ಟಾಲಿವುಡ್ ನಟಿ ಸಮಂತಾ ರುಥ್ ಪ್ರಭು ವಿವಾಹ ಇಂದು ನೆರವೇರಿದೆ. ಕೊಯಿಮತ್ತೂರಿನ ಇಶಾ ಫೌಂಡೇಷನ್ನಲ್ಲಿರುವ ಲಿಂಗ ಭೈರವಿ ದೇವಾಲಯದಲ್ಲಿ ಕೇವಲ 30 ಜನರ ಸಮ್ಮುಖದಲ್ಲಿ ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಮಂತಾ ಮದುವೆ ಆಗಿದ್ದಾರೆ. ಮದುವೆ ಫೋಟೋಗಳನ್ನು ಸಮಂತಾ ಹಂಚಿಕೊಂಡಿದ್ದಾರೆ. ಹಾಗಾದರೆ,ಈ ರಾಜ್ ಯಾರು? ಅವರು ಚಿತ್ರರಂಗದಲ್ಲಿ ಮಾಡಿದ ಸಾಧನೆ ಏನು? ಆ ಬಗ್ಗೆ ಇಲ್ಲಿದೆ ವಿವರ.
ರಾಜ್ ನಿಡಿಮೋರು ಮತ್ತು ಡಿಕೆ (ಕೃಷ್ಣ ದಾಸರಕೋಟಪಲ್ಲಿ) ಜಂಟಿ ನಿರ್ದೇಶಕರು. ಇವರು 2003ರಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಿಂದಿಯಲ್ಲಿ ‘99’, ‘ಶೋರ್ ಇನ್ ದಿ ಸಿಟಿ’, ‘ಹ್ಯಾಪಿ ಎಂಡಿಂಗ್’, ‘ಎ ಜೆಂಟಲ್ಮೆನ್’, ರೀತಿಯ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಕೆಲವು ಚಿತ್ರಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಇವರ ನಿರ್ಮಾಣದ ತೆಲುಗಿನ ‘ಸಿನಿಮಾ ಬಂಡಿ’ ಸಿನಿಮಾ ಸಾಕಷ್ಟು ಸದ್ದು ಮಾಡಿತು.ಸಿನಿಮಾ ಇವರಿಗೆ ಹೆಚ್ಚು ಜನಪ್ರಿಯತೆ ನೀಡಲಿಲ್ಲ. ಆದರೆ, ಒಂದೇ ಒಂದು ವೆಬ್ ಸರಣಿ ಇವರ ಬದುಕು ಬದಲಿಸಿತು. ಅದುವೆ ‘ದಿ ಫ್ಯಾಮಿಲಿ ಮ್ಯಾನ್’.
ಮನೋಜ್ ಬಾಜ್ಪಾಯಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ‘ದಿ ಫ್ಯಾಮಿಲಿ ಮ್ಯಾನ್’ ಮೊದಲ ಸೀಸನ್ 2019ರಲ್ಲಿ ಪ್ರಸಾರ ಕಂಡಿತು. ಇದನ್ನು ನಿರ್ದೇಶನ ಮಾಡಿದ್ದು ಇದೇ ರಾಜ್ ಹಾಗೂ ಡಿಕೆ. ಅಲ್ಲಿಂದ ಇವರ ಬದುಕು ಬದಲಾಯಿತು. ಎಲ್ಲರೂ ಇವರನ್ನು ಗುರುತಿಸೋಕೆ ಆರಂಭಿಸಿದರು. ವೆಬ್ ಸರಣಿ ಲೋಕದಲ್ಲಿ ‘ದಿ ಫ್ಯಾಮಿ ಮ್ಯಾನ್’ ಹೊಸ ಅಲೆಯನ್ನೇ ಸೃಷ್ಟಿ ಮಾಡಿತು. 2021ರಲ್ಲಿ ಇದಕ್ಕೆ ಎರಡನೇ ಸೀಸನ್ ಪ್ರಸಾರ ಕಂಡಿತು.
For More Updates Join our WhatsApp Group :



