ಬಾಂಗ್ಲಾದೇಶ : ಬಾಂಗ್ಲಾದೇಶ ಧಗಧಗ ಹೊತ್ತಿ ಉರಿಯುತ್ತಿದೆ, 1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗಿ ಆದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲು ನೀಡುವ ನಿರ್ಧಾರ ಈಗ ಸುನಾಮಿಯನ್ನೇ ಎಬ್ಬಿಸಿದೆ. ವಿದ್ಯಾರ್ಥಿ ಒಕ್ಕೂಟ ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಹೋರಾಟ ಆರಂಭಿಸಿದ್ದು, ಇದಕ್ಕೆ ಹೆದರಿದ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ದೇಶ ಬಿಟ್ಟು ಓಡಿ ಹೋಗಿದ್ದಾರೆ.
ಈಗ ಸಿಗುತ್ತಿರುವ ಮಾಹಿತಿ ಪ್ರಕಾರ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಹಾರಿದ್ದಾರೆ ಎನ್ನಲಾಗಿದೆ.
1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗಿ ಆಗಿದ್ದವರಿಗೆ, ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವ ನಿರ್ಧಾರ ಮೊದಲಿಗೆ ಕಿಚ್ಚು ಹೊತ್ತಿಸಿತ್ತು. ಹೀಗೆ ಶುರುವಾದ ಹೋರಾಟ, ಘೋರ ಹಿಂಸೆಗೆ ತಿರುಗಿತ್ತು. ಈವರೆಗೂ ಬಾಂಗ್ಲಾದೇಶದ ತುಂಬಾ ಈ ಹೋರಾಟಕ್ಕೆ ಅಂತಾ 100ಕ್ಕೂ ಹೆಚ್ಚು ಜನರು ಜೀವ ಬಿಟ್ಟಿದ್ದಾರೆ. ವಿದ್ಯಾರ್ಥಿ ಸಂಘಟನೆ ಸೇರಿದಂತೆ ಪ್ರತಿಭಟನೆಗೆ ಇಳಿದಿದ್ದ ಜನರು ಹಾಗೂ ಸರ್ಕಾರದ ನಡುವೆ ಘೋರ ಯುದ್ಧ ಶುರುವಾಗಿತ್ತು. ಹೀಗಾಗಿಯೇ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಬೇಕು ಎಂದು ಆದೇಶ ನೀಡಲಾಗಿತ್ತು. ಹೀಗೆ ಶುರುವಾಗಿದ್ದ ಹೋರಾಟ ಇದೀಗ ಅಂತಿಮ ಹಂತಕ್ಕೆ ಬಂದಿದ್ದು, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಓಡಿ ಬಂದಿದ್ದಾರೆ ಎನ್ನಲಾಗಿದೆ.
ದೇಶ ಬಿಟ್ಟು ಓಡಿ ಹೋಗಿದ್ದೇಕೆ?
ಅಂದಹಾಗೆ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗಿ ಆಗಿದ್ದವರಿಗೆ ಬಾಂಗ್ಲಾದ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಲು ಮೊದಲಿಗೆ ಶೇಖ್ ಹಸೀನಾ ಸರ್ಕಾರ ನಿರ್ಧರಿಸಿತ್ತು. ಆಗ ಸರ್ಕಾರ ನಿರ್ಧರಿಸಿದ್ದ ಶೇ. 30 ರಷ್ಟು ಮೀಸಲಾತಿಯನ್ನು ಬಾಂಗ್ಲಾದೇಶ ಸುಪ್ರೀಂಕೋರ್ಟ್ ಕಡಿತಗೊಳಿಸಿತ್ತು. ಹೀಗಾಗಿ ಬಾಂಗ್ಲಾ ನೆಲದಲ್ಲಿ ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಂಡು, ಜನರು ಬೀದಿಗೆ ಬಂದು ಬೆಂಕಿ ಹಚ್ಚಿದರು. ಹೀಗಾಗಿ ಪ್ರತಿಭಟನಾಕಾರರು & ಆಡಳಿತ ಪಕ್ಷದ ಬೆಂಬಲಿಗರ ನಡುವೆ ಹಿಂಸೆ ಶುರುವಾಗಿತ್ತು. ಹೀಗೆ ಶುರುವಾದ ಹಿಂಸೆಯಲ್ಲಿ 14 ಪೊಲೀಸರು ಸೇರಿ 100ಕ್ಕೂ ಹೆಚ್ಚು ಜನರು ಈವರೆಗೆ ಜೀವ ಬಿಟ್ಟಿದ್ದಾರೆ. ಹೀಗಿದ್ದಾಗಲೇ ಖುದ್ದು ಬಾಂಗ್ಲಾ ಪ್ರಧಾನಿ ದೇಶ ಬಿಟ್ಟು ಓಡಿ ಹೋಗಿದ್ದಾರೆ.
ಜಾಗತಿಕ ಮಟ್ಟದಲ್ಲೂ ಈ ಬಗ್ಗೆ ಚರ್ಚೆ
ಒಟ್ನಲ್ಲಿ ಭಾರತದ ಪಕ್ಕದ ದೇಶದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದೆ. ಈ ಹಿಂದೆ, ಬಾಂಗ್ಲಾದೇಶ ಪಾಕಿಸ್ತಾನದ ಭಾಗವಾಗಿದ್ದ ಸಮಯದಲ್ಲಿ ಭಾರತವೇ ಸಹಾಯ ಮಾಡಿತ್ತು. ಆ ಮೂಲಕ ಬಾಂಗ್ಲಾದೇಶ ಪಾಕಿಸ್ತಾನದ ಕಪಿಮುಷ್ಠಿ ಬಿಟ್ಟು ಸ್ವತಂತ್ರ ದೇಶವಾಗಲು ಇದೇ ನಮ್ಮ ಭಾರತ ಸಹಾಯ ಮಾಡಿತ್ತು. ಆದರೆ ಇದೀಗ ಮತ್ತೆ ಬಾಂಗ್ಲಾದೇಶ ಕುದಿಯುತ್ತಿದ್ದು, ಈ ಬಾರಿ ಬಾಂಗ್ಲಾ ಪ್ರಧಾನಿ ಭಾರತಕ್ಕೆ ಬಂದು ಆಶ್ರಯ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ಜಾಗತಿಕವಾಗಿ ಕೂಡ ಈ ವಿಚಾರದಲ್ಲಿ ಚರ್ಚೆ ಜೋರಾಗಿದೆ.