ವಾಡಿಕೆಗಿಂತ ಹೆಚ್ಚು ಮಳೆ : ಹಣದುಬ್ಬರ ಕಡಿಮೆ ಆಗುತ್ತಾ..?

ವಾಡಿಕೆಗಿಂತ ಹೆಚ್ಚು ಮಳೆ : ಹಣದುಬ್ಬರ ಕಡಿಮೆ ಆಗುತ್ತಾ..?

ನವದೆಹಲಿ : ಈ ವರ್ಷ ಭಾರತದಲ್ಲಿ ಉತ್ತಮ ಮಟ್ಟದ ಮಳೆಯಾಗಿದ್ದು ವಾಡಿಕೆಗಿಂತ ಶೇ 8ರಷ್ಟು ಹೆಚ್ಚು ಮುಂಗಾರು ಮಳೆಯಾಗಿದೆ ಎಂದು ವರದಿ ತಿಳಿಸಿದೆ

ಈ ಭಾರಿ ಉತ್ತಮ ಮಳೆಯಾಗಿರುವದರಿಂದ ತರಕಾರಿಗಳು ಮತ್ತು ಹಾಲಿನ ಸರಾಸರಿ ಚಿಲ್ಲರೆ ಬೆಲೆಗಳು ಕೂಡ ಕಡಿಮೆಯಾಗಿವೆ ಎನ್ನಲಾಗಿದೆ. ದೇಶಾದ್ಯಂತ ಬಿತ್ತನೆ ಬಹುತೇಕ ಪೂರ್ಣಗೊಂಡಿದ್ದು, ಈಗ ಕೊಯ್ಲಿನತ್ತ ಎಲ್ಲರ ಗಮನ ನೆಟ್ಟಿದೆ ಎಂದು ಎಂಕೆ ಗ್ಲೋಬಲ್ ಫೈನಾನ್ಷಿಯಲ್ ಸರ್ವೀಸಸ್ನ Indian Rainfall Tracker ವರದಿ ತಿಳಿಸಿದೆ.

ಒಟ್ಟು 109.2 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಇದು 2023 (ಸೆಪ್ಟೆಂಬರ್ 6 ರಂತೆ) ಶೇಕಡಾ 2 ರಷ್ಟು ಹೆಚ್ಚಾಗಿದೆ. 41.0 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಅಕ್ಕಿ, 12.6 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯಗಳು, 18.9 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ, ಒರಟು ಧಾನ್ಯಗಳು ಮತ್ತು 19.2 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳ ಬಿತ್ತನೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಒಟ್ಟಾರೆ ಬಿತ್ತನೆ ಪ್ರದೇಶವು ಸಾಮಾನ್ಯ ಬಿತ್ತನೆ ಪ್ರದೇಶದ ಶೇಕಡಾ 99 ರಷ್ಟಿದೆ, ಇದು 2023 ರಲ್ಲಿ ಇದೇ ಸಮಯದಲ್ಲಿ ಶೇಕಡಾ 98 ರಷ್ಟಿತ್ತು.

ವರದಿಯ ಪ್ರಕಾರ, ಆಹಾರ ಧಾನ್ಯಗಳು ಮತ್ತು ತರಕಾರಿಗಳ ಹೆಚ್ಚಿನ ಪೂರೈಕೆಯಿಂದಾಗಿ ಇತ್ತೀಚಿನ ವಾರಗಳಲ್ಲಿ ಅವುಗಳ ಬೆಲೆ ಕಡಿಮೆಯಾಗಿದೆ. ಆದರೆ ಸುಗ್ಗಿಯ ನಂತರ ಮಾರುಕಟ್ಟೆಗಳಿಗೆ ಇನ್ನೂ ಹೆಚ್ಚಿನ ಸರಕು ಪೂರೈಕೆ ಆಗುವವರೆಗೆ ಬೆಲೆಗಳು ಇದೇ ಮಟ್ಟದಲ್ಲಿ ಉಳಿಯುವ ನಿರೀಕ್ಷೆಯಿದೆ.

ಒಟ್ಟಾರೆ ಜಲಾನಯನ ಪ್ರದೇಶವಾರು ಜಲಾಶಯಗಳಲ್ಲಿನ ನೀರಿನ ಮಟ್ಟವು ಉತ್ತಮವಾಗಿದೆ ಮತ್ತು ದೀರ್ಘಕಾಲೀನ ಸರಾಸರಿ ಮತ್ತು ಕಳೆದ ವರ್ಷದ ಮಟ್ಟಕ್ಕಿಂತ ಹೆಚ್ಚಾಗಿದೆ. ಒಟ್ಟಾರೆಯಾಗಿ, ಕಳೆದ ವರ್ಷ ಆಗಿದ್ದ 684.6 ಮಿ.ಮೀ. ಮಳೆಗೆ ಹೋಲಿಸಿದರೆ ಈ ವರ್ಷ ಒಟ್ಟು 817.9 ಮಿ.ಮೀ. ಮಳೆಯಾಗಿದೆ.

Leave a Reply

Your email address will not be published. Required fields are marked *