ಇಂದಿನಿಂದ PU ಕಾಲೇಜುಗಳ ಆರಂಭ : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ವಿದ್ಯಾರ್ಥಿವೇತನ, ವಿದ್ಯಾಸಿರಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಜೂನ್ 1 ರ ಇಂದಿನಿಂದ ಪ್ರಥಮ ಹಾಗೂ ದ್ವಿತೀಯ ಪಿಯು ತರಗತಿಗಳು ಆರಂಭವಾಗುತ್ತಿದ್ದು, ಸ್ಥಳೀಯ ಅನುಕೂಲಕ್ಕೆ ತಕ್ಕಂತೆ ಪ್ರತಿದಿನ ಬೆಳಗ್ಗೆ 9:30 ರಿಂದ 3:30 ರ ವರೆಗೆ ಅಥವಾ 10:30 ರಿಂದ 4:30ರ ವರೆಗೆ ತರಗತಿಗಳನ್ನು ನಡೆಸಲು ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಇನ್ನು ಅಕ್ಟೋಬರ್ 2 ರಿಂದ ಅಕ್ಟೋಬರ್ 18ರವರೆಗೆ ದಸರಾ ರಜೆ ಇರಲಿದ್ದು ಅಕ್ಟೋಬರ್ 19 ರಿಂದ ಮಾರ್ಚ್ 31 (2025) ರ ವರೆಗೆ ಈ ಎರಡನೇ ಅವಧಿಯ ತರಗತಿಗಳು ನಡೆಯಲಿವೆ. ಇನ್ನು ಏಪ್ರಿಲ್ 1 (2025) ರಿಂದ ಬೇಸಿಗೆ ರಜೆ ಘೋಷಿಸಲಾಗಿದೆ.

ಇನ್ನುಳಿದಂತೆ 2024-25 ನೇ ಸಾಲಿನ ಪದವಿ ಪೂರ್ವ ತರಗತಿಗಳಿಗೆ ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ವಿದ್ಯಾರ್ಥಿಗಳು ದಂಡ ಶುಲ್ಕವಿಲ್ಲದೆ ಜೂನ್ 14ರ ಒಳಗೆ ಪ್ರವೇಶ ಪಡೆಯಬಹುದಾಗಿದೆ. ಜೂನ್ 29 ರ ಒಳಗೆ ಎಲ್ಲ ಪ್ರವೇಶ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ.

ಪ್ರವೇಶ ಶುಲ್ಕಗಳಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡಲಾಗಿಲ್ಲ. ಹೀಗಾಗಿ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಇದ್ದಂತೆ ಮುಂದುವರಿಸಲಾಗುತ್ತದೆ. ಜೊತೆಗೆ ಎಲ್ಲ ಕಾಲೇಜುಗಳು ಮೀಸಲಾತಿ ಅನ್ವಯ ಮೆರಿಟ್ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.

Leave a Reply

Your email address will not be published. Required fields are marked *