ಸ್ಪೇನ್ನಲ್ಲಿ: ಅಪ್ಪಟ ಭಾರತೀಯ ಶೈಲಿಯಲ್ಲಿ ಭೋಜ್ಪುರಿ ಚೌತಾಲಾ(ಗೀತೆ)ದೊಂದಿಗೆ ಪೋರ್ಟ್ ಆಫ್ ಸ್ಪೇನ್ನಲ್ಲಿ ಪ್ರಧಾನಿ ಮೋದಿಯನ್ನು ಸ್ವಾಗತಿಸಲಾಯಿತು. ಈ ಕುರಿತು ಖುದ್ದಾಗಿ ಮೋದಿ ಭೋಜ್ಪುರಿಯಲ್ಲೇ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಘಾನಾ ಭೇಟಿಯ ಎರಡನೇ ಹಂತವಾಗಿ ಟ್ರಿನಿಡಾಡ್ ಮತ್ತು ಟೊಬಾಗೊಗೆ ಆಗಮಿಸಿದ್ದಾರೆ. ಅನಿವಾಸಿ ಭಾರತೀಯರು ನೃತ್ಯ, ಸಂಗೀತ ಮತ್ತು ವೇಷಭೂಷಣಗಳಲ್ಲಿ ತಮ್ಮ ಭಾರತೀಯ ಪರಂಪರೆಯನ್ನು ಪ್ರದರ್ಶಿಸಿದರು. ವಿಶೇಷವೆಂದರೆ ಪೋರ್ಟ್ ಆಫ್ ಸ್ಪೇನ್ನಲ್ಲಿ ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಭೋಜ್ಪುರಿ ಚೌತಾಲಾವನ್ನು ಪ್ರಸ್ತುತಪಡಿಸಲಾಯಿತು. ಮೋದಿ ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಭಾರತ, ವಿಶೇಷವಾಗಿ ಪೂರ್ವ ಯುಪಿ, ಬಿಹಾರದ ನಡುವಿನ ಗಮನಾರ್ಹ ಸಂಪರ್ಕದ ಕುರಿತು ಮಾತನಾಡಿದರು.
