ಡಿಸ್ಟೆನ್ಸ್ ಲರ್ನಿಂಗ್ ಕೋರ್ಸ್ ಗಳ ಕುರಿತು ಶೈಕ್ಷಣಿಕ ಚರ್ಚೆ.
ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಚಂದ್ರಶೇಖರ್ ನೇತೃತ್ವದ ತನಿಖಾತಂಡ ಆಕಾಶ್ ಇನ್ಸ್ಟಿಟ್ಯೂಟ್ ಆಫ್ಕಾಮರ್ಸ್ & ಮ್ಯಾನೇಜ್ ಮೆಂಟ್ ಅನ್ನು ಭೇಟಿ ಮಾಡಿ, ವಿವಿಧ ಕೋರ್ಸ್ಗಳ ಕುರಿತು ಸಮಗ್ರ ಚರ್ಚೆ ನಡೆಸಿತು.
ತಂಡ ತಯಾರಿಸಿದ ವರದಿ ಮುಕ್ತ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಸಲ್ಲಿಸಲಾಗುವುದು, ನಂತರ ಶೈಕ್ಷಣಿಕ ಸುಧಾರಣೆಗಳು ಹಾಗೂ ನಿರ್ವಹಣಾಕ್ರಮಗಳು ಕೈಗೊಳ್ಳಲಾಗುತ್ತವೆ. ತಂಡವು ಕೋರ್ಸ್ಗಳ ಅನುಷ್ಠಾನ, ವಿದ್ಯಾರ್ಥಿ ಬೆಂಬಲ ವ್ಯವಸ್ಥೆ ಹಾಗೂ ಶೈಕ್ಷಣಿಕ ಗುಣಮಟ್ಟ ಕುರಿತು ವಿಶ್ಲೇಷಣೆ ನಡೆಸಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಕೆ.ಬಿ ಶಿವಕುಮಾರ್, ಕಾರ್ಯದರ್ಶಿ ಸುನಿಲ್ ಕುಮಾರ್, ಜಂಟಿ ಕಾರ್ಯದರ್ಶಿ ವಿನಯ್, ದೂರಶಿಕ್ಷಣ ಕೇಂದ್ರದ ಸಂಯೋಜಕರಾದ ಡಾ. ಯೋಗೀಶ್ ಡಿ. ಪಿ, ಹಾಗೂ ಭರತ್ ಭೂಷಣ್, ಮಂಜುನಾಥ್ ಕೆ.ಟಿ, ಬೋಧಕ ಸಿಬ್ಬಂದಿಗಳು ಹಾಜರಿದ್ದರು.
For More Updates Join our WhatsApp Group :




