ಸದ್ಯಕ್ಕೆ ಪುಷ್ಪ 2 ಬಿಡುಗಡೆ ಇಲ್ಲ: ಅಲ್ಲು ಅರ್ಜುನ್ ಅಭಿಮಾನಿಗಳೆಗೆ ನಿರಾಸೆ

ಹೈದರಾಬಾದ್: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ-2 ಬಿಡುಗಡೆ ಮುಂದಕ್ಕೆ ಹೋಗಿದೆ. ಬರುವ ಆಗಷ್ಟ್​ 15ಕ್ಕೆ ಬಿಡುಗಡೆಯಾಗಬೇಕಿದ್ದ ಪುಷ್ಪ-ದಿ ರೂಲ್(ಪುಷ್ಪ 2) ಕಾರಣಾಂತರಗಳಿಂದ ಮುಂದೂಡಲಾಗಿದೆ.

ಬಿಡುಗಡೆಯ ದಿನಾಂಕವನ್ನು ಈಗಾಗಲೇ ಚಿತ್ರತಂಡ ಘೋಷಿಸಿತ್ತು. ಆದರೆ, ಘೋಷಣೆಯಾದ ದಿನವೇ ಚಿತ್ರ ಬಿಡುಗಡೆಯಾಗುವುದು ಸಂದೇಹ. ಹೊಸ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುತ್ತದೆ ಎಂದು ಚಿತ್ರ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಸಿನಿಮಾದ ಕೆಲಸಗಳು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಇತ್ತೀಚಿಗೆ ಅದರ ಅನಿರ್ದಿಷ್ಟ ಮುಂದೂಡಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಲವು ವದಂತಿಗಳು ಹರಿದಾಡುತ್ತಿದ್ದವು. ಅಂದುಕೊಂಡ ದಿನದಂದು ಚಿತ್ರದ ಬಿಡುಗಡೆ ಅಸಾಧ್ಯ ಎಂಬ ವರದಿಗಳು ಬಂದಿದ್ದವು. ಆದರೆ, ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಇದೀಗ ಪುಷ್ಪಾ 2 ಬಿಡುಗಡೆ ವಿಳಂಬದ ಕುರಿತು ಬಹುತೇಕ ದೃಢಪಡಿಸಲಾಗಿದೆ.

ಚಿತ್ರವು ನಿರೀಕ್ಷೆಯಂತೆ ಚಿತ್ರಮಂದಿರಗಳಲ್ಲಿ ಬರುವುದಿಲ್ಲ ಎಂದು ಅಲ್ಲು ಅರ್ಜುನ್ ಅವರ ನಿಕಟವರ್ತಿ ಶರತ್ ಚಂದ್ರ ನಾಯ್ಡು ಎಂಬುವರು ಟ್ವೀಟ್​ ಮೂಲಕ ಬಹಿರಂಗಪಡಿಸಿದ್ದಾರೆ. ನಿರೀಕ್ಷೆಯಂತೆ ಇದು ಅಲ್ಲು ಅರ್ಜುನ್ ಅಬರ ಅಭಿಮಾನಿಗಳಿಗೆ ನಿರಾಸೆ ತರಿಸಿದೆ

Leave a Reply

Your email address will not be published. Required fields are marked *