ವೀಲ್ ಚೇರ್ನಲ್ಲಿ ಆಗಮಿಸಿದ ಪ್ರತಿಕಾ ರಾವಲ್, ಟೀಮ್ ಇಂಡಿಯಾ ವಿಶ್ವಕಪ್ ಜಯೋತ್ಸವದಲ್ಲಿ ಸಂಭ್ರಮ!

ವೀಲ್ ಚೇರ್ನಲ್ಲಿ ಆಗಮಿಸಿದ ಪ್ರತಿಕಾ ರಾವಲ್, ಟೀಮ್ ಇಂಡಿಯಾ ವಿಶ್ವಕಪ್ ಜಯೋತ್ಸವದಲ್ಲಿ ಸಂಭ್ರಮ!

ಭಾರತ ತಂಡವು 52 ವರ್ಷಗಳ ಬಳಿಕ ಮಹಿಳಾ ಏಕದಿನ ವಿಶ್ವಕಪ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರ್ತಿ ಪ್ರತಿಕಾ ರಾವಲ್ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಅದು ಸಹ ವೀಲ್​ ಚೇರ್​ನಲ್ಲಿ ಆಗಮಿಸುವ ಮೂಲಕ..!

ಪ್ರತಿಕಾ ರಾವಲ್ ಈ ಬಾರಿಯ ಭಾರತ ತಂಡದ ಭಾಗವಾಗಿದ್ದರು. ಅಲ್ಲದೆ ಮೊದಲ 7 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಆದರೆ ಬಾಂಗ್ಲಾದೇಶ್ ವಿರುದ್ಧದ ಕೊನೆಯ ಲೀಗ್​ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಪ್ರತಿಕಾ ಅವರ ಕಾಲಿಗೆ ಗಂಭೀರ ಗಾಯವಾಗಿತ್ತು. ಹೀಗಾಗಿ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದಿಂದ ಹೊರಗುಳಿದಿದ್ದರು.

ಆದರೆ ಫೈನಲ್ ಪಂದ್ಯಕ್ಕೂ ಮುನ್ನ ವೈದ್ಯಕೀಯ ಚಿಕಿತ್ಸೆ ಪಡೆದಿದ್ದ ಪ್ರತಿಕಾ ರಾವಲ್ ವೀಲ್ ಚೇರ್​ನೊಂದಿಗೆ ಆಗಮಿಸಿ ಅಂತಿಮ ಪಂದ್ಯವನ್ನು ವೀಕ್ಷಿಸಿದ್ದರು. ಅಲ್ಲದೆ ಟೀಮ್ ಇಂಡಿಯಾ ವಿಜಯೋತ್ಸವದಲ್ಲಿ ಭಾಗಿಯಾಗುವ ಮೂಲಕ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.

ಇದೀಗ ಪ್ರತಿಕಾ ರಾವಲ್ ಅವರ ಡ್ಯಾನ್ಸಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಅಂದಹಾಗೆ ಈ ಬಾರಿಯ ವಿಶ್ವಕಪ್​ನಲ್ಲಿ 6 ಇನಿಂಗ್ಸ್​ಗಳಲ್ಲಿ ಆರಂಭಿಕಳಾಗಿ ಕಣಕ್ಕಿಳಿದಿದ್ದ ಪ್ರತಿಕಾ ರಾವಲ್ ಒಟ್ಟು 308 ರನ್​ಗಳಿಸಿ ಟೀಮ್ ಇಂಡಿಯಾ ಸೆಮಿಫೈನಲ್​ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಅದೇ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿ ಹೊಸ ಇತಿಹಾಸ ನಿರ್ಮಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *