“ಬೆಂಕಿಯ ಜ್ವಾಲೆಯಿಂದ ಎಚ್ಚರವಾಗಿದ್ದೆ… ಕ್ಷಣಾರ್ಧದಲ್ಲೇ ಬಸ್ ಹೊತ್ತಿಕೊಂಡಿತು — ವೋಲ್ವೊ ದುರಂತ.

 “ಬೆಂಕಿಯ ಜ್ವಾಲೆಯಿಂದ ಎಚ್ಚರವಾಗಿದ್ದೆ... ಕ್ಷಣಾರ್ಧದಲ್ಲೇ ಬಸ್ ಹೊತ್ತಿಕೊಂಡಿತು — ವೋಲ್ವೊ ದುರಂತ.

ಕರ್ನೂಲ್: ಹೈದರಾಬಾದ್​ನಿಂದ ಬೆಂಗಳೂರಿಗೆ ಹೊರಟಿದ್ದ ಕಾವೇರಿ ಟ್ರಾವೆಲ್ಸ್​ನ ವೋಲ್ವೊ ಬಸ್ ಅಪಘಾತದ ಬಳಿಕ ಬೆಂಕಿಗಾಹುತಿಯಾಗಿದೆ. ಅದರಲ್ಲಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗೆಯೇ ಬಸ್​ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬಸ್ ಒಳಗೆ ಏನೇನಾಯ್ತು ಎಂದು ವೋಲ್ವೊ ಬಸ್ಸಿನೊಳಗಿದ್ದ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಎನ್​ಡಿಟಿವಿ Iಈ ಕುರಿತು ವರದಿ ಮಾಡಿದೆ, ಹರಿಕಾ ಎಂಬುವವರು ಮಾತನಾಡಿ, ನಿದ್ರಿಸುತ್ತಿದ್ದಾಗ ಏಕಾಏಕಿ ಬಸ್​ಗೆ ಬೆಂಕಿ ಹೊತ್ತಿಕೊಂಡಿತ್ತು.

ಬೆಂಕಿಯ ಜ್ವಾಲೆಯಿಂದಾಗಿ ಎಚ್ಚರವಾಗಿತ್ತು. ಏನು ನಡೆಯುತ್ತಿದೆ ಎಂದು ನೋಡುವಷ್ಟರಲ್ಲಿ ವೇಗವಾಗಿ ಬೆಂಕಿ ಹೊತ್ತಿಕೊಂಡಿತ್ತು. ಹಾಗೆಯೇ ತಾನು ಬಸ್ಸಿನ ಹಿಂಭಾಗದ ಗಾಜು ಒಡೆದು ಕೆಳಗೆ ಹಾರಿದೆ ಎಂದು ಹರಿಕಾ ಹೇಳಿಕೊಂಡಿದ್ದಾರೆ.

ತುರ್ತಾಗಿ ನಿರ್ಧಾರ ತೆಗೆದುಕೊಂಡ ಪರಿಣಾಮ ಬಸ್​​ಗೆ ಸಂಪೂರ್ಣವಾಗಿ ಬೆಂಕಿ ಹೊತ್ತಿಕೊಳ್ಳುವಷ್ಟರಲ್ಲಿ ಆಕೆ ಕೆಳಗೆ ಹಾರಿದ್ದರು. ಈ ಘಟನೆ ಬೆಳಗಿನ ಜಾವ 3.30ರ ಸುಮಾರಿಗೆ ನಡೆದಿದೆ. ವೋಲ್ವೊ ಬಸ್ ಬೈಕ್​ಗೆ ಡಿಕ್ಕಿ ಹೊಡೆದ ಬಳಿಕ ಸುಮಾರು 100 ಮೀಟರ್​​ಗಳಷ್ಟು ದೂರದವರೆಗೆ ಬೈಕ್​ ಅನ್ನು ತಳ್ಳಿಕೊಂಡೇ ಹೋಗಿತ್ತು. ಇದರಿಂದಾಗಿ ಬಸ್​​ಗೆ ಬೆಂಕಿ ಹೊತ್ತಿಕೊಂಡಿತ್ತು.

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಉಲ್ಲಿಂದಕೊಂಡ ಬಳಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಬಸ್ ಬೆಂಕಿಗೆ ಆಹುತಿಯಾಯಿತು . ದೂರದ ಮಾರ್ಗಗಳಲ್ಲಿ ಸಂಚರಿಸುವ ಸ್ಲೀಪರ್ ಬಸ್‌ಗಳಲ್ಲಿ, ಗೌಪ್ಯತೆಯನ್ನು ಕಾಪಾಡಲು ಸ್ಲೀಪರ್ ಸೀಟುಗಳಿಗೆ ಪರದೆಗಳನ್ನು ಅಳವಡಿಸಲಾಗುತ್ತದೆ.

ಬಸ್‌ನಿಂದ ಓಡಿಹೋಗುವ ಪ್ರಯಾಣಿಕರಿಗೆ ಇತರ ಸೀಟುಗಳಲ್ಲಿ ಜನರು ಇದ್ದರೋ ಇಲ್ಲವೋ ಎಂದು ನೋಡುವುದು ಕಷ್ಟವಾಗಿತ್ತು. ಇದು ಸ್ಲೀಪರ್ ಬಸ್ ಆಗಿರುವುದರಿಂದ, ನಾವು ಹತ್ತಿ ಮಲಗಿದ್ದೆವು. ಪರದೆಗಳಿಂದಾಗಿ ಎಷ್ಟು ಜನ ಇದ್ದಾರೆ ಎಂಬುದು ತಿಳಿಯಲಿಲ್ಲ ಎಂದು ಹರಿಕಾ ಹೇಳಿದ್ದಾರೆ.

ಮತ್ತೊಬ್ಬ ಪ್ರಯಾಣಿಕ ಸೂರ್ಯ ಎಂಬುವವರು ಮಾತನಾಡಿ, ಬೆಳಗಿನ ಜಾವ 2.45 ರ ಸುಮಾರಿಗೆ ಘಟನೆ ನಡೆದಿದೆ. ಒಂದು ಬೈಕ್ ಬಂತು, ಏನೋ ಆಯ್ತು. ನಮಗೆ ಸ್ಪಷ್ಟತೆ ಇಲ್ಲ. ಬೈಕ್ ಬಸ್ಸಿನ ಕೆಳಗೆ ಹೋಯಿತು, ಕಿಡಿಗಳು ಬರಲು ಪ್ರಾರಂಭಿಸಿದವು, ಮತ್ತು ನಂತರ ಬೆಂಕಿ ಹೊತ್ತಿಕೊಂಡಿತು. ಎಚ್ಚರವಿದ್ದವರು ಕೂಡಲೇ ಇಳಿದಿದ್ದಾರೆ. ಕೆಲವು ಶವಗಳು ಗುರುತು ಹಿಡಿಯಲಾಗದಷ್ಟು ಸಂಪೂರ್ಣವಾಗಿ ಸುಟ್ಟುಹೋಗಿವೆ .

ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50 ಸಾವಿರ ರೂಪಾಯಿಗಳ ಆರ್ಥಿಕ ನೆರವು ಘೋಷಿಸಿದ್ದಾರೆ. ಬೆಂಗಳೂರಿನಲ್ಲಿರುವ ಕಾವೇರಿ ಟ್ರಾವೆಲ್ಸ್​ ಬಂದ್ ಮಾಡಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *