ದೇವನಹಳ್ಳಿ ರಸ್ತೆ ಸುರಕ್ಷತೆ ಬಗ್ಗೆ ಜನರ ಆಗ್ರಹ…!

ವಿಜಯಪುರ(ದೇವನಹಳ್ಳಿ): ದೇವನಹಳ್ಳಿಯಿಂದ ಪಟ್ಟಣಕ್ಕೆ ಬರುವ ಮುಖ್ಯರಸ್ತೆಯಲ್ಲಿರುವ ಸ್ವಾಗತ ಕಮಾನಿನ ಬಳಿಯ ಬೈಪಾಸ್ ರಸ್ತೆ ಬಳಿ ಎಚ್ಚರಿಕೆ ಹಾಗೂ ಸುರಕ್ಷತಾ ನಿಯಮಗಳ ಫಲಕ ಅಳವಡಿಸಬೇಕೆಂದು ಇಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.

ಕೋಲಾರದ ಕಡೆಗೆ ಸಾಗುವ ವಾಹನಗಳು ಈ ರಸ್ತೆಯಲ್ಲಿ ಸಾಗುತ್ತವೆ. ಮತ್ತೊಂದು ರಸ್ತೆಯಲ್ಲಿ ಪಟ್ಟಣದೊಳಗೆ ಪ್ರವೇಶ ಮಾಡುತ್ತವೆ. ಮೂರು ರಸ್ತೆಗಳು ಕೂಡುವ ಕಡೆಯಲ್ಲಿ ಯಾವುದೇ ಫಲಕ ಅಳವಡಿಸಿದೇ ಇರುವುದು ಅಪಾಯಕ್ಕೆ ಎಡೆ ಮಾಡಿಕೊಟ್ಟಿದೆ. ಈ ಸ್ಥಳ ಅಪಘಾತಗಳ ಕೇಂದ್ರವಾಗಿ ಮಾರ್ಪಟ್ಟಿದೆ.

ವಿಜಯಪುರದ ಕಡೆಯಿಂದ ದೇವನಹಳ್ಳಿ ಮಾರ್ಗವಾಗಿ ಬೆಂಗಳೂರು, ದೊಡ್ಡಬಳ್ಳಾಪುರ, ಯಲಹಂಕದ ಕಡೆಗೆ ಸಂಚರಿಸುವ ವಾಹನಗಳು ಇದೇ ರಸ್ತೆಯಿಂದ ಸಾಗುತ್ತವೆ. ಕೋಲಾರದ ಕಡೆಯಿಂದ ಬೈಪಾಸ್ ಮೂಲಕ ಬರುವ ವಾಹನಗಳು ಇಲ್ಲೆ ಮುಖ್ಯರಸ್ತೆಗೆ ಸೇರಿಕೊಳ್ಳುತ್ತವೆ. ಆದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಎಚ್ಚರಿಕೆಯ ಫಲಕ ಅಳವಡಿಸಿಲ್ಲ, ವೇಗಮಿತಿ ನಿಗದಿಪಡಿಸಿಲ್ಲ. ರಾತ್ರಿಯ ವೇಳೆ ಈ ಸ್ಥಳದಲ್ಲಿ ಹೆಚ್ಚು ಅಪಘಾತಗಳು ಸಂಭವಿಸಿವೆ. ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಅಪಘಾತಗಳು ಸಂಭವಿಸಿದಾಗ ಕೆಲವು ದಿನಗಳು ಪೊಲೀಸರು ಬ್ಯಾರಿಕೇಡ್ ಹಾಕಿ, ವಾಹನಗಳ ವೇಗಕ್ಕೆ ಕಡಿವಾಣ ಹಾಕುತ್ತಾರೆ. ಪುನಃ ಯಥಾಸ್ಥಿತಿಯಲ್ಲಿ ವಾಹನಗಳು ಓಡಾಡುತ್ತವೆ ಎನ್ನುತ್ತಾರೆ ಸ್ಥಳೀಯ ಮುಖಂಡ ಶಾಮಣ್ಣ.

ಫ್ಲೆಕ್ಸ್, ಬ್ಯಾನರ್ ಕಾಟ: ವಿಜಯಪುರದ ಕಡೆಯಿಂದ ಹೋಗುವ ವಾಹನಗಳು, ಬೈಪಾಸ್ ರಸ್ತೆಯಲ್ಲಿ ಬರುವ ವಾಹನಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಪ್ಲೆಕ್ಸ್ ಗಳು, ಬ್ಯಾನರ್ ಕಟ್ಟಿರುತ್ತಾರೆ. ಅಲ್ಲದೆ ಗಿಡಗಂಟಿಗಳು ದಟ್ಟವಾಗಿ ಬೆಳೆದು ನಿಂತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ ಎನ್ನುತ್ತಾರೆ ಸ್ಥಳೀಯ ಅನಿಸ್.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಮುಖ್ಯರಸ್ತೆಯಲ್ಲಿ ಅರ್ಧ ಕಿ.ಮೀ. ದೂರದಿಂದಲೇ ಎಚ್ಚರಿಕೆಯ ಫಲಕ ಅಳವಡಿಸಬೇಕು. ಇಲ್ಲಿನ ವಿದ್ಯುತ್ ಕಂಬಗಳಿಗೆ ವಿದ್ಯುತ್ ದೀಪ ಅಳವಡಿಸಬೇಕು ಎಂದು ಅವರು ಒತ್ತಾಯಿಸಿದರು.

Pragati TV Social Connect for more latest u

Leave a Reply

Your email address will not be published. Required fields are marked *