ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರವನ್ನು ಬೆಚ್ಚಿಬೀಳಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದೆ. ಮೃತರ ಸ್ನೇಹಿತ ರವಿಯೇ ಆರೊಪಿಯಿರಬಹುದು ಎಂಬ ಶಂಕೆ ಈ ಹಿಂದೆ ವ್ಯಕ್ತವಾಗಿತ್ತು. ಇದೀಗ 19 ದಿನಗಳ ನಂತರ ಆತನೇ ಕೊಲೆಗಾರನೆಂದು ದೃಢಪಟ್ಟಿದೆ. ಈ ಪ್ರಕರಣದ ಹಿನ್ನೆಲೆ ಪ್ರಮುಖ ಆರೋಪಿ ರವಿ ಸೇರಿದಂತೆ 10 ಆರೋಪಿಗಳನ್ನು ಬಂಧಿಸಲಾಗಿದೆ.
ವೆಂಕಟೇಶ್ ಹತ್ಯೆಗೆ ಬಳ್ಳಾರಿಯಲ್ಲಿ ಮಾಸ್ಟರ್ ಪ್ಲಾನ್
ಅಕ್ಟೋಬರ್ 8ರ ತಡರಾತ್ರಿ ಗಂಗಾವತಿಯ ರಸ್ತೆಯಲ್ಲಿ ದುಷ್ಕರ್ಮಿಗಳು ಕಾರಿನಲ್ಲಿ ಹಿಂಬಾಲಿಸಿ ವೆಂಕಟೇಶ್ ಅವರನ್ನು ಕೊಚ್ಚಿ ಕೊಲೆ ಮಾಡಿದ್ದರು. ಪ್ರಾಥಮಿಕ ತನಿಖೆಯಲ್ಲಿ ಹಳೆಯ ದ್ವೇಷವೇ ಹತ್ಯೆಗೆ ಕಾರಣ ಎಂದು ಶಂಕಿಸಲಾಗಿತ್ತು. ಈಗ ತನಿಖೆಯಿಂದ ಆರೋಪಿಗಳು ಬಳ್ಳಾರಿಯಲ್ಲಿ ಈ ಹತ್ಯೆಗೆ ಸಂಚು ಹಾಕಿದ್ದರು ಎಂಬ ಸ್ಪೋಟಕ ಸತ್ಯ ಹೊರಬಿದ್ದಿದೆ. ಪ್ರಮುಖ ಆರೋಪಿ ರವಿ, ಹಂತಕರಾದ ಗೌಳಿ ಗಂಗಾಧರ ಹಾಗೂ ಇತರರೊಂದಿಗೆ ಸಂಚು ರೂಪಿಸಿದ್ದು, ಅದರಂತೆಯೇ ಗಂಗಾವತಿಯಲ್ಲಿ ಕೊಲೆ ಮಾಡಿದ್ದಾರೆ.
For More Updates Join our WhatsApp Group :
