ಸಮೀರ್ ಮುಲ್ಲಾನ ವಿರುದ್ಧ ಗಂಭೀರ ಆರೋಪ – ತಂದೆ ನಿರಂಜನ ಹಿರೇಮಠ ಸ್ಫೋಟಕ ಹೇಳಿಕೆ
ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಜಿಮ್ ಟ್ರೈನರ್ ಸಮೀರ್ ಮುಲ್ಲಾನ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ನೇಹಾ ತಂದೆ Niranjan Hiremath ಸ್ಫೋಟಕ ಹೇಳಿಕೆ ನೀಡಿದ್ದು, ಪ್ರಕರಣದ ತನಿಖೆಗೆ ಹೊಸ ದಿಕ್ಕು ಸಿಕ್ಕಿದೆ.
ಸಮೀರ್ ಮುಲ್ಲಾನ ಎಂಬ ಜಿಮ್ ಟ್ರೈನರ್ ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಈಗಾಗಲೇ ಇಬ್ಬರು ಯುವತಿಯರು ದೂರು ದಾಖಲಿಸಿದ್ದಾರೆ.
ನೇಹಾ ಹತ್ಯೆಗೂ ಮುನ್ನ ತಂದೆಗೆ ಸ್ಕೆಚ್ ಹಾಕಿದ್ರಾ?
ನೇಹಾ ಹತ್ಯೆಗೂ ಮುನ್ನ ತಂದೆ ನಿರಂಜನ ಹಿರೇಮಠಗೆ ಖೆಡ್ಡ ತೋಡಲುಸಮೀರ್ ಮುಲ್ಲಾನ ಕುಟುಂಬ ಮುಂದಾಗಿತ್ತಾ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಸಮೀರ್ ತಂದೆ ಆಗಾಗ ಕಾಲ್ ಮಾಡುತ್ತಿದ್ದರು. ನಿಮ್ಮ ಏರಿಯಾದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆ ಏರ್ಪಡಿಸೋಣ, ಅರ್ಥಿಕ ನೆರವು ನೀಡುವಂತೆ ಒತ್ತಾಯಿಸುತ್ತಿದ್ದುರು. ಅಲ್ಲದೇ ಆಗಾಗ್ಗೆ ತಮ್ಮ ಮನೆಗೆ ಬರುವಂತೆ ಆಹ್ವಾನಿಸುತ್ತಿದ್ದರು. ನಾನು ಎಷ್ಟೇ ಕರೆದರು ಹೋಗಲಿಲ್ಲ. ಹೋಗಿದ್ರು ಟ್ರ್ಯಾಪ್ ಮಾಡುವ ಪ್ಲಾನ್ ಇದ್ದಿರಬಹುದು ಎಂದು ಸಂಶಯ ಇತ್ತು. ಹೀಗಾಗಿ ಹೋಗಿರಲಿಲ್ಲ ಎಂದಿದ್ದಾರೆ.
ಫಯಾಜ್ – ನೇಹಾ ಹಿರೇಮಠ 2020 ರಲ್ಲಿ ಹುಬ್ಬಳ್ಳಿಯ ಕಾಲೇಜೊಂದರಲ್ಲಿ ಬಿಸಿಎ ಓದುವಾಗ ಸಹಪಾಠಿಗಳಾಗಿದ್ದರು. ಇವರಿಬ್ಬರೂ ಮೊದಲು ಪರಸ್ಪರ ಸ್ನೇಹಿತರಾಗಿದ್ದು, 2022 ರಲ್ಲಿ ಇಬ್ಬರು ಪ್ರೀತಿಸುತ್ತಿದ್ದರು. ಆದ್ರೆ, ಇಬ್ಬರ ನಡುವೆ ಅದೇನಾಯ್ತೋ ಏನೋ 2024 ರ ಮಾರ್ಚ್ ತಿಂಗಳಲ್ಲಿ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ನೇಹಾ, ಫಯಾಜ್‌ನ ಜತೆ ಮಾತು ನಿಲ್ಲಿಸಿ ಅವನ ಸಂಪರ್ಕದಿಂದ ದೂರವಾಗಿದ್ದಳು. ಈ ಸಿಟ್ಟಿನಲ್ಲಿ ಆಕೆಯನ್ನು ಕೊಲೆ ಮಾಡಿದ್ದ.
For More Updates Join our WhatsApp Group :




