ತುಮಕೂರು: ನಂದಿಹಳ್ಳಿ – ಮಲ್ಲಸಂದ್ರ – ವಸಂತನರಸಾಪುರ ಬೈಪಾಸ್ ರಸ್ತೆಯ ಭೂಸ್ವಾಧೀನ ಸರ್ವೆ ಕಾರ್ಯಕ್ಕೆ ಬಂದ ಅಧಿಕಾರಿಗಳನ್ನು ತೀವ್ರ ಪ್ರತಿಭಟನೆ ಮೂಲಕ ವಾಪಸ್ ಕಳುಹಿಸಿಸಲಾಯಿತು. ದಿನಾಂಕ 12-11-2025ನೇ ಬುಧವಾರ ದಂದು ಗೌತಮಾರನಹಳ್ಳಿ ಬಸವಣ್ಣ ದೇವಸ್ಥಾನ ಸರ್ಕಲ್ ಹತ್ತಿರ ಪೋಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಚರ್ಚೆಯ ಮುಖಾಮುಖಿ ನಡೆಯಿತು.
ವರ್ತುಲ ರಸ್ತೆಗೆ ಭೂ ಸ್ವಾಧೀನ ಮಾಡುವ ಮುಂಚೆಯೆ ಹಲವು ವರ್ಷಗಳ ಹಿಂದೆಯೇ ಸರ್ವೆ ಆಗಿ ರಸ್ತೆ ಗುರುತಿಸಿದ್ದನ್ನು ಮರೆಮಾಚಿ ಈಗ ಮತ್ತೊಮ್ಮೆ ನೋಟಿಫಿಕೇಶನ್ ಮಾಡಿರುವುದು ಏಕೆ. ಅಲ್ಲದೆ 2013 ಭೂಸ್ವಾಧೀನ ಕಾಯ್ದೆ ಪ್ರಕಾರ ರೈತರ ಗ್ರಾಮ ಸಭೆ ನಡೆಸಿ ಒಪ್ಪಿಗೆ ಮತ್ತು ಸಾಮಾಜಿಕ ಪರಿಣಾಮದ ಅಂದಾಜು (ಎಸ್.ಐ.ಎ.) ವರದಿ ಪಡೆಯದೆ. ಏಕೆ ಭೂಸ್ವಾಧೀನಕ್ಕೆ ಮುಂದಾಗಿದ್ದು ಸರಿಯಲ್ಲ ಎಂದು ತಿಳಿಸಲಾಯಿತು.
ಈ ಭೂಸ್ವಾಧೀನ ಬೆಂಗಳೂರು ಕೇಂದ್ರಿತ ರಿಯಲ್ ಎಸ್ಟೇಟ್ ಉದ್ಯಮಿಗಳ ಪ್ರಭಾವಕ್ಕೆ ಒಳಗಾಗಿ ನಡೆಯುತ್ತಿದೆ ಎನ್ನುವ ದಕ್ಕೆ ಉದಾಹರಣೆ ಎಂದರೆ ರೈತರಿಗೆ ಭೂ ಸ್ವಾಧೀನ ನೋಟೀಸ್ ಕೊಟ್ಟಾಗ ಪ್ರತಿಯಾಗಿ ಅಹವಾಲು ನೀಡಿದರೆ ಇದರ ಸಂಬಂಧ ಕಾನೂನಾತ್ಮಕ ನಡವಳಿಕೆಗೆ ರೈತರಿಗೆ ಅವಕಾಶ ನೀಡಿದೆ. ಏಕಪಕ್ಷೀಯವಾಗಿ ಹಿಂಬರಹ ನೀಡಿರುವುದು ರೈತರ ಮೇಲೆ ಮಾಡಿರುವ ದೌರ್ಜನ್ಯ ಇದು ಪ್ರಜಾಪ್ರಭುತ್ವ ವಿರೋಧಿಯಾಗಿ ದೆ ಎಂದು ಚರ್ಚಿಸುವ ಸಂದರ್ಭದಲ್ಲಿಯೇ ಎಸ್.ಎಲ್.ಎ.ಒ. ಅಧಿಕಾರಿ ತನ್ನ ಸಿಬ್ಬಂದಿಯೊಂದಿಗೆ ಪಕ್ಕದ ಗೌರಿಪುರ ಗ್ರಾಮದ ರೈತರ ಜಮೀನಿನಲ್ಲಿ ಜಿಪಿಎಸ್ ಮಾಡಲು ಕಣ್ಣು ತಪ್ಪಿಸಿ ಹೋಗಿ ದ್ದು ರೈತರಿಗೆ ಸಿಟ್ಟು ತರಿಸಿತು ತಕ್ಷಣ ಸ್ವಾಧೀನ ಆಧಿಕಾರಿಗಳ ಸ್ಥಳಕ್ಕೆ ಹೋಗಿ ಸರ್ವೆ ಮುಂದು ವರಿಸಿದರೆ ಆಗುವ ಪರಿಣಾಮಕ್ಕೆ ನೀವೇ ಜವಾಬ್ದಾರರು ಎಂದು ಎಚ್ಚರಿಸಿದರು. ಜಿಲ್ಲಾಧಿಕಾರಿಗಳು ಸಭೆ ನಡೆಸುವ ಭರವಸೆ ನೀಡಿರುವುದು ಈಡೇರದ ನಾವು ಸರ್ವೆ ಕಾರ್ಯಕ್ಕೆ ಬಿಡುವುದಿಲ್ಲ ಎಂದು ಮಹಿಳೆಯರು ಮತ್ತು ರೈತರು ಧರಣಿ ಕುಳಿತಾಗ ಅಂತಿಮವಾಗಿ ಪೋಲೀಸ್ ಮತ್ತು ಕಂದಾಯ ಹಾಗೂ ಸರ್ವೆ ಅಧಿಕಾರಿಗಳು ಮಾತುಕತೆ ನಡೆಸಿ ಸರ್ವೆ ನಿಲ್ಲಿಸಿ ವಾಪಾಸ್ ಬಂದರು.
For More Updates Join our WhatsApp Group :




