ಸಾಮಾಜಿಕ ಮಾಧ್ಯಮಗಳಿಂದ ‘ಮೋದಿ ಕಾ ಪರಿವಾರ್’​ ತೆಗೆದು ಹಾಕುವಂತೆ ಪ್ರಧಾನಿ ಮನವಿ

ನವದೆಹಲಿ: ಇತ್ತೀಚಿಗಷ್ಟೇ ಮುಕ್ತಾಯಗೊಂಡ 2024ರ ಲೋಕಸಭೆ ಚುನಾವಣೆಯಲ್ಲಿ ಎನ್​ಡಿಯ ಮೈತ್ರಿಕೂಟಕ್ಕೆ ಬಹುಮತ ನೀಡಿದ ಜನರಿಗೆ ಮತ್ತು ಬೆಂಬಲಿಗರಿಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಧನ್ಯವಾದ ಸಮರ್ಪಣೆ ಮಾಡಿದ್ದಾರೆ. ಜತೆಗೆ ಸಾಮಾಜಿಕ ಮಾಧ್ಯಮಗಳಿಂದ ‘ಮೋದಿ ಕಾ ಪರಿವಾರ್’​ (ಮೋದಿ ಕುಟುಂಬ) ತೆಗೆದು ಹಾಕುವಂತೆ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಮೋದಿ, ಚುನಾವಣಾ ಪ್ರಚಾರದ ವೇಳೆ ದೇಶಾದ್ಯಂತ ಜನರು ನನ್ನ ಮೇಲಿನ ಪ್ರೀತಿಯ ಸಂಕೇತವಾಗಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹೆಸರುಗಳ ಮುಂದೆ ‘ಮೋದಿ ಕಾ ಪರಿವಾರ್’ ಎಂದು ಬರೆದು ಕೊಂಡಿದ್ದಾರೆ. ಇದರಿಂದ ನನಗೆ ಸಾಕಷ್ಟು ಶಕ್ತಿ ಬಂದಿದೆ. ಸತತ ಮೂರನೇ ಬಾರಿಗೆ ಜನರು ಎನ್‌ಡಿಎಗೆ ಬಹುಮತ ನೀಡಿದ್ದಾರೆ. ರಾಷ್ಟ್ರದ ಸುಧಾರಣೆ ಮತ್ತು ಒಳಿತಿಗಾಗಿ ಕೆಲಸ ಮಾಡಲು ನಮಗೆ ಜನರು ಆದೇಶವನ್ನು ನೀಡಿದ್ದಾರೆ.”

“ನಾವೆಲ್ಲರೂ ಒಂದೇ ಕುಟುಂಬ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ರವಾನಿಸಿದ ಭಾರತದ ಜನರಿಗೆ ಮತ್ತೊಮ್ಮ ಧನ್ಯವಾದ ಹೇಳಲು ಬಯಸುತ್ತೇನೆ. ಇದೀಗ ನಿಮ್ಮ ಸಾಮಾಜಿಕ ಮಾಧ್ಯಮದಲ್ಲಿ ಸೇರಿಸಲಾದ ‘ಮೋದಿ ಕಾ ಪರಿವಾರ್’ ತೆಗೆದು ಹಾಕುವಂತೆ ವಿನಂತಿಸುತ್ತೇನೆ. ಇದರಿಂದ ಹೆಸರು ಬದಲಾಗಬಹುದು ಆದರೆ, ಭಾರತದ ಪ್ರಗತಿಗಾಗಿ ಶ್ರಮಿಸುತ್ತಿರುವ ಕುಟುಂಬವಾಗಿ ನಮ್ಮ ಬಂಧವು ಗಟ್ಟಿಯಾಗಿ ಮತ್ತು ಮುರಿಯದೇ ಉಳಿಯಲಿದೆ ಎಂದು ಬರೆದುಕೊಂಡಿದ್ದಾರೆ

Leave a Reply

Your email address will not be published. Required fields are marked *