ಬೆಂಗಳೂರು: ನಟಿ ರಚಿತಾ ರಾಮ್ ಬಸವನಗುಡಿ ಕಡಲೆಕಾಯಿ ಪರಿಷೆಗೆ ಮಾಸ್ಕ್ ಧರಿಸಿ ಭೇಟಿ ನೀಡಿದರು. ಅಭಿಮಾನಿಗಳಿಂದ ಗುರುತಿಸಲ್ಪಡದೆ ಸಾರ್ವಜನಿಕರಂತೆ ಸುತ್ತಾಡಿ ಖುಷಿ ಪಟ್ಟರು. 18 ವರ್ಷಗಳ ನಂತರ ಪರಿಷೆಗೆ ಬಂದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಅವರ ಹೊಸ ಸಿನಿಮಾ ‘ಕ್ರಿಮಿನಲ್’ ಟೈಟಲ್ ಲಾಂಚ್ ಕೂಡ ಇಲ್ಲೇ ನಡೆದಿತ್ತು. ಅವರನ್ನು ಗುರುತಿಸಲಾಗದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಎಲ್ಲ ಕಡೆ ಜನ ಸಾಮಾನ್ಯರಂತೆ ಸುತ್ತಾಡಬೇಕು ಎಂಬ ಆಸೆ ಅನೇಕ ಸೆಲೆಬ್ರಿಟಿಗಳಿಗೆ ಇರುತ್ತದೆ. ಆದರೆ, ಅದು ಸಾಧ್ಯವಾಗುವುದೇ ಇಲ್ಲ. ಇದಕ್ಕೆ ಕಾರಣ ಅಭಿಮಾನಿಗಳು. ಸೆಲೆಬ್ರಿಟಿಗಳು ಹೋದಲ್ಲಿ ಬಂದಲ್ಲಿ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಈಗ ರಚಿತಾ ರಾಮ್ ಅವರು ತಮ್ಮ ಆಸೆ ಈಡೇರಿಸಿಕೊಳ್ಳಲು ಹೊಸ ಪ್ಲ್ಯಾನ್ ಮಾಡಿದ್ದರು. ನವೆಂಬರ್ 18ರಂದು ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆ ಸುತ್ತಾಡಿದ್ದಾರೆ. ಈ ವೇಳೆ ಅವರು ಮುಖಕ್ಕೆ ಮಾಸ್ಕ್ ಧರಿಸಿದ್ದರು. ಹೀಗಾಗಿ, ಯಾರೊಬ್ಬರೂ ಅವರನ್ನು ಗುರುತಿಸಲು ಸಾಧ್ಯವಾಗಲೇ ಇಲ್ಲ.
ರಚಿತಾ ರಾಮ್ ಅವರು ‘ಕ್ರಿಮಿನಲ್’ ಹೆಸರಿನ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಧ್ರುವ ಸರ್ಜಾ ನಾಯಕ. 8 ವರ್ಷಗಳ ಬಳಿಕ ಧ್ರುವ ಜೊತೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ಗೆ ನಿರೀಕ್ಷೆ ಮೂಡಿದೆ. ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಬಸವನಗುಡಿಯಲ್ಲೇ ನಡೆದಿದೆ. ಇದಾದ ಬಳಿಕ ರಚಿತಾ ಅವರು ಕಡಲೆಕಾಯಿ ಪರಿಷೆ ಸುತ್ತಾಡಿದ್ದಾರೆ.
ರಚಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ರಚಿತಾ ಅವರು ಮುಖಕ್ಕೆ ಮಾಸ್ಕ್ ಧರಿಸಿದ್ದರು. ಹೀಗಾಗಿ ಯಾರಿಗೂ ಅವರ ಗುರುತು ಸಿಕ್ಕಿಲ್ಲ. ಅವರು ಹಾಯಾಗಿ ಅಂಗಡಿಗಳನ್ನು ಸುತ್ತಾಡಿ ಕಡಲೆಕಾಯಿ ಖರೀದಿ ಮಾಡಿದ್ದಾರೆ.
For More Updates Join our WhatsApp Group :

