ಬೆಳಗಾವಿ : ಹೈಕೋರ್ಟ್ ಆದೇಶದ ಹೊರತಾಗಿಯೂ ಕೆಎಸ್ಆರ್ಟಿಸಿ ನೌಕರರು ಮಧ್ಯರಾತ್ರಿಯಿಂದಲೇ ಮುಷ್ಕರ ಆರಂಭಿಸಿದ್ದಾರೆ. ಬೆಳಗಾವಿಯಲ್ಲಿ ಮುಷ್ಕರದ ಪ್ರಭಾವ ನಿಚ್ಚಳವಾಗಿ ಕಾಣುತ್ತಿದೆ. ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಜನ ಬಸ್ಗಳಿಲ್ಲದೆ ಪರದಾಡುತ್ತಿದ್ದಾರೆ. ಬೆಳಗಾವಿ ವಿಭಾಗದ ಪೊಲೀಸ್ ಕಮೀಷನರ್ ಭೂಷನ್ ಗುಲಾಬರಾವ್ ಬೊರಸೆ ಮತ್ತು ಮತ್ತು ಡಿಸಿಪಿ ನಾರಾಯಣ ಬರ್ಮನಿ ಅವರು ತಮ್ಮ ಸಿಬ್ಬಂದಿಯೊಂದಿಗೆ ಕೇಂದ್ರೀಯ ಬಸ್ ನಿಲ್ದಾಣದಲ್ಲಿರುವ ಜನರನ್ನು ಖಾಸಗಿ ಬಸ್ಸು ಮತ್ತು ವಾಹನಗಳ ಮೂಲಕ ಅವರವರ ಊರುಗಳಿಗೆ ಕಳಿಸುವ ವ್ಯವಸ್ಥೆ ಮಾಡುತ್ತಿದ್ದಾರೆ.
ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಕಮೀಷನರ್ ಬೆಳಗ್ಗೆ 5.30 ರಿಂದಲೇ ಜಿಲ್ಲೆಯಲ್ಲಿ ಪೊಲೀಸರು ಕಾರ್ಯನಿರತರಾಗಿದ್ದಾರೆ ಎಂದರು.
For More Updates Join our WhatsApp Group :