ಜಪಾನ್ : ಜಪಾನ್ ರಾಜಕೀಯದಲ್ಲಿ ಮತ್ತೆ ಅಸ್ಥಿರತೆ ಎದುರಾಗಿದ್ದು, ಪ್ರಧಾನಿ ಶಿಗೆರು ಇಶಿಬಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (LDP) ಒಳಗಿನ ವಿಭಜನೆ ತಡೆಯುವ ಉದ್ದೇಶದಿಂದ ಹಾಗೂ ಜುಲೈನಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಎದುರಿಸಿದ ಹೀನಾಯ ಸೋಲಿನ ಹೊಣೆಗಾರಿಕೆಯಿಂದ ಇಶಿಬಾ ಹಿಂದೆ ಸರಿಯಲು ಒಪ್ಪಿಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಜಪಾನ್‌ನಲ್ಲಿ ಪ್ರಧಾನಿಗಳು ಸತತವಾಗಿ ಬದಲಾಗುತ್ತಿದ್ದು, ಯಾರೂ ಮೂರು ವರ್ಷಕ್ಕಿಂತ ಹೆಚ್ಚು ಕಾಲ ಅಧಿಕಾರದಲ್ಲಿ ಉಳಿಯಲು ಸಾಧ್ಯವಾಗಿಲ್ಲ.
ಜುಲೈ ಚುನಾವಣೆಯಲ್ಲಿ LDP ನೇತೃತ್ವದ ಒಕ್ಕೂಟವು ಮೇಲ್ಮನೆಯಲ್ಲಿ ಬಹುಮತ ಕಳೆದುಕೊಂಡಿತ್ತು. ಇದರಿಂದ ಪಕ್ಷದೊಳಗಿನ ವಿರೋಧ ಮತ್ತಷ್ಟು ಗಟ್ಟಿಗೊಂಡಿತು. ವಿಶೇಷವಾಗಿ ಬಲಪಂಥೀಯ ಬಣವು ಇಶಿಬಾ ರಾಜೀನಾಮೆ ನೀಡಬೇಕು ಎಂದು ನಿರಂತರವಾಗಿ ಒತ್ತಾಯಿಸುತ್ತಿತ್ತು. ಕೊನೆಗೂ ಅವರು ಒತ್ತಡಕ್ಕೆ ಮಣಿದು ಹುದ್ದೆ ತ್ಯಜಿಸಲು ನಿರ್ಧರಿಸಿದ್ದಾರೆ.
ಸೋಮವಾರ ನಡೆಯಲಿರುವ ಪಕ್ಷದ ನಾಯಕತ್ವ ಬದಲಾವಣೆ ಕುರಿತ ಮತದಾನಕ್ಕೂ ಮುನ್ನ ಇಶಿಬಾ ರಾಜೀನಾಮೆ ನೀಡುವ ಮೂಲಕ, ನೇರ ಅವಿಶ್ವಾಸ ನಿರ್ಣಯವನ್ನು ತಪ್ಪಿಸಿಕೊಂಡಿದ್ದಾರೆ.
ಇಶಿಬಾ ರಾಜಕೀಯ ಪಯಣ:
* 1986ರಿಂದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯ
* 2007–2008: ರಕ್ಷಣಾ ಸಚಿವ
* 2008–2009: ಕೃಷಿ ಮತ್ತು ಮೀನುಗಾರಿಕೆ ಸಚಿವ
* 2012–2014: ಎಲ್ಡಿಪಿ ಪ್ರಧಾನ ಕಾರ್ಯದರ್ಶಿ
* 2024: ಜಪಾನ್ ಪ್ರಧಾನಿ
For More Updates Join our WhatsApp Group :