ಚಿಕ್ಕಮಗಳೂರು : ನಗರದ ಪ್ರಮುಖ ರಸ್ತೆಗಳಲ್ಲಿ ಯುವಕರ ತಂಡವೊಂದು ಪ್ಯಾಲೆಸ್ಟೈನ್ ಧ್ವಜವನ್ನು ಹಿಡಿದು ಬೈಕ್ನಲ್ಲಿ ರೌಂಡ್ಸ್ ಹಾಕಿರುವ ವಿಡಿಯೋವೊಂದು ವೈರಲ್ ಆಗಿದೆ
ವಿಡಿಯೋ ವೈರಲ್ ಆದ ಬೆನ್ನಲ್ಲೇ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ನಾಲ್ವರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ಅಪ್ರಾಪ್ತ ಬಾಲಕರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಬಾಲಕರಿಗೆ ಪ್ಯಾಲೆಸ್ಟೈನ್ ಧ್ವಜ ಸಿಕ್ಕಿದ್ದು ಹೇಗೆ?
ಇನ್ಸ್ಪೆಕ್ಟರ್ ಗವಿರಾಜ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು ಪ್ಯಾಲೆಸ್ಟೈನ್ ಧ್ವಜ ಪ್ರಕರಣವನ್ನ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ 198ಅಡಿ ಪ್ರಕರಣ ದಾಖಲಾಗಿದೆ.
ಕೋಮು ಸೂಕ್ಷ್ಮ ಚಿಕ್ಕಮಗಳೂರು ನಗರದಲ್ಲಿ ಗಲಭೆಗೆ ಸಂಚು ಎಂದು ಹಿಂದೂ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ.
ಕೊಪ್ಪಳ ಜಿಲ್ಲೆ ಗಂಗಾವತಿಯ ಕಿಲ್ಲಾ ಏರಿಯಾದಲ್ಲಿ ಈದ್ ಮಿಲಾದ್ ಹಬ್ಬ ಆಚರಣೆ ಹಿನ್ನೆಲೆ ಬ್ಯಾನರ್ ಅಳವಡಿಸಲಾಗಿತ್ತು. ಆ ಬ್ಯಾನರ್ನ ಒಂದು ಭಾಗದಲ್ಲಿ ಫ್ರೀ ಪ್ಯಾಲೆಸ್ಟೈನ್ ಎಂದು ಬರೆಯಲಾಗಿತ್ತು. ಇದಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಮೊದಲಿಗೆ ಫ್ರೀ ಪ್ಯಾಲೆಸ್ಟೈನ್ ಬರಹಕ್ಕೆ ಬಿಳಿ ಬಣ್ಣ ಬಳಿದು ಪ್ಯಾಚ್ ಹಾಕಿದ್ದರು. ಸದ್ಯ ಇದೀಗ ಬ್ಯಾನರ್ ಅನ್ನು ಬದಲಾಯಿಸಿ ಹೊಸ ಬ್ಯಾನರ್ ಅಳವಡಿಸಲಾಗಿದೆ. ಈದ್ ಮಿಲಾದ್ ಹಬ್ಬಕ್ಕೆ ಶುಭ ಕೋರುವ ಬ್ಯಾನರ್ ಹಾಕಲಾಗಿದೆ.