ಬೆಂಗಳೂರು: ಸಾಮಾನ್ಯವಾಗಿ ಪೋಷಕರು ಎಲ್ಲಿ ಹೋದ್ರು ತಮ್ಮ ಮಕ್ಕಳನ್ನು ಸಹ ಜೊತೆಯಲ್ಲಿಯೇ ಕರೆದುಕೊಂಡು ಹೋಗ್ತಾರೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಪೋಷಕರಿಬ್ಬರು ತಮ್ಮ ಹೆತ್ತ ಮಗನನ್ನೇ ಏರ್ಪೋರ್ಟ್ನಲ್ಲಿ ಬಿಟ್ಟು ಫಾರಿನ್ ಟ್ರಿಪ್ಗೆ ಹೋಗಿದ್ದಾರೆ. ಪಾಸ್ಪೋರ್ಟ್ ಅವಧಿ ಮುಕ್ತಾಯವಾಯಿತೆಂಬ ಕಾರಣಕ್ಕೆ ಮಗುವನ್ನು ಏರ್ಪೋರ್ಟ್ನಲ್ಲಿ ಒಂಟಿಯಾಗಿ ಬಿಟ್ಟು ಟ್ರಿಪ್ ಹೋಗಿದ್ದಾರೆ.
ತಂದೆ-ತಾಯಿ ಎಲ್ಲಿ ಹೋದರೂ ತಮ್ಮ ಮಕ್ಕಳನ್ನು ಸಹ ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ. ವಿಶೇಷವಾಗಿ ಟ್ರಿಪ್ ಪಿಕ್ನಿಕ್ ಹೋಗುವಾಗಂತೂ ಮಕ್ಕಳನ್ನು ಬಿಟ್ಟು ಹೋಗುವುದೇ ಇಲ್ಲ. ಮಕ್ಕಳನ್ನು ಖುಷಿ ಪಡಿಸುವ ಸಲುವಾಗಿಯೇ ಅವರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಾರೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಹೆತ್ತ ತಂದೆ-ತಾಯಿಯೇ ತಮ್ಮ ಮಗುವನ್ನು ಏರ್ಪೋರ್ಟ್ನಲ್ಲಿ ಬಿಟ್ಟು ಫಾರಿನ್ ಟ್ರಿಪ್ ಹೋಗಿದ್ದಾರೆ. ಮಗುವಿನ ಪಾಸ್ಪೋರ್ಟ್ ಅವಧಿ ಮುಗಿದಿದೆಯೆಂಬ ಕಾರಣಕ್ಕೆ ಮಗುವನ್ನು ಸ್ಪೇನ್ನ ಬಾರ್ಸಿಲೋನಾದಲ್ಲಿರುವ ಏರ್ಪೋರ್ಟ್ನಲ್ಲಿಯೇ ಬಿಟ್ಟು ಟ್ರಿಪ್ ಹೋಗಿದ್ದು, ತಂದೆ ತಾಯಿಯ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಮಗುವನ್ನು ಏರ್ಪೋರ್ಟ್ನಲ್ಲಿ ಬಿಟ್ಟು ಟ್ರಿಪ್ ಹೊರಟ ಪೋಷಕರು:
ಈ ಘಟನೆ ಸ್ಪೇನ್ನ ಬಾರ್ಸಿಲೋನಾದಲ್ಲಿ ನಡೆದಿದ್ದು, ಪೋಷಕರಿಬ್ಬರು ಹೆತ್ತ ಮಗನನ್ನೇ ಏರ್ಪೋರ್ಟ್ನಲ್ಲಿ ಬಿಟ್ಟು ಫಾರಿನ್ ಟ್ರಿಪ್ಗೆ ಹೋಗಿದ್ದಾರೆ. ಮಗುವಿನ ಪಾಸ್ಪೋರ್ಟ್ ಅವಧಿ ಮುಗಿದಿದೆ ಹಾಗೂ ಮಗುವಿನ ಬಳಿ ವೀಸಾ ಕೂಡಾ ಇರಲಿಲ್ಲ ಎಂಬ ಕಾರಣಕ್ಕೆ 10 ವರ್ಷದ ಮಗನನ್ನು ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ಟ್ರಿಪ್ ಹೋಗಿದ್ದಾರೆ.
Read more: 10 ವರ್ಷದ ಮಗನನ್ನು ಏರ್ಪೋರ್ಟ್ನಲ್ಲಿಯೇ ಬಿಟ್ಟು ಟ್ರಿಪ್ಗೆ ಹೋದ ತಂದೆ-ತಾಯಿ; ಕಾರಣ ಏನು ಗೊತ್ತಾ?