ನವದೆಹಲಿ: ಸಾರ್ವಜನಿಕ ಸ್ಥಳದಲ್ಲಿ ಹೇಗೆ ವರ್ತನೆ ಮಾಡಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಇದರ ಜತೆಗೆ ನಮ್ಮ ಮುಂದೆ ಇರುವ ವ್ಯಕ್ತಿಯ ಪರಿಸ್ಥಿತಿ ನೋಡಬೇಕು. ಅದೆಷ್ಟೋ ಕಡೆ ಬಸ್ ಸೀಟಿಗಾಗಿ ಕಿತ್ತಾಟ ಮಾಡುವುದು, ರೈಲಿನಲ್ಲೂ ಇದು ಸಾಮಾನ್ಯ, ಆದರೆ ಅದಕ್ಕಾಗಿ ತರ್ಕ ಮಾಡುವ ಮೊದಲು ನಮ್ಮ ಮುಂದೆ ಇರುವ ವ್ಯಕ್ತಿಯ ಪರಿಸ್ಥಿತಿಯನ್ನು ನೋಡಿಕೊಂಡ ಮಾಡಬೇಕು. ಮಾನವೀಯತೆ ಕಳೆದುಕೊಂಡು ಹಿರಿಯರು, ಕಿರಿಯರು, ಗರ್ಭಿಣಿ, ಮಹಿಳೆಯರು ಎಂಬುದನ್ನು ನೋಡದೇ ನಡೆದುಕೊಳ್ಳುವುದು ಸರಿಯಲ್ಲ. ಎಕ್ಸ್ ಖಾತೆಯಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಇದು ದೆಹಲಿ ರೈಲನಲ್ಲಿ ನಡೆದ ಘಟನೆ ಎಂದು ಹೇಳಲಾಗಿದೆ. ಈ ವಿಡಿಯೋದಲ್ಲಿ ಹೇಳಿರುವ ಪ್ರಕಾರ ರೈಲು ಸೀಟಿಗಾಗಿ ಗರ್ಭಿಣಿಯ ಹೊಟ್ಟೆಗೆ ವ್ಯಕ್ತಿಯೊಬ್ಬ ಒದ್ದಿದ್ದು, ಗರ್ಭಿಣಿ ಅಸ್ವಸ್ಥಯಾಗಿ ಬಿದ್ದಿದ್ದಾರೆ. ಅದರೂ ಆ ವ್ಯಕ್ತಿ ಸೀಟ್ಗಾಗಿ ಜಗಳಕ್ಕೆ ಇಳಿದಿದ್ದಾನೆ.
For More Updates Join our WhatsApp Group :
