RSS ಸಂಸ್ಥೆಯ ಮುಖ್ಯಸ್ಥರಾದ ಮೋಹನ್ ಭಾಗತ್ ರವರು ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಹಾಗೂ ಸ್ವಾತಂತ್ರ್ಯಕ್ಕಾಗಿ ಮಡಿದ ವೀರ ಯೋಧರನ್ನು ಅಪಮಾನಿಸಿರುವ ಹಿನ್ನೆಲೆಯಲ್ಲಿ ಕೂಡಲೇ ಮೋಹನ್ ಭಾಗವತ್ ದೇಶದ ಜನರ ಕ್ಷಮೆ ಕೋರಿ ಭಾರತದಿಂದ ತೋಲಗಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿರುವ ಬಗ್ಗೆ,
ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮುಖ್ಯಸ್ಥರಾದ ಮೋಹನ್ ಭಾಗವತ್-ಬಿಜೆಪಿ ಮೊದಲಿನಿಂದಲೂ ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಹಾಗೂ ವೀರ ಯೋಧರನ್ನು ಅಪಮಾನಿಸುತ್ತಾ ಬಂದಿದೆ ಅವರಿಗೆ ದೇಶದ ಸ್ವಾತಂತ್ರ್ಯದ ಕಾಳಜಿ ಇಲ್ಲ ಎಂಬುದನ್ನ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ನೇರವಾಗಿ ಆರೋಪ ಮಾಡುತ್ತಾ ಬಂದಿದೆ ಇವತ್ತಿನ ಅವರ ಹೇಳಿಕೆ ಬಿಜೆಪಿ ಆರ್.ಎಸ್.ಎಸ್ ನ ಕೀಳು ಮನಸ್ಥಿತಿಯನ್ನು ಬಹಿರಂಗಪಡಿಸಿದೆ,
ಶ್ರೀರಾಮ ಮಂದಿರ ನಿರ್ಮಾಣದ ನಂತರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂಬ ಹೇಳಿಕೆ ನೀಡಿರುವ ಮೋಹನ್ ಭಾಗವತ್ ಅವರ ಹೇಳಿಕೆಯನ್ನ ಬಿಜೆಪಿಯ ಯಾವ ಒಬ್ಬ ನಾಯಕನು ಸಹ ಖಂಡಿಸಿಲ್ಲ ಹಾಗಾದರೇ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಅವರು ಸಮರ್ಥಿಸಿಕೊಳ್ಳುತ್ತಿದ್ದಾರೇ ನಿಜವಾದ ದೇಶದ್ರೋಹಿಗಳು ಯಾರು ಎಂಬುದನ್ನು ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕರು ಬಹಿರಂಗಪಡಿಸಬೇಕು,
ದೇಶದಲ್ಲಿ ದುರಂತವೆಂದರೆ ಬಿಜೆಪಿ ಆರ್ ಎಸ್ ಎಸ್ ಸ್ವಾತಂತ್ರದ ಬಗ್ಗೆ ಎಂದು ಹೋರಾಟ ನಡೆಸಿಲ್ಲ ಸ್ವಾತಂತ್ರ ಹೋರಾಟಗಾರರ ಬಗ್ಗೆ ಕಿಂಚಿತ್ತು ಕಾಳಜಿಯನ್ನ ತೋರದೆ ಸ್ವಾತಂತ್ರ ಹೋರಾಟಗಾರರನ್ನು ನಿರಂತರವಾಗಿ ಅಪಮಾನಿಸುತ್ತಾ ಬಂದಿದೆ,
ಇತ್ತೀಚಿಗೆ ಮಹಾತ್ಮ ಗಾಂಧಿಯವರನ್ನು ಹಾಗೂ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸುವ ಹೇಳಿಕೆ ನೀಡಿರುವ ಗೃಹ ಸಚಿವ ಅಮಿತ್ ಶಾ ವಿರುದ್ಧ ಬಿಜೆಪಿ ನಾಯಕರು ತಪ್ಪು ಎಂದು ಹೇಳುವ ಧೈರ್ಯ ತೋರಲಿಲ್ಲ ಇಂತಹ ಕೆಟ್ಟ ಮನಸ್ಥಿತಿಯನ್ನ ಹೊಂದಿರುವ ಬಿಜೆಪಿ ನಾಯಕರು ದೇಶಪ್ರೇಮಿಗಳು ಎಂದು ಸ್ವಯಂ ಘೋಷಿತವಾಗಿ ಘೋಷಣೆ ಮಾಡಿಕೊಳ್ಳುತ್ತರೆ ಇಂದು ಸ್ವಯಂ ಪ್ರೇರಿತ ದೇಶಪ್ರೇಮಿಗಳ ಬಣ್ಣ ಬಹಿರಂಗವಾಗಿದೆ,
ದೇಶದ ಸ್ವಾತಂತ್ರ್ಯ ಹಾಗೂ ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಬಿಜೆಪಿ ಪಕ್ಷದ ನಾಯಕರು ಹಾಗೂ ಆರ್ ಎಸ್ ಎಸ್ ನ ಮುಖಂಡರು ಎಂದು ಸಹ ಭಾಗಿಯಾಗಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ,
ಮೋಹನ್ ಭಾಗ್ವತ್ ದೇಶದ ಕೋಟ್ಯಾಂತರ ದೇಶಭಕ್ತರನ್ನು ಅವಮಾನಿಸಿದ್ದಾರೆ ಈ ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಹಾಗೂ ಸ್ವಾತಂತ್ರ್ಯ ಸೇನಾನಿಗಳಿಗೆ ಮಾಡಿರುವ ಅಪಮಾನದ ಹಿನ್ನೆಲೆಯಲ್ಲಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಈ ಪ್ರತಿಭಟನೆಯ ಮೂಲಕ ಆಗ್ರಹ ಪಡಿಸುತ್ತಾ ಮೋಹನ್ ಭಾಗವತ್ ನೀಡಿರುವ ದೇಶದ್ರೋಹದ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ
ಎಸ್.ಮನೋಹರ್, ಕಾಂಗ್ರೆಸ್ ಮುಖಂಡರುಗಳಾದ ಎ. ಆನಂದ್, ಪ್ರಕಾಶ್, ಹೇಮರಾಜ್,ಕೆ ಟಿ ನವೀನ್ ಚಂದ್ರ,ಓಬ್ಳೇಶ್,ಚಿನ್ನಿ ಪ್ರಕಾಶ್, ಚಂದ್ರಶೇಖರ, ಉಮೇಶ್, ರಂಜಿತ್, ಸುಂಕದಕಟ್ಟೆ ನವೀನ್, ಕುಶಾಲ್ ಹರುವೆ ಗೌಡ, ಪುಟ್ಟರಾಜು, ನವೀನ್ ಸಾಯಿ, ಹಾಗೂ ಕಾಂಗ್ರೆಸ್ ಮುಖಂಡರುಗಳು ಭಾಗವಹಿಸಿದರು