ರಾತ್ರಿಯಿಡೀ ನಿದ್ದೆಯಿಲ್ಲ, ನಸುಕಿನ ಜಾವ ವಾಕಿಂಗ್ : ಜೈಲಿನಲ್ಲಿ ಪರಿತಪಿಸುತ್ತಿರುವ ಪವಿತ್ರಾ ಗೌಡ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಿಂದ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಪವಿತ್ರಾ ಗೌಡ ಮತ್ತು ಇತರ 12 ಆರೋಪಿಗಳಿಗೆ ಬೆಂಗಳೂರು ಕೇಂದ್ರ ಕಾರಾಗೃಹದ ಅಧಿಕಾರಿಗಳು ಪರಪ್ಪನ ಅಗ್ರಹಾರದಲ್ಲಿರುವ ವಿಚಾರಣಾ ಕೈದಿ (UTP) ಸಂಖ್ಯೆಗಳನ್ನು ನೀಡಿದ್ದಾರೆ.

ನಿನ್ನೆ ಯುಟಿಪಿ ಸಂಖ್ಯೆಗಳನ್ನು ನೀಡಲಾಗಿದ್ದು, ಪವಿತ್ರಾ ಗೌಡ ಯುಟಿಪಿ 6024 ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ಬಂಧಿತರಾದ 47 ವರ್ಷದ ದರ್ಶನ್ ತೂಗುದೀಪ ಸೇರಿದಂತೆ 17 ಜನರ ಪೈಕಿ ಪವಿತ್ರಾ ಏಕೈಕ ಮಹಿಳಾ ಆರೋಪಿಯಾಗಿದ್ದಾರೆ. ಆಕೆಯನ್ನು ಮಹಿಳಾ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದ್ದು, ಇತರ 11 ಆರೋಪಿಗಳನ್ನು ಪುರುಷ ಕೈದಿಗಳ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಎಲ್ಲರೂ ಸಾಮಾನ್ಯ ವೈದ್ಯಕೀಯ ತಪಾಸಣೆಗೆ ಒಳಗಾದರು

ಆರ್.ಆರ್.ನಗರದ ಕೆಂಚನಹಳ್ಳಿ ರಸ್ತೆಯಲ್ಲಿರುವ ಐಷಾರಾಮಿ ಮನೆಯಲ್ಲಿ ರೆಡ್ ಕಾರ್ಪೆಟ್ ಬೊಟಿಕ್ ನಡೆಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿ ನಂಬರ್ 1 ಪವಿತ್ರಾ, ಜೈಲು ಸೇರಿದ ದಿನ ರಾತ್ರಿಯಿಡೀ ನಿದ್ದೆ ಮಾಡಲು ಸಾಧ್ಯವಾಗದೆ ಪರಿತಪ್ಪಿಸಿದ್ದಾರೆ, ಬೆಳಗ್ಗೆ 5 ಗಂಟೆಗೆ ಎಚ್ಚರವಾಗಿ 5 ಗಂಟೆಗೆ ಎಚ್ಚರಗೊಂಡು ಬ್ಯಾರಕ್‌ನಲ್ಲಿ ವಾಕಿಂಗ್ ಮಾಡಿದರು ಎಂದು ಇಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *