ನವದೆಹಲಿ: ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ-ಮುಖ್ಯಮಂತ್ರಿ ನಿತೀಶ್ ಕುಮಾರ್ ‘ಜೋಡಿ’ ಮತ್ತೆ ಕಮಾಲ್ ಮಾಡಿದೆ. ಈ ಜೋಡಿಯ ಜನಪ್ರಿಯತೆಯು ಬಿಹಾರದ ಚುನಾವಣೆಯಲ್ಲಿ ಎನ್ಡಿಎ ಗೆಲ್ಲಲು ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾರತೀಯ ರಾಜಕೀಯದ ಇಬ್ಬರು ಪ್ರಮುಖ ನಾಯಕರು. ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ನಿತೀಶ್ ಕುಮಾರ್- ನರೇಂದ್ರ ಮೋದಿ ಒಗ್ಗಟ್ಟಾಗಿ ಭರ್ಜರಿ ಪ್ರಚಾರ ನಡೆಸಿದ್ದರು. ಮಹಾಘಟಬಂಧನ್ ಅನ್ನು ಸೋಲಿಸಲೇಬೇಕೆಂದು ಪಣ ತೊಟ್ಟಿದ್ದ ಎನ್ಡಿಎ ಎಲ್ಲ ರೀತಿಯ ರಾಜಕೀಯ ತಂತ್ರಗಳನ್ನು ಬಳಸಿತ್ತು, ಆರ್ಜೆಡಿಯ ಹಗರಣಗಳನ್ನು ಅಸ್ತ್ರವಾಗಿ ಬಳಸಿಕೊಂಡು ಜನರ ಮತವನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿತ್ತು.
2025ರ ಬಿಹಾರ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಭರ್ಜರಿ ಗೆಲುವಿನತ್ತ ಸಾಗುತ್ತಿದೆ. ಚುನಾವಣಾ ಆಯೋಗದ ಆರಂಭಿಕ ಪ್ರವೃತ್ತಿಗಳು ಮೈತ್ರಿಕೂಟವು ಒಟ್ಟು 243 ಬಿಹಾರ ವಿಧಾನಸಭಾ ಸ್ಥಾನಗಳಲ್ಲಿ 200ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಬಹುಮತದ ಗಡಿಯನ್ನು ದಾಟುತ್ತಿದೆ ಎಂದು ತೋರಿಸುತ್ತದೆ.
2025ರ ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಕ್ತಾಯದ ಹಂತಕ್ಕೆ ಬಂದಿದೆ. ಬಿಹಾರದಲ್ಲಿ NDA ಮೈತ್ರಿಕೂಟವು ಸ್ಪಷ್ಟವಾಗಿ ಮುಂಚೂಣಿಯಲ್ಲಿದೆ. ಹೀಗಾಗಿ, ಭರ್ಜರಿ ಅಂತರದಿಂದ ಎನ್ಡಿಎ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. NDA ಪ್ರಸ್ತುತ 200 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಸರ್ಕಾರ ರಚಿಸಲು 122 ಸ್ಥಾನಗಳ ಅಗತ್ಯವಿದೆ. ಎನ್ಡಿಎಯ ಎರಡು ಪ್ರಮುಖ ಪ್ರತಿಸ್ಪರ್ಧಿಗಳಲ್ಲಿ, ಆರ್ಜೆಡಿ ಕೇವಲ 27 ಸ್ಥಾನಗಳನ್ನು ಪಡೆದಿದ್ದರೆ ಕಾಂಗ್ರೆಸ್ ಕೇವಲ 6 ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ.
For More Updates Join our WhatsApp Group :

