ಬೆಂಗಳೂರು: ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆ ಆರಂಭದ ಪೂರ್ವಬಿಸಿಲಿನಲ್ಲೇ ವಿವಾದವೊಂದು ಸಿಡಿದೆದ್ದಿದೆ. ಕ್ರಿಶ್ಚಿಯನ್ ಧರ್ಮದ ಅಡಿಯಲ್ಲಿ ಇದ್ದ 33 ಉಪಜಾತಿಗಳ ಹೆಸರುಗಳನ್ನು ಡ್ರಾಪ್ಡೌನ್ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ತಿಳಿಸಿದ್ದಾರೆ.
ನಾಳೆಯಿಂದ ಸಮೀಕ್ಷೆ ಆರಂಭ
ಮಾಧ್ಯಮಗಳೊಂದಿಗೆ ಮಾತನಾಡಿದ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್,
- “ನಾಳೆಯಿಂದ ರಾಜ್ಯಾದ್ಯಂತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದೆ.”
- ಜಾತಿ, ಧರ್ಮ, ಉಪಜಾತಿ ನಮೂದಿಸಲು ಜನರಿಗೆ ಸ್ವಇಚ್ಛೆ ಇದೆ ಎಂದರು.
ಡ್ರಾಪ್‌ಡೌನ್ ಪಟ್ಟಿಯಿಂದ 33 ಕ್ರಿಶ್ಚಿಯನ್ ಉಪಜಾತಿಗಳನ್ನು ಕೈಬಿಡಲು ನಿರ್ಧಾರ
- ಹಿಂದಿನ ಕಾಂತರಾಜು ಸಮೀಕ್ಷೆಯಲ್ಲಿದ್ದ ಡೇಟಾವನ್ನು ಅನುಸರಿಸಲಾಗಿದೆ ಎಂದು ತಿಳಿಸಿದರು.
- 148 ಹೊಸ ಜಾತಿಗಳು ಸೇರಿಸಿ ಈಗ ಒಟ್ಟು 1561 ಜಾತಿಗಳ ಪಟ್ಟಿ ಸಿದ್ಧವಾಗಿದೆ.
- ಕ್ರಿಶ್ಚಿಯನ್ ವಿಭಾಗದ 33 ಉಪಜಾತಿಗಳನ್ನು ಡ್ರಾಪ್‌ಡೌನ್ನಿಂದ ತೆಗೆದುಹಾಕಲಾಗಿದೆ.
ಜಾತಿಗಣತಿ: ಸ್ಮಾರ್ಟ್ ಸರ್ವೆ ವ್ಯವಸ್ಥೆ
- ಸರ್ವೆಗಾಗಿ ಆಧಾರ್ ಕಡ್ಡಾಯ
- ಪ್ರತಿ ಮನೆಯನ್ನ ಜಿಯೋ ಟ್ಯಾಗ್ ಮಾಡಿ ಡಿಜಿಟಲ್ ಮ್ಯಾಪಿಂಗ್
- 60 ಪ್ರಶ್ನೆಗಳ ಆಧುನಿಕ ಆ್ಯಪ್ ಮೂಲಕ ಮಾಹಿತಿ ಸಂಗ್ರಹ
- ಸಮೀಕ್ಷೆಯು ಪಡಿತರ ಚೀಟಿ, ಆಧಾರ್, ಮನೆ ಪಟ್ಟಿ ಇತ್ಯಾದಿ ಆಧಾರದ ಮೇಲೆ ನಡೆಯಲಿದೆ.
ಗೊಂದಲಕ್ಕಿಲ್ಲ ಸ್ಥಾನ – ಆಯೋಗದ ಸ್ಪಷ್ಟನೆ
- ಡ್ರಾಪ್ಡೌನ್ ಪಟ್ಟಿ ಅನುಕೂಲಕ್ಕಾಗಿ ಮಾತ್ರ
- ಯಾವುದೇ ರೀತಿಯ ಪ್ರಮಾಣಪತ್ರ ಅಥವಾ ಅಧಿಕೃತ ದಾಖಲೆಗಾಗಿ ಉಪಯೋಗಿಸುವಂತಿಲ್ಲ
- ಯಾರು ಬೇಕಾದರೂ ತಮ್ಮ ಜಾತಿ ಅಥವಾ ಉಪಜಾತಿಯನ್ನು ‘ಇತರೆ’ ವಿಭಾಗದಲ್ಲಿ ಬರೆಯಬಹುದು
- ಉದಾಹರಣೆಗೆ: ಬ್ರಾಹ್ಮಣ ಕ್ರಿಶ್ಚಿಯನ್ ಅಥವಾ ಒಕ್ಕಲಿಗ ಕ್ರಿಶ್ಚಿಯನ್ ಎಂಬಂತೆ ನಮೂದಿಸಬಹುದು
ಏನು ಪ್ರಶ್ನೆ ಮಾಡಲಾಗುತ್ತದೆ?
- ನಿಮ್ಮ ಧರ್ಮ ಏನು?
- ಜಾತಿ / ಉಪಜಾತಿ ಹೇಗೆ ಉಲ್ಲೇಖಿಸುತ್ತೀರಿ?
- ಈ ಜಾತಿಗೆ ಬೇರೆ ಹೆಸರುಗಳಿವೆಯೆ?
- ನೀವು ಯಾವ ವರ್ಗಕ್ಕೆ ಸೇರಿದವರು (SC/ST/OBC/Other)?
ಹೈಲೈಟ್ಸ್:
1561 ಜಾತಿಗಳ ಪಟ್ಟಿ ಸಿದ್ಧ
ಡ್ರಾಪ್‌ಡೌನ್ ಪಟ್ಟಿಗೆ ಆಧಾರ @ ಕಾಂತರಾಜು ಸಮೀಕ್ಷೆ
ಸ್ವಇಚ್ಛೆಯಿಂದ ನಮೂದು ಮಾಡುವ ಅವಕಾಶ
ಕ್ರಿಶ್ಚಿಯನ್ ಉಪಜಾತಿಗಳ ಹೆಸರು ‘ಇತರೆ’ ವಿಭಾಗದಲ್ಲಿ ನಮೂದಿಸಬಹುದಾಗಿದೆ
For More Updates Join our WhatsApp Group :
