ಇಂದೋರ್: ಇಂದೋರ್ದೆಹಲಿ ಪ್ಯಾಸೆಂಜರ್ರೈಲಿನಲ್ಲಿದ್ದ ಮಹಿಳೆಯೊಬ್ಬರು ರೈಲಿನ ಕಿಟಕಿಗಳನ್ನು ಒಡೆದಿರುವ ಘಟನೆ ನಡೆದಿದೆ. ಮಹಿಳೆಯ ಪರ್ಸನ್ನು ಯಾರೋ ಕದ್ದಿದ್ದರು. ಸರಿಯಾದ ಸಮಯಕ್ಕೆ ಆರ್ಪಿಎಫ್ ಸಹಾಯಕ್ಕೆ ಬರಲಿಲ್ಲ. ಇದರಿಂದ ಕೋಪಗೊಂಡ ಮಹಿಳೆ ಕಿಡಕಿಯ ಗಾಜನ್ನು ಒಡೆದಿದ್ದಾಳೆ. ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆಯ ಜತೆ ಮಗು ಕೂಡಾ ಇತ್ತು.
ವೈರಲ್ ಆಗಿರುವ ವಿಡಿಯೋದಲ್ಲಿ, ಮಹಿಳೆ ಎಸಿ ಕಂಪಾರ್ಟ್ಮೆಂಟ್ನಲ್ಲಿ ತನ್ನ ಸೀಟಿನಲ್ಲಿ ಕುಳಿತುಕೊಂಡು ಪಕ್ಕದಲ್ಲಿ ಒಂದು ಪುಟ್ಟ ಮಗುವಿನೊಂದಿಗೆ ಟ್ರೇ ಹಿಡಿದು ಕಿಟಕಿಯ ಗಾಜು ಒಡೆಯುತ್ತಿರುವುದನ್ನು ಕಾಣಬಹುದು. ಹಲವಾರು ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿ ಕೋಚ್ನ ಹೊರಗಿನಿಂದ ದೃಶ್ಯವನ್ನು ವೀಕ್ಷಿಸುತ್ತಿದ್ದರು.
For More Updates Join our WhatsApp Group :




