ಬೆಂಗಳೂರು : ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಹೊಸ ಯೋಜನೆಯನ್ನು EaseMyTrip ಸಹ-ಸಂಸ್ಥಾಪಕ ಪ್ರಶಾಂತ್ ಪಿಟ್ಟಿ ತರಲು ಮುಂದಾಗಿದ್ದಾರೆ. ಇದರಿಂದ ಸಂಚಾರ ದಟ್ಟಣೆಯೂ 25-30% ರಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರು ಸಂಚಾರ ಯೋಜನೆಯ ಕುರಿತು ಪ್ರಮುಖ ನವೀಕರಣ! ಒಂದು ವರ್ಷದೊಳಗೆ ಬೆಂಗಳೂರು ಸಂಚಾರವನ್ನು 25-30% ರಷ್ಟು ಸುಧಾರಿಸುವ ವಿಶ್ವಾಸ ನನಗಿದೆ ಎಂದು ಈ ಪೋಸ್ಟ್ನಲ್ಲಿ ಹೇಳಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ಬೆಂಗಳೂರು ಜನರಿಗೆ ಸದ್ಯದಲ್ಲೇ ಒಂದು ಸಿಹಿಸುದ್ದಿ ಸಿಗಲಿದೆ. ಬೆಂಗಳೂರು ಟ್ರಾಫಿಕ್ಗೆ ಮುಕ್ತಿ ಸಿಗುವ ಕಾಲ ಸನಿಹ ಬಂದಿದೆ. ಹೌದು ಸಹ-ಸಂಸ್ಥಾಪಕ ಪ್ರಶಾಂತ್ ಪಿಟ್ಟಿ ಅವರು ಒಂದು ಘೋಷಣೆಯನ್ನು ಮಾಡಿದ್ದಾರೆ. ಈ ಹಿಂದೆ ಅವರು ಬೆಂಗಳೂರಿನ ದೀರ್ಘಕಾಲದ ಸಂಚಾರ ದಟ್ಟಣೆಯನ್ನು ಸರಿಪಡಿಸಲು 1 ಕೋಟಿ ರೂ ನೀಡುವುದಾಗಿ ವಾಗ್ದಾನ ನೀಡಿದರು. ಇದೀಗ ಅದಕ್ಕೆ ಪೂರಕವಾಗಿ ಹೊಸ ಅಪ್ಡೇಟ್ ನೀಡಿದ್ದಾರೆ. ಈ ಯೋಜನೆಯು ಒಂದು ವರ್ಷದೊಳಗೆ ನಗರದಲ್ಲಿ ಸಂಚಾರ ದಟ್ಟಣೆಯನ್ನು 25-30% ರಷ್ಟು ಕಡಿಮೆ ಮಾಡುತ್ತದೆ ಹೇಳಿದ್ದಾರೆ. ನಗರವನ್ನು ಕಾಡುತ್ತಿರುವ ಈ ಟ್ರಾಫಿಕ್ನ್ನು ಪರಿಹಾರ ಮಾಡಲು ಬೆಂಗಳೂರು ಸಂಚಾರ ಪೊಲೀಸ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ನಗರ ಪೊಲೀಸರ ಆಯುಕ್ತರನ್ನು ಭೇಟಿಯಾಗಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರು ಸಂಚಾರ ಯೋಜನೆಯ ಕುರಿತು ಪ್ರಮುಖ ನವೀಕರಣ! ಒಂದು ವರ್ಷದೊಳಗೆ ಬೆಂಗಳೂರು ಸಂಚಾರವನ್ನು 25-30% ರಷ್ಟು ಸುಧಾರಿಸುವ ವಿಶ್ವಾಸ ನನಗಿದೆ ಎಂದು ಈ ಪೋಸ್ಟ್ನ್ಲಲಿ ಬರೆದುಕೊಂಡಿದ್ದಾರೆ. ಈ ಕೆಲಸಕ್ಕೆ ಅಧಿಕಾರಿಗಳು, ಗೂಗಲ್ ತಂಡ, ಐಐಎಸ್ಸಿ ಪ್ರಾಧ್ಯಾಪಕರು, ವಿಜ್ಞಾನಿಗಳು, ರಸ್ತೆ ಎಂಜಿನಿಯರ್ಗಳು ಮತ್ತು ಸಂಚಾರ-ತಂತ್ರಜ್ಞಾನ ಉದ್ಯಮಿಗಳು ಸೇರಿದಂತೆ ಪ್ರಮುಖ ಸಾರ್ವಜನಿಕ ಮತ್ತು ಖಾಸಗಿ ಪಾಲುದಾರರ ಸಹಾಯ ಕೇಳಿದ್ದಾರೆ. ಬಿಟಿಪಿ ಮತ್ತು ಐಐಎಸ್ಸಿ ಎರಡೂ ಈಗಾಗಲೇ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಬಹು ಮರು-ಮಾರ್ಗ ಆಯ್ಕೆಗಳನ್ನು ಸಾಧಿಸಲು ಸಾಮರ್ಥ್ಯವಿರುವ ಸಿಮ್ಯುಲೇಶನ್ ಮಾದರಿಗಳನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ.