ಹರಾರೆ: ಇಲ್ಲಿನ ಬುಲವಾಯೊದಲ್ಲಿ ಭಾನುವಾರ ನಡೆದ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ 80 ರನ್ಗಳಿಂದ ಸೋಲು ಅನುಭವಿಸಿತು.
ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 40.2 ಓವರ್ಗಳಲ್ಲಿ 205 ರನ್ಗಳಿಗೆ ಆಲೌಟಾಯಿತು. ಪಾಕಿಸ್ತಾನ 21 ಓವರ್ಗಳಲ್ಲಿ 6 ವಿಕೆಟ್ಗೆ 60 ರನ್ ಗಳಿಸಲಷ್ಟೇ ಶಕ್ತವಾಯಿತು. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದ್ದರಿಂದ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ, ಜಿಂಬಾಬ್ವೆ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.
ಜಿಂಬಾಬ್ವೆ ಉತ್ತಮ ಬ್ಯಾಟಿಂಗ್: 9ನೇ ಕ್ರಮಾಂಕದಲ್ಲಿ ಕ್ರೀಸಿಗೆ ಬಂದ ಬ್ಯಾಟರ್ ಎನ್ಗ್ರಾವ 48 ರನ್ಗಳ ಮಹತ್ವದ ಇನ್ನಿಂಗ್ಸ್ ಆಡಿದರು. ಸಿಕಂದರ್ ರಾಜಾ 39 ರನ್ ಕೊಡುಗೆ ನೀಡಿದರು.
ಪಾಕ್ ಬೌಲರ್ಗಳಾದ ಸಲ್ಮಾನ್ ಅಘಾ (3/42) ಮತ್ತು ಫೈಝಲ್ ಅಕ್ರಮ್ (3/24) ವಿಕೆಟ್ ಪಡೆದರು.
ಪಾಕ್ ಬ್ಯಾಟಿಂಗ್ ವೈಫಲ್ಯ: ಪಾಕ್ ಪರ ಆರಂಭಿಕ ಆಟಗಾರ ಸ್ಯಾಮ್ ಅಯೂಬ್ 11, ಅಬ್ದುಲ್ಲಾ ಶಫೀಕ್ 1, ಕಮ್ರಾನ್ ಗುಲಾಮ್ 17, ಸಲ್ಮಾನ್ ಅಘಾ 4, ಹಸೀಬುಲ್ಲಾ ಖಾನ್ 0, ಇರ್ಫಾನ್ ಖಾನ್ 7, ನಾಯಕ ರಿಜ್ವಾನ್ ಅಜೇಯ 19 ರನ್ ಗಳಿಸಿದರು.
ಜಿಂಬಾಬ್ವೆ ಪರ ಮುಜರಬಾನಿ (2/9), ಸೀನ್ ವಿಲಿಯಮ್ಸ್ (2/12) ಮತ್ತು ಸಿಕಂದರ್ ರಜಾ (2/7) ವಿಕೆಟ್ ಉರುಳಿಸಿದರು.