ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 21ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಅವರು ಇಂದು ಬಿಡುಗಡೆ ಮಾಡಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ನೈಸರ್ಗಿಕ ಕೃಷಿ ಶೃಂಗಸಭೆ ಉದ್ಘಾಟಿಸಿ ಪಿಎಂ ಕಿಸಾನ್ ಹಣವನ್ನೂ ಬಿಡುಗಡೆ ಮಾಡಿದ್ದಾರೆ. ಇದು 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂಗೂ ಅಧಿಕ ಹಣ ಸಂದಾಯವಾಗಿದೆ. ಈ ಯೋಜನೆಯಡಿಯಲ್ಲಿ, ಅರ್ಹ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳನ್ನು ಪಡೆಯುತ್ತಾರೆ . ಒಟ್ಟು ವಾರ್ಷಿಕವಾಗಿ 6,000 ರೂ.ಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ.
ಪ್ರಧಾನಿ ಮೋದಿ ಅವರು ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆಯನ್ನು ಉದ್ಘಾಟಿಸಿದ್ದಾರೆ. ಹಿಂದಿನ 20 ನೇ ಕಂತನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, 2.4 ಕೋಟಿ ಮಹಿಳಾ ರೈತರು ಸೇರಿದಂತೆ 9.8 ಕೋಟಿಗೂ ಹೆಚ್ಚು ರೈತರಿಗೆ ಪ್ರಯೋಜನವಾಗಿದೆ. ಮೊದಲ 20 ಕಂತುಗಳಲ್ಲಿ, ಪ್ರಧಾನಿ ಮೋದಿ ಈ ಯೋಜನೆಯಡಿ 3,90,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಿತರಿಸಿದ್ದಾರೆ.
ಪಿಎಂ ಕಿಸಾನ್ ಯೋಜನೆ ವೆಬ್ಸೈಟ್ ಮೂಲಕ ರಿಜಿಸ್ಟರ್ ಮಾಡುವ ಕ್ರಮ ಇಲ್ಲಿದೆ:
ಪಿಎಂ ಕಿಸಾನ್ ಯೋಜನೆ ವೆಬ್ಸೈಟ್ ವಿಳಾಸ: pmkisan.gov.in
ಮುಖ್ಯಪುಟದಲ್ಲಿ ಕೆಳಗೆ ತುಸು ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ನೋಡಬಹುದು.
ಅಲ್ಲಿ ‘ನ್ಯೂ ಫಾರ್ಮರ್ ರಿಜಿಸ್ಟ್ರೇಶನ್’ ಅನ್ನು ಕ್ಲಿಕ್ ಮಾಡಿ.
ಇಲ್ಲಿ ನಿಮ್ಮ ಆಧಾರ್ ನಂಬರ್, ಮೊಬೈಲ್ ನಂಬರ್ ನಮೂದಿಸಬೇಕು. ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ, ನಂತರ ಒಟಿಪಿ ಪಡೆದು ಮುಂದುವರಿಯಿರಿ.
ಇಲ್ಲಿ ನೀವು ಯೋಜನೆಗೆ ನೊಂದಾಯಿಸಿಕೊಳ್ಳಬಹುದು. ನಿಮ್ಮ ಹೆಸರು, ಭೂಮಿಯ ವಿವರ, ಪಹಣಿಯ ಪ್ರತಿ ಇತ್ಯಾದಿ ದಾಖಲೆಗಳನ್ನು ಒದಗಿಸಬೇಕು.
ನಂತರ ಸೇವ್ ಕ್ಲಿಕ್ ಮಾಡಿರಿ.
ಫಲಾನುಭವಿಯಾಗಿದ್ದರೂ ಕಂತು ಸಿಕ್ಕಿಲ್ಲವೇ? ಏನು ಮಾಡಬೇಕೆಂದು ಇಲ್ಲಿದೆ:
ಸಹಾಯಕ್ಕಾಗಿ ಸ್ಥಳೀಯ ಕೃಷಿ ಕಚೇರಿ, ಸಾಮಾನ್ಯ ಸೇವಾ ಕೇಂದ್ರ (CSC) ಗಳಿಗೆ ಭೇಟಿ ನೀಡಿ.
ನಿಮ್ಮ ಕಂತಿನ ಸ್ಥಿತಿ ತಿರಸ್ಕೃತ, ಬಾಕಿ ಅಥವಾ ತಡೆಹಿಡಿಯಲಾಗಿದೆ ಎಂದು ತೋರಿಸುತ್ತಿದ್ದರೆ, ಈ ಕೇಂದ್ರ ಪರಿಶೀಲನೆ ಮಾಡಬಹುದು.
ಜತೆಗೆ ಸೀಡಿಂಗ್, ಆಧಾರ್ ಪರಿಶೀಲನೆ, KYC ಅಥವಾ ಬ್ಯಾಂಕ್ ವಿವರಗಳು ಅಥವಾ ಯಾವುದೇ ಇತರ ಹೊಂದಾಣಿಕೆಯಾಗದ ಸಮಸ್ಯೆಗಳು ಆಗಿದ್ದಾರೆ. ಈ ಕೇಂದ್ರದ ಸಿಬ್ಬಂದಿಗಳು ಸಹಾಯ ಮಾಡುತ್ತಾರೆ.
For More Updates Join our WhatsApp Group :
