ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ಆಗಸ್ಟ್ 17ರ ವರೆಗೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಯೆಲ್ಲೋ ಅಲರ್ಟ್: ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ತುಮಕೂರು, ಬಾಗಲಕೋಟೆ, ಬೆಳಗಾವಿ, ಕಲಬುರಗಿ, ಬೀದರ್, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಅಲ್ಲದೆ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೆಂಗಳೂರು ನಗರ, ಚಾಮರಾಜನಗರ, ಗದಗ, ಧಾರವಾಡ, ರಾಮನಗರ ಹಾಗೂ ವಿಜಯನಗರ ಜಿಲ್ಲೆಗಳಲ್ಲಿಯೂ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಮಳೆ: ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಸಿದ್ದಾಪುರ, ಧರ್ಮಸ್ಥಳ, ತಿಪಟೂರು, ಮಹಾಲಿಂಗಪುರ, ಲೋಕಾಪುರ, ಮುದಗಲ್, ಕೃಷ್ಣರಾಜಪೇಟೆ, ಕಮ್ಮರಡಿ, ಕೆಆರ್ ನಗರ, ಹಿರಿಯೂರು, ಅಜ್ಜಂಪುರ, ಬಸವನ ಬಾಗೇವಾಡಿ, ಅಥಣಿ, ಆಲಮಟ್ಟಿ, ವಿಜಯಪುರ, ತರೀಕೆರೆ, ಟಿಜಿ ಹಳ್ಳಿ, ಶಿರಹಟ್ಟಿ, ರಬಕವಿ, ಮೈಸೂರು, ಕೋಲಾರ, ಜೇವರ್ಗಿ, ಜಯಪುರ, ಹುಕ್ಕೇರಿ, ಗುಬ್ಬಿ, ಚಿತ್ತಾಪುರ, ಚಿಕ್ಕೋಡಿ, ಚನ್ನರಾಯಪಟ್ಟಣ, ಚಾಮರಾಜನಗರ, ಭದ್ರಾವತಿ, ಬನವಾಸಿ, ಔರಾದ್, ಗೌರಿಬಿದನೂರು, ಅಫ್ಜಲ್ಪುರ, ತಾವರಗೇರಾ, ಕೆರೂರು, ಕೆಂಭಾವಿ, ಬೀಳಗಿ, ಹುನಗುಂದ, ಚಿಂಚೋಳಿ, ಹೊಸಕೋಟೆ, ಗಂಗಾವತಿ, ಬೆಂಗಳೂರು ನಗರ, ಗಂಗಾಪುರ, ಸಿಂದಗಿ, ಕೂಡಲಸಂಗಮ, ಹರಪನಹಳ್ಳಿ, ದೇವರಹಿಪ್ಪರಗಿ, ತಾಳಿಕೋಟೆ, ನಾಯಕನಹಟ್ಟಿ ಹಾಗೂ ನಾರಾಯಣಪುರದಲ್ಲಿ ಭಾನುವಾರ ಮಳೆ ಸುರಿದಿದೆ
ಬೆಂಗಳೂರಿನಲ್ಲಿ ಭಾನುವಾರ ಇಡೀ ದಿನ ಮಳೆ ಬಿದ್ದಿದೆ. ಇಂದೂ ಸಹ ಮೋಡ ಕವಿದ ವಾತಾವರಣವಿದೆ. ನಗರದಲ್ಲಿ 27.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹೆಚ್ಎಎಲ್ನಲ್ಲಿ 28.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 28.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
For More Updates Join our WhatsApp Group :