“ಕನಸು ಕಾಣದೇ ಇರುವುದು ಕ್ರೈಂ; ಸಾಧನೆಗಾಗಿ ಹಾದಿ ಹಿಡಿಯಬೇಕು” – ಮೋದಿ

“ಕನಸು ಕಾಣದೇ ಇರುವುದು ಕ್ರೈಂ; ಸಾಧನೆಗಾಗಿ ಹಾದಿ ಹಿಡಿಯಬೇಕು” – ಮೋದಿ

ಪರೀಕ್ಷಾ ಪೆ ಚರ್ಚಾ: ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ gave life & career guidance

ನವದೆಹಲಿ : ಕನಸು ಕಾಣದಿರುವುದು ಅಪರಾಧ, ಕನಸ್ಸನ್ನು ಪ್ರತಿಯೊಬ್ಬರೂ ಕಾಣಲೇಬೇಕು, ಕೇವಲ ಕನಸ್ಸಿನ ಬಗ್ಗೆ ಮಾತನಾಡುತ್ತಾ ಇರುವುದಲ್ಲ, ಸಫಲತೆಯ ಹಾದಿ ಹಿಡಿದು ಸಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ನೀವು ಸಮರ್ಥರಾಗಿ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ ಎಂದರು. ಒಬ್ಬ ವಿದ್ಯಾರ್ಥಿ ಗಗನಯಾತ್ರಿಯಾಗಲು ಬಯಸಿದರೆ, ಸಂಪೂರ್ಣವಾಗಿ ಅಧ್ಯಯನ ಮಾಡಬೇಕು, ಜ್ಞಾನವನ್ನು ವಿಸ್ತರಿಸುವುದನ್ನು ಮುಂದುವರಿಸಬೇಕು. ಕೇವಲ ನನ್ನ ಕನಸು ಇದಿದೆ ಎನ್ನುತ್ತಾ ಜಪ ಮಾಡುತ್ತಿರುವುದಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ನಿಮಗೆ ಸೌಲಭ್ಯಗಳು ಯಶಸ್ಸಿಗೆ ಕಾರಣವಾಗುವುದಿಲ್ಲ: ಮೋದಿ ಸೌಲಭ್ಯಗಳು ಯಶಸ್ಸಿಗೆ ಕಾರಣವಾಗುವುದಿಲ್ಲ, ನೀವು ಪಂಚತಾರಾ ಹೋಟೆಲ್‌ನಲ್ಲಿ ವಾಸಿಸುತ್ತಿದ್ದೀರಿ ಎಂದ ಮಾತ್ರಕ್ಕೆ ನೀವು ನಿಮ್ಮ ಅಧ್ಯಯನದ ಮೇಲೆ ಹೆಚ್ಚು ಗಮನಹರಿಸುತ್ತೀರಿ ಎಂದರ್ಥವಲ್ಲ. ಸೌಲಭ್ಯಗಳು ಗಮನವನ್ನು ಸುಧಾರಿಸುವುದಿಲ್ಲ. ನೀವು ಸೂಕ್ಷ್ಮವಾಗಿ ಗಮನಿಸಿದರೆ, ಟಾಪರ್‌ಗಳಲ್ಲಿ ಹೆಚ್ಚಿನವರು ಬಡತನದಲ್ಲಿ ಬೆಳೆದ ಮಕ್ಕಳೇ ಇರುತ್ತಾರೆ.

ಮಕ್ಕಳಿಗೆ ಹೊಸ ವಿಷಯಗಳನ್ನು ಕಲಿಸಲು ಒತ್ತು ನೀವು ನಿಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಹೊಸ ವಿಷಯಗಳನ್ನು ಕಲಿಯುವತ್ತ ಗಮನಹರಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಕಡಿಮೆ ಅಂಕಗಳನ್ನು ಪಡೆದರೂ ಭಯಪಡಬೇಡಿ, ಬದಲಾಗಿ, ನಿಮ್ಮನ್ನು ನೀವು ಸುಧಾರಿಸಿಕೊಳ್ಳಿ ಮತ್ತು ಉತ್ತಮವಾಗಿ ಕೆಲಸ ಮಾಡಿ.

ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳಿಸಲು ಪ್ರಧಾನಿ ಮೋದಿ ಸಲಹೆ ಪ್ರಧಾನಿ ಮೋದಿ ಮಕ್ಕಳು ತಮ್ಮ ದೈನಂದಿನ ಕೆಲಸಗಳನ್ನು ಡೈರಿಯಲ್ಲಿ ಬರೆಯುವಂತೆ ಪ್ರೋತ್ಸಾಹಿಸಿದರು. ನಂತರ, ಮರುದಿನ, ಯಾವ ಕೆಲಸಗಳು ಪೂರ್ಣಗೊಂಡಿವೆ ಮತ್ತು ಯಾವುದನ್ನು ಪೂರ್ಣಗೊಳಿಸಲಾಗಿಲ್ಲ ಎಂಬುದರ ಬಗ್ಗೆ ಆಲೋಚನೆ ಮಾಡಿ, ಇದು ಅವರಿಗೆ ಸಮಯ ನಿರ್ವಹಣೆಯನ್ನು ಕಲಿಯಲು ಸಹಾಯ ಮಾಡುತ್ತದೆ. ಇದು ಅವರ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *