ನವದೆಹಲಿ: ಐದನೇ ತಲೆಮಾರಿನ ಯುದ್ಧವಿಮಾನಗಳನ್ನು ನಿರ್ಮಾಣ ಮಾಡುವ ಭಾರತೀಯ ವಾಯುಪಡೆಯ ಪ್ರಯತ್ನಕ್ಕೆ ಕಾರ್ಪೊರೇಟ್ ವಲಯದಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಎಎಂಸಿಎ ಯೋಜನೆಯಲ್ಲಿ ಪಾಲ್ಗೊಳ್ಳಲು ಸರ್ಕಾರದ ಎಕ್ಸ್ಪ್ರೆಸ್ ಆಫ್ ಇಂಟರೆಸ್ಟ್ ಆಹ್ವಾನಿಸಿದೆ. ಎಚ್ಎಎಲ್ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ. ಇದರ ಬೆನ್ನಲ್ಲೇ ಎಲ್ ಅಂಡ್ ಟಿ ಮತ್ತು ಬಿಇಎಲ್ ಸಂಸ್ಥೆಗಳು ಜಂಟಿಯಾಗಿ ಈ ಯೋಜನೆಗೆ ಪ್ರಯತ್ನಿಸಲು ಹೊರಟಿವೆ.
ಈಗಾಗಲೇ ಪ್ರಮುಖ ಡಿಫೆನ್ಸ್ ಪ್ರಾಜೆಕ್ಟ್ಗಳನ್ನು ಕೈಗೊಂಡು ಗಮನ ಸೆಳೆದಿರುವ ಬೆಂಗಳೂರು ಮೂಲದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಪ್ರಮುಖ ಎಂಜಿನಿಯರಿಂಗ್ ಕಂಪನಿಯಾದ ಎಲ್ ಅಂಡ್ ಟಿ ಜೊತೆಗಾಗಿ ಕನ್ಸಾರ್ಟಿಯಂ ಮಾಡಿಕೊಂಡಿವೆ. ಈ ಎರಡೂ ಕಂಪನಿಗಳು ಎಲ್ಸಿಎ ಯುದ್ಧವಿಮಾನಗಳ ತಯಾರಿಕೆಯಲ್ಲಿ ಅನುಭವ ಹೊಂದಿವೆ. ಭಾರತದ ಮಹತ್ವಾಕಾಂಕ್ಷಿ ಎಎಂಸಿಎ ಪ್ರಾಜೆಕ್ಟ್ನಲ್ಲಿ ಈ ಗುಂಪು ಮಹತ್ತರ ಪಾತ್ರ ವಹಿಸಬಹುದು.
ಎಚ್ಎಎಲ್ ಜೊತೆ ಸೇರಲು 28 ಕಂಪನಿಗಳ ಆಸಕ್ತಿ
ಎಎಂಸಿಎ ಯೋಜನೆಯಲ್ಲಿ ಪಾಲ್ಗೊಳ್ಳಲು ಎಚ್ಎಎಲ್ ಸಿದ್ಧವಿದೆ. ಆದರೆ, ಯೋಜನೆಗೆ ರೂಪಿಸಲಾಗಿರುವ ಕೆಲ ನಿಯಮಗಳಿಂದಾಗಿ ಎಚ್ಎಎಲ್ ಏಕಾಂಗಿಯಾಗಿ ಈ ಪ್ರಾಜೆಕ್ಟ್ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಸಹ-ಕಂಪನಿ ಅಥವಾ ಕಂಪನಿಗಳ ಅಗತ್ಯ ಇದೆ. ಬರೋಬ್ಬರಿ 28 ಖಾಸಗಿ ಕಂಪನಿಗಳು ಎಚ್ಎಎಲ್ ಜೊತೆ ನಿಲ್ಲಲು ಸಿದ್ಧವಾಗಿವೆ.
ಇವುಗಳ ಪೈಕಿ ಒಂದು ಅಥವಾ ಎರಡು ಕಂಪನಿಗಳ ಜೊತೆ ಸೇರಿಕೊಂಡು ಕನ್ಸಾರ್ಟಿಯಂ ರಚಿಸಲು ಎಚ್ಎಎಲ್ ನಿರ್ಧರಿಸಿದೆ. ಈ 28 ಕಂಪನಿಗಳ ಪೈಕಿ ಆ 1-2 ಕಂಪನಿಗಳನ್ನು ಶಾರ್ಟ್ಲಿಸ್ಟ್ ಮಾಡುವ ಕೆಲಸ ನಡೆಯುತ್ತಿದೆ. ಅದಕ್ಕಾಗಿ ಎಚ್ಎಎಲ್ ಒಂದು ಸಮಿತಿ ರಚಿಸಿದೆ.
ಕನ್ಸಾರ್ಟಿಯಂ ರಚಿಸಿ ಎಎಂಸಿಎ ಪ್ರೋಗ್ರಾಮ್ಗೆ ಇಒಐ ಸಲ್ಲಿಸಲು ಸೆಪ್ಟೆಂಬರ್ 30 ಡೆಡ್ಲೈನ್ ನಿಗದಿ ಮಾಡಲಾಗಿದೆ. ಅಷ್ಟರೊಳಗೆ ಎಚ್ಎಎಲ್ ತನ್ನ ಜೊತೆಗಾರ ಕಂಪನಿಗಳೊಂದಿಗೆ ಕನ್ಸಾರ್ಟಿಯಂ ರಚಿಸಿ, ಇಒಐ ಸಲ್ಲಿಸಬೇಕಾಗುತ್ತದೆ.
For More Updates Join our WhatsApp Group :




