪಿಸಲು ಸಹಕಾರಿಯಾಗಬಲ್ಲುದು. ಹೀಗಾಗಿ ಆರ್ಥಿಕ ಸಮೀಕ್ಷೆಯ ವರಿದಿ ಮುಖ್ಯವಾಗಿರುತ್ತದೆ.