ಬೆಂಗಳೂರು: ನಗರದ ರಾಮೇಶ್ವರಂ ಕೆಫೆ ಸ್ಪೋಟ ಕೇಸ್ ಸಂಬಂಧ ಎನ್ಐಎ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದೆ. ಆ ಚಾರ್ಜ್ ಶೀಟ್ ನಲ್ಲಿ ರಾಮೇಶ್ವರಂ ಕೆಫೆ ದಿನವೇ ಕರ್ನಾಟಕ ಬಿಜೆಪಿ ಕಚೇರಿಯನ್ನು ಸ್ಪೋಟಿಸಲು ಪ್ಲಾನ್ ಮಾಡಿದ್ರು ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದಂತ ಸ್ಪೋಟಕ ಪ್ರಕರಣ ಸಂಬಂಧ ಎನ್ಐಎಯಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಪ್ರಕರಣ ಸಂಬಂಧ ನಾಲ್ವರು ಆರೋಪಿಗಳಾದಂತ ಅಬ್ದುಲ್ ಮಿತನ್ ತಾಹಾ, ಮುಸಾವೀರ್ ಹುಸೇನ್, ಮಾಜ್ ಮುನೀರ್ ಅಹ್ಮದ್ ಹಾಗೂ ಮುಜಾಮಿಲ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಎನ್ಐಎ ಸಲ್ಲಿಸಿರುವಂತ ಚಾರ್ಜ್ ಶೀಟ್ ನಲ್ಲಿ ಆರೋಪಿಗಳು ಕರ್ನಾಟಕ ಬಿಜೆಪಿ ಕಚೇರಿಯನ್ನೂ ಸ್ಪೋಟಿಸಲು ಪ್ಲಾನ್ ಮಾಡಿದ್ದರು. ಆದರೇ ಅದು ವಿಫಲಗೊಂಡಿತ್ತು. ಹೀಗಾಗಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಪೋಟಿಸಿರುವುದಾಗಿ ತಿಳಿಸಿರುವುದಾಗಿ ತಿಳಿದು ಬಂದಿದೆ.